Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಅಶ್ವಗಂಧ ಎಂದು ಹೇಳುತ್ತಾರೆ. ಅಶ್ವಗಂಧ ಕಾಫಿ ಅಶ್ವಗಂಧ ಯುಕ್ತ ಸಿರಪ್ ಅಶ್ವಗಂಧ ಯುಕ್ತ ಎಂದು ಪ್ರತಿಯೊಬ್ಬರೂ ಇದನ್ನು ಬಳಕೆ ಮಾಡುತ್ತಾರೆ ಇದನ್ನು ಪುರುಷರು ಹೆಚ್ಚಾಗಿ ಬಳಸುತ್ತಾರೆ ಆದರೆ ಮಹಿಳೆಯರು ಕೂಡ ಇದನ್ನು ಬಳಸಬಹುದು .ಎಂಬುದು ಎಲ್ಲರಿಗೂ ಪ್ರಶ್ನೆಯಾಗಿದೆ ಅಶ್ವಗಂಧ ಇದು ಎಲ್ಲಾ ನರದೌರ್ಬಲ್ಯಕ್ಕೆ ತುಂಬಾ ಒಳ್ಳೆಯದು ಯಾವುದಕ್ಕೆ ನರಗಳ ಸಮಸ್ಯೆಗೆ ಸಂಬಂಧಿಸಿದೆ ನೋವಿಗೆ ಇದು ಪರಿಹಾರ ಮಾಡುತ್ತದೆ. ಮಹಿಳೆಯರು ಕೂಡ ಈ ಸೊಂಟನೋವು ನರದೌರ್ಬಲ್ಯ ಬೆನ್ನು ನೋವು ಮುಂತಾದ ಸಮಸ್ಯೆಗಳಿಗೆ ಇದನ್ನ ಬಳಸುತ್ತಾರೆ ನರಗಳ ಹೊಡೆತ ಮತ್ತು ಸುಸ್ತಾಗುವುದು ಮುಂತಾದ ಸಮಸ್ಯೆಗಳಿಗೆ ಇದು ನಿವಾರಣೆ ಮಾಡುತ್ತದೆ.

ಅಶ್ವಗಂಧ ಪುಡಿಯನ್ನು ಪ್ರತಿನಿತ್ಯ ದಿನಕ್ಕೆರಡು ಬಾರಿ ಹಾಲಿನ ಜೊತೆ ಒಂದು ಚಮಚ ಹಾಕಿಕೊಂಡು ಕುಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ನಿಮ್ಮ ನರಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರುವುದಿಲ್ಲ ಆದರೆ ಇದನ್ನು ಊಟಕ್ಕೆ ಮುಂಚೆ ಕುಡಿಯಬೇಕು .ಮಹಿಳೆಯರಿಗೆ ನರಗಳ ಹೊಡೆತ ಮತ್ತು ಸಂಧಿವಾತ ಮುಂತಾದ ಸಮಸ್ಯೆಗಳು ಅಶ್ವಗಂಧ ಪುಡಿ ನಿವಾರಣೆ ಮಾಡುತ್ತದೆ ಇದು ಮಹಿಳೆಯರಿಗೂ ಕೂಡ ತುಂಬಾ ಉಪಯುಕ್ತವಾದ ಮನೆಮದ್ದು ಆಗಿದೆ ಆದ್ದರಿಂದ ಇದನ್ನು ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ನಿಮ್ಮ ನರದೌರ್ಬಲ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.