Sat. Dec 9th, 2023

ಸಾಮಾನ್ಯವಾಗಿ ಎಲ್ಲರೂ ಕೂದಲಿನ ಒಂದಲ್ಲ ಒಂದು ಸಮಸ್ಯೆಯಿಂದ ಪರದಾಡುತ್ತಾರೆ ಅದಕ್ಕಾಗಿ ಹಲವಾರು ರೀತಿಯ ದುಬಾರಿಯಾದ ಪ್ರಾಡೆಕ್ಟ್ ಗಳನ್ನು ಉಪಯೋಗಿಸುತ್ತಾರೆ ಮತ್ತು ಹಲವಾರು ಮನೆಮದ್ದು ಗಳನ್ನು ಸಹ ಉಪಯೋಗಿಸಿ ರುತ್ತಾರೆ ಆದರೆ ಇವತ್ತಿನ ಈ ಮನೆಮದ್ದನ್ನು ತಪ್ಪದೆ ಪ್ರತಿನಿತ್ಯ ಬಳಸುವುದರಿಂದ ಪೂರ್ತಿಯಾಗಿ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಇನ್ನು ನೀವು ಹೆಚ್ಚು ಇಷ್ಟಪಡುವಂತಹ ಉದ್ದವಾದ ದಪ್ಪವಾದ ಮೃದುವಾದ ಕೂದಲನ್ನ ಶೈನಿಂಗ್ ಆದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು ಈ ಅದ್ಭುತವಾದ ತಲೆ ಎಣ್ಣೆಯನ್ನು ತಯಾರಿಸುವುದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥಗಳು ಮೊದಲನೆಯದಾಗಿ ವಿಳೆದೆಲೆ ಇದರಲ್ಲಿ ಅನೇಕ ರೀತಿಯ ಔಷಧಿ ಗುಣಗಳಿವೆ.ಇದರಿಂದ ತಲೆ ಕಡಿತ ಡ್ಯಾಂಡ್ರಫ್ ಇವುಗಳನ್ನು ದೂರಮಾಡಿ ನಮ್ಮ ಕೂದಲನ್ನು ಬುಡದಿಂದಲೇ ಗಟ್ಟಿಗೊಳಿಸುತ್ತದೆ ಇಂತಹ ಔಷಧಿ ಗುಣವನ್ನು ಹೊಂದಿರುವ ಈ ವೀಳೆಯದೆಲೆಯನ್ನು ನಾನು ಐದರಿಂದ ಆರು ತೆಗೆದುಕೊಂಡಿದ್ದೇನೆ ನಂತರ ಎರಡನೆಯದಾಗಿ ನಮಗೆ ಬೇಕಾಗಿರುವುದು ದಾಸವಾಳದ ಎಲೆ ಇಲ್ಲಿ ನಾನು ಹದಿನೈದು ದಾಸವಾಳದ ಎಲೆಯನ್ನು ತೆಗೆದುಕೊಂಡಿದ್ದೇನೆ ನಮಗೆ ಗೊತ್ತಿರುವ ಹಾಗೆ ದಾಸವಾಳದ ಎಲೆ ಮತ್ತು ಹೂಗಳನ್ನು ಕೂದಲ ಪೋಷಣೆಗಾಗಿ ಬಳಸುತ್ತಾರೆ ಇವುಗಳಲ್ಲಿ ಅಮಿನೊ ಆಸಿಡ್ ಗಳು ಹೆಚ್ಚಾಗಿವೆ ನೀವು ನಿಮ್ಮ ಕೂದಲಿಗೆ ಪೋಷಣೆ ನೀಡಿ ಕೂದಲನ್ನು ಬುಡದಿಂದ ಗಟ್ಟಿಯಾಗಿ ಮಾಡುತ್ತದೆ ಮೂರನೆಯದಾಗಿ ನಾನಿಲ್ಲಿ ಕರಿಬೇವನ್ನು ತೆಗೆದುಕೊಂಡಿದ್ದೇನೆ ನಾನಿಲ್ಲಿ ಒಂದು ಮುಷ್ಟಿಯಷ್ಟು ಕರಿಬೇವನ್ನು ತೆಗೆದುಕೊಂಡಿದ್ದೇನೆ ಕರಿಬೇವಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿದೆ.

ಸತ್ತ ಕೂದಲಿನ ಕಿರು ಚೀಲಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ಹೊಸ ಕೂದಲು ಬರುವುದಕ್ಕೆ ಸಹಾಯ ಮಾಡುತ್ತದೆ ಇನ್ನು ಕರಿಬೇವಿನಲ್ಲಿ ಪ್ರೋಟೀನ್ ಬೀಟಾ ಕೆರೋಟಿನ್ ಅಂಶಗಳು ಇವೆ ಇದು ಕೂದಲು ಉದುರುವುದನ್ನು ಮತ್ತು ಕೂದಲು ಬೆಳ್ಳಗಾಗುವುದನ್ನು ಕಡಿಮೆ ಮಾಡಿ ಕೂದಲು ಉದ್ದವಾಗಿ ಬೆಳೆಯುವುದಕ್ಕೆ ಹೆಚ್ಚಿಸುತ್ತದೆ ನಂತರ ಕೊನೆಯದಾಗಿ ಬೇಕಾಗಿರುವುದು ಕೊಬ್ಬರಿಎಣ್ಣೆ ಪ್ಯೂರ್ ವಾಗಿರುವ ಯಾವುದಾದರೂ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡರು ನಡೆಯುತ್ತದೆ ಇವಾಗ ಅದ್ಭುತವಾದಂತಹ ತುಂಬಾ ಎಫೆಕ್ಟಿವ್ ಆದಂತಹ ಎಣ್ಣೆಯನ್ನು ಯಾವ ರೀತಿ ತಯಾರು ಮಾಡುವುದು ಎಂದು ನೋಡೋಣ ಬನ್ನಿ ಈ ಮೂರು ಎಲೆಗಳನ್ನು ನೀವು ಉಪಯೋಗಿಸುವ ಮೊದಲು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ನಂತರ ಉಪಯೋಗಿಸಬೇಕು ಇವಾಗ ಈ ಮೂರು ಎಲೆಗಳನ್ನು ಚಿಕ್ಕ ಚಿಕ್ಕ ಪಿಸಾಗಿ ಕಟ್ ಮಾಡಿಕೊಂಡಿದ್ದೇನೆ ನಂತರ ಒಂದು ಪಾತ್ರೆಯಲ್ಲಿ 250 ಗ್ರಾಂ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕುತ್ತಿದ್ದೇನೆ ಎಣ್ಣೆ ಸ್ವಲ್ಪ ಬಿಸಿಯಾದ ನಂತರ ನಾವು ಕಟ್ ಮಾಡಿಕೊಂಡಿರುವ ಎಲೆಗಳನ್ನು ಅದರೊಳಗೆ ಹಾಕಬೇಕು ಹಾಕಿದ ನಂತರ ಸಣ್ಣ ಉರಿಯಲ್ಲಿ ಚೆನ್ನಾಗಿ ಕಾಯಿಸಬೇಕು ಎಣ್ಣೆ ಬಣ್ಣ ಬದಲಾಗುವ ತನಕ ಸಣ್ಣ ಉರಿಯಲ್ಲಿ ಕುದಿಸಬೇಕು ನಂತರ ಅದನ್ನು ಸೋಸಿಕೊಂಡು ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಿ ಇದನ್ನು ಹೇಗೆ ಹಚ್ಚುವುದು ಎಂದರೆ ಒಂದು ಬಟ್ಟಲಿಗೆ ಹಾಕಿಕೊಂಡು ಕೂದಲ ಬುಡಕ್ಕೆ ಹಚ್ಚಬೇಕು ಹೀಗೆ ಮಾಡುವುದರಿಂದ ಕೂದಲು ಉದುರುವುದು ಡ್ಯಾಂಡ್ರಫ್ ಪ್ರತಿಯೊಂದು ಕಡಿಮೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.