Thu. Sep 29th, 2022

ಇವತ್ತು ನಾನು ನಿಮಗೆ ತೋರಿಸುತ್ತಿರುವ ಅಂತಹ ಗಿಡ ಕತ್ತೆ ಸೊಪ್ಪಿನ ಗಿಡ ಈ ಕತ್ತೆ ಸೊಪ್ಪು ಮಲೆನಾಡಿನ ಜನಕ್ಕೆಲ್ಲಾ ತುಂಬಾ ಚೆನ್ನಾಗಿ ಗೊತ್ತಿದೆ ಯಾಕೆಂದರೆ ಮಲೆನಾಡಿನ ತೋಟಗಳಲ್ಲಿ ತುಂಬಾ ಬೆಳೆಯುತ್ತದೆ ನಮ್ಮ ಕರಾವಳಿ ಕಡೆಯಲ್ಲಿ ಸ್ವಲ್ಪ ಕಮ್ಮಿ ಅಂತಾನೆ ಹೇಳಬಹುದು ಇದರ ಉಪಯೋಗ ತುಂಬಾ ಜನಕ್ಕೆ ಗೊತ್ತಿಲ್ಲ ಇದನ್ನ ಏನು ಮಾಡುತ್ತಾರೆ ಅಂತ ಅಂದರೆ ಇದನ್ನು ಕಳೆಗಿಡ ಅಂತ ಕಿತ್ತು ಹಾಕುತ್ತಾ ಇದ್ದಾರೆ ಕಳೆಯ ಔಷಧಿಯ ಳನ್ನು ಹೊಡೆದು ಸಾಯುತ್ತಿದ್ದಾರೆ ಆದರೆ ಈ ಗಿಡದಿಂದ ನಮಗೆ ತುಂಬಾ ಉಪಯೋಗ ಇದೆ ಹಾಗೆ ಕೆಲವು ರೀತಿಯ ಅಡ್ಡ ಪರಿಣಾಮ ಕೂಡ ಆಗುತ್ತದೆ. ನಾನು ಹೇಳಿದ್ದು ಇದೇ ಗಿಡ ಕತ್ತೆ ಸೊಪ್ಪು ಅಂತ ತುಂಬಾ ಜನ ಇದನ್ನು ಕಳೆಗಿಡ ಅಂತ ಹೇಳಿಕೊಂಡಿದ್ದಾರೆ ಈ ಗಿಡದಲ್ಲಿ ಈ ರೀತಿಯಾಗಿ ಕಾಯಿ ಬಿಡುತ್ತದೆ ನೋಡಿ ಇದರ ಕಾಯಿ ಕಪ್ಪು ಬಣ್ಣದಲ್ಲಿ ಇರುತ್ತದೆ ಗಿಡ


ಈ ರೀತಿಯಾಗಿರುತ್ತದೆ ಚಿಕ್ಕ-ಚಿಕ್ಕ ಹೂವು ಬಿಡುತ್ತದೆ ನೀವು ಗಿಡವನ್ನು ಸರಿಯಾಗಿ ನೋಡಿಕೊಳ್ಳಿ ಆಮೇಲೆ ಅದರ ಬಗ್ಗೆ ವಿವರಿಸುತ್ತೇನೆ ಇದಕ್ಕೆ ಕತ್ತೆ ಸೊಪ್ಪು ಗಣಿಕೆ ಗಿಡ ಹಾಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ ಹೆಚ್ಚಾಗಿದ್ದನ್ನು ಕತ್ತೆ ಸೊಪ್ಪು ಅಂತಾನೆ ಕರೆಯುತ್ತಾರೆ ಇದರಲ್ಲಿ ಪಲ್ಯ ಮಾಡಬಹುದು ತಂಬುಳಿ ಮಾಡಬಹುದು ಎಲೆ ಸ್ವಲ್ಪ ಕಹಿ ಇರುತ್ತದೆ ಆದರೂ ಸ್ವಲ್ಪ ಕಾರ ಜಾಸ್ತಿ ಹಾಕಿದರೆ ಕಹಿ ಗೊತ್ತಾಗುವುದಿಲ್ಲ.ಬೇರೆ ದೇಶದಲ್ಲಿ ಕೂಡ ಇದರ ಉಪಯೋಗ ತುಂಬಾ ಇದೆ ಹೊರದೇಶದಲ್ಲಿ ಸಹ ಇದನ್ನು ಉಪಯೋಗಿಸುತ್ತಿದ್ದಾರೆ ಇದರ ವೈಜ್ಞಾನಿಕ ಹೆಸರು ಸುವರ್ಣ ನಿಗ್ರಂ ಇದು ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ ಈ ಗಿಡದಲ್ಲಿ ಎರಡರಿಂದ ಮೂರು ಜಾತಿಯ ಗಿಡಗಳಿವೆ ಎಲ್ಲವೂ ತಿನ್ನುವುದಕ್ಕೆ ಸೂಕ್ತ ಅಲ್ಲ ಬಿಳಿ ಹೂವು ಈ ರೀತಿ ಗೊಂಚಲು ಕಪ್ಪು ಹಣ್ಣು ಬಿಡುತ್ತದೆ ಇದನ್ನು ನಾವು ಉಪಯೋಗ ಮಾಡಬಹುದು ಮಲೆನಾಡಿನ ಕಡೆಗಳಲ್ಲಿ ಇದನ್ನು ಒಂದು ವಾಣಿಜ್ಯ ಬೆಳೆಯಾಗಿ ಬೇಸಾಯ ಮಾಡುತ್ತಿದ್ದಾರೆ ಈ ಗಿಡ ನಮ್ಮ ದೇಹದ ಆರೋಗ್ಯಕ್ಕೆ ಯಾವ ರೀತಿ ಒಳ್ಳೆಯದು ಅಂತ ಅಂದರೆ ಈ ಗಿಡದ ಹಣ್ಣು ನಮ್ಮ ದೇಹಕ್ಕೆ ತಂಪು ಮತ್ತು ನಮ್ಮ ಬಾಯಲ್ಲಿರುವ ಹುಣ್ಣು ವಾಸಿಯಾಗುತ್ತದೆ ಈ ಸೊಪ್ಪಿನಿಂದ ಪಲ್ಯ ಮಾಡಿ ಅಥವಾ ತಂಬುಳಿ ಮಾಡಿ ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ಇದರಲ್ಲಿ ಆಂಟಿಆಕ್ಸಿಡೆಂಟ್ ಇದೆ ಇದರಿಂದ ನಮ್ಮ ನೋವು ನಿವಾರಣೆಯಾಗುತ್ತದೆ.