Thu. Sep 21st, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ದೇಹದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಯಾವುದೆಂದರೆ ರೋಗನಿರೋಧಕ ಶಕ್ತಿ ಇಲ್ಲದಿ ದ್ದಾಗ ಸಾಕಷ್ಟು ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ದೇಹ ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಒಂದು ಮನೆ ಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ. ಮೊದಲಿಗೆ ಈ ಕಷಾಯವನ್ನು ಮಾಡಲು ಒಂದು ಬಾಣಲಿ ತೆಗೆದುಕೊಳ್ಳಬೇಕು ಅದಕ್ಕೆ ಒಂದು ಕಪ್ ದುನಿಯಾ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಇದರ ಜೊತೆಗೆ ಅರ್ಧ ಕಪ್ ಮೆಣಸು ಮತ್ತು ಜೀರಿಗೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹುರಿದುಕೊಳ್ಳಬೇಕು 1 ಟೇಬಲ್ ಸ್ಪೂನ್ ನಷ್ಟು ಲವಂಗವನ್ನು ಕೈಗೊಳ್ಳಬೇಕು. ಈ ರೀತಿ ಖಾರ ಪದಾರ್ಥಗಳನ್ನು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ನಂತರ ಇದಕ್ಕೆ ಐದರಿಂದ ಆರು ಏಲಕ್ಕಿಯನ್ನು ಹಾಕಿಕೊಳ್ಳಬೇಕು ಅರ್ಧ ಕಪ್ ಶುಂಠಿ ಪೌಡರ್ ಹಾಗೂ ಅರಿಶಿಣ ಪುಡಿ ಅರ್ಧ ಕಪ್ ನಷ್ಟು ತುಳಸಿ ಪುಡಿಯನ್ನು ಹಾಕಿಕೊಳ್ಳಬೇಕು ಚೆನ್ನಾಗಿ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಕೊಳ್ಳಬೇಕು ಅದಕ್ಕೆ ಒಂದು ಚಮಚ ಈ ಪುಡಿಯನ್ನು ಹಾಕಿ ಕೊಳ್ಳಬೇಕು ಚೆನ್ನಾಗಿ ಐದು ನಿಮಿ ಷಗಳ ಕಾಲ ಕುದಿಸಬೇಕು ನಂತರ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ ಇದನ್ನು ಸೋಸಿಕೊಳ್ಳಬೇಕು .ಈ ಕಷಾಯವನ್ನು ಬೆಳಗ್ಗೆ ಸಮಯದಲ್ಲಿ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಗಂಟಲು ನೋವು ಸಮಸ್ಯೆ ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ಯಾವುದೇ ತೊಂದರೆಯಾಗುವುದಿಲ್ಲ.