Thu. Jun 30th, 2022

ಕೂಲ್ ಸ್ಪೆಷಲ್ ಲೈ ಮ್ ಜ್ಯೂಸ್ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಇಂತಹ ಜ್ಯೂಸ್ ಕುಡಿದರೆ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ ನಂತರ ಬೇಸಿಗೆ ಕಾಲದಲ್ಲಿ ಈ ರೀತಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಕಡಿಮೆಯಾಗುತ್ತದೆ ಹಾಗಾದರೆ ಹೇಗೆ ಈ ಜ್ಯೂಸ್ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಬೇಕಾಗಿರುವಂತಹ ಸಾಮಗ್ರಿಗಳು ಮೆಣಸಿನಕಾಳು ನಂತರ ಜೀರಿಗೆ ಹಾಗೂ ಸೋಂಪಿನ ಕಾಳು ಶುಂಠಿ ಏಲಕ್ಕಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಮತ್ತು ಐಸ್ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು ಜೀರಿಗೆ ಮತ್ತು ಕಾಳು ಮೆಣಸು ಹಾಗೂ ಸೋಂಪು ಮೂರನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಐದು ಲೋಟ ನೀರನ್ನು ಹಾಕಿ ನಂತರ ನಿಂಬೆ ರಸವನ್ನು ಹಾಕಿ ಅದಾದ ಮೇಲೆ ಜೀರಿಗೆ ಸೋಂಪು ಹಾಗೂ ಕಾಳುಮೆಣಸು ನಂತರ ಶುಂಠಿ ಏಲಕ್ಕಿ ಹಾಗೂ ಸ್ವಲ್ಪ ಸಕ್ಕರೆ ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ನಂತರ ಒಂದು ಒಂದು ಲೋಟಕ್ಕೆ ಸೋಸಿಕೊಂಡು ಅದಕ್ಕೆ ಸ್ವಲ್ಪ ಐಸ್ ಕ್ಯೂಬ್ ಹಾಕಿ ಕುಡೀರಿ ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮ್ಮ ದೇಹ ಕೂಡ ತುಂಬಾ ತಂಪಾಗಿರುತ್ತದೆ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿನೋಡಿ ಹೇಗಿತ್ತು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ.