Thu. Sep 28th, 2023

ಈ ಒಂದು ಗಿಡದ ಎಲೆಯು ನಿಮ್ಮ ಪ್ರಾಣವನ್ನು ರಕ್ಷಿಸುವಂತಹ ರಕ್ಷಾಕವಚವಾಗಿದೆ…ತುಂಬೆ ಗಿಡ ಸಾಮಾನ್ಯವಾಗಿ ಒಂದು ಹೆಸರನ್ನು ಹಳ್ಳಿ ಪ್ರದೇಶದಲ್ಲಿ ಹೆಚ್ಚಾಗಿ ಬಳಸುತ್ತಾರೆ ಒಂದು ಗಿಡ ಹಳ್ಳಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಇದು ಬೆಳೆಯುತ್ತದೆ ಒದು ಹಲವಾರು ರೀತಿಯ ಔಷಧೀಯ ಅಂಶಗಳನ್ನು ಒಳಗೊಂಡಿದೆ. ಈ ಒಂದು ಗಿಡ ಮೂಲಿಕೆಯನ್ನು ಆಯುರ್ವೇದದಲ್ಲಿ ಕೂಡ ಬಳಸಲಾಗುತ್ತದೆ. ಮನುಷ್ಯನ ದೇಹಕ್ಕೆ ಉಪಯುಕ್ತವಾದ ಆರೋಗ್ಯಯುತವಾದ ಅಂಶವನ್ನು ಇದು ಒದಗಿಸಲಾಗುತ್ತದೆ. ಈ ಒಂದು ಗಿಡದ ಎಲೆ ಮತ್ತು ಹೂವಿನಲ್ಲಿ ಹೇರಳವಾದ ಔಷಧಿಯ ಪ್ರಮಾಣ ಇರುವುದರಿಂದ ಕಿವಿ ನೋವಿನ ಸಮಸ್ಯೆ, ಚರ್ಮದ ಸಮಸ್ಯೆ, ತಲೆ ನೋವು, ಇನ್ನೂ ಮುಂತಾದ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.


ಈ ತುಂಬೆ ಗಿಡದ ಸಸ್ಯದಿಂದ ಏನೆಲ್ಲಾ ಆರೋಗ್ಯಯುತವಾದ ಪ್ರಯೋಜನಗಳು ನಮಗೆ ದೊರೆಯುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಎಂದು ನಿಮಗೆ ತಿಳಿಸುತ್ತೇವೆ. ಈ ಒಂದು ಸಸ್ಯ ನಿಮಗೆ ಎಲ್ಲಾದರೂ ದೊರೆತರೆ ಅದರ ಉಪಯೋಗವನ್ನು ಸದುಪಯೋಗಪಡಿಸಿಕೊಂಡರೆ ಬಹಳ ಉತ್ತಮ. ಚರ್ಮದ ಸಮಸ್ಯೆ ಇದ್ದರೆ ತುಂಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ಅರೆದು ಚರ್ಮದ ಸಮಸ್ಯೆ ಇರುವ ಜಾಗಕ್ಕೆ ಅದನ್ನು ಹಚ್ಚಿಕೊಂಡು ಒಂದು ಗಂಟೆಗಳ ಕಾಲ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚಾಗಿ ತಲೆನೋವು ಮತ್ತು ಶೀತದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ. ಬಿಸಿ ನೀರಿಗೆ ತುಂಬೆ ಎಲೆ ಮತ್ತು ಅದರ ಹೂಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಆ ನೀರಿನ ಹಾವಿಯನ್ನು ವಾರದಲ್ಲಿ ಒಂದು ಬಾರಿ ತೆಗೆದುಕೊಳ್ಳಬೇಕು ಹೀಗೆ ಮಾಡುವುದರಿಂದ ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.