Tue. Aug 9th, 2022

ನಮ್ಮ ನೆರೆಯ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ವಾಡಪಲ್ಲಿ ಗ್ರಾಮದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ಆಲಯ ತೆಲಂಗಾಣ ರಾ ಜ್ಯದ ನಲಗೊಂಡ ಜಿಲ್ಲೆಯಲ್ಲಿರುವ ವಾಡಪಲ್ಲಿ ಎಂಬುವ ಸ್ಥಳದಲ್ಲಿ ಕೃಷ್ಣ ಹಾಗೂ ಮೂಸಿ ಎಂಬ ಎರಡು ನದಿಗಳ ಸಂಗಮವಾಗುತ್ತದೆ. ಈ ಸಂಗಮ ಸ್ಥಳದಲ್ಲಿ ಮಹಿಮಾನ್ವಿತ ಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯವಿದೆ ಈ ದೇವಾಲಯವು ಶ್ರೀ ಕೃಷ್ಣ ದೇವರಾಯ ಅರ ಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡ ಲಾಗಿದೆ ಎನ್ನಲಾಗು ತ್ತದೆ. ಪುರಾಣ ಗ್ರಂಥಗಳ ಪ್ರಕಾರ ವ್ಯಾಸ ಮಹರ್ಷಿಗಳು ಎರಡು ನದಿಗಳ ಸಂಗಮ ಸ್ಥಳಗಳಲ್ಲಿ ಮಹಾವಿಷ್ಣುವನ್ನು ಕುರಿತು ಘೋರ ತಪಸ್ಸನ್ನು ಮಾಡಿದ್ದಾರೆ.

ಅವರ ತಪಸ್ಸಿಗೆ ಒಲಿದ ಶ್ರೀಮಹಾವಿಷ್ಣುವು ಉಗ್ರನರಸಿಂಹ ರೂಪದಲ್ಲಿ ಪ್ರತ್ಯಕ್ಷ ಗೊಳ್ಳುತ್ತಾರೆ ಆಗಷ್ಟೇ ಹಿರಣ್ಯಕಶ್ಯಪ ನನ್ನು ಕೊಂದು ಇನ್ನು ಕೋಪ ಶಮನ ಗೋಳ ದ್ದರಿಂದ ನಿಯಂತ್ರಿತ ಕೋಪದಿಂದ ನಿಟ್ಟುಸಿರು ಬಿಡುತ್ತಾರೆ ಆಗ ವ್ಯಾಸ ಮಹರ್ಷಿಗಳು ತಮಗೆ ಯಾವ ರೂಪದಲ್ಲಿ ದರ್ಶನ ನೀಡಿದ್ದಾರೆ ಅದೇ ರೂಪದಲ್ಲಿ ಕೃಷ್ಣ ಮತ್ತು ಮೂಸಿ ನದಿಯ ತೀರದಲ್ಲಿ ನೆಲೆಸಿ ಭಕ್ತರನ್ನು ಸಲಹಾ ಬೇಕೆಂದು ಕೇಳಿಕೊಳ್ಳುತ್ತಾರೆ ಇದಕ್ಕೆ ಒಪ್ಪಿದ ಶ್ರೀ ನರಸಿಂಹಸ್ವಾಮಿ ಯು ಅದೇನು ಗ್ರಹದಿಂದ ಜೋರಾಗಿ ಉಸಿರಾಡುವ ರೂಪದಲ್ಲಿಯೇ ಅದೇ ಸ್ಥಳದಲ್ಲಿ ನೆಲೆ ನಿಲ್ಲುತ್ತಾರೆ.

ಈ ಕಥೆಗೆ ಪುಷ್ಟಿ ನೀಡುವಂತೆ ಈಗಲೂ ಸಹ ವಾಡೆಪಲ್ಲಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಆಲಯದಲ್ಲಿ ಇರುವ ಶ್ರೀ ನರಸಿಂಹಸ್ವಾಮಿ ವಿಗ್ರಹವು ಉಸಿರಾಡುತ್ತಿದೆ ತಮಗೆ ಇದನ್ನು ನಂಬಲು ಕಷ್ಟವೆನಿಸಿದರೂ ಇದು ಅಕ್ಷರ ಸಹ ನಿಜ ನರಸಿಂಹಸ್ವಾಮಿಯ ವಿಗ್ರಹದ ಎದುರು ಎರಡು ದೀಪಗಳನ್ನು ಜೋಡಿಸಲಾಗಿದೆ ಒಂದು ದೀಪವನ್ನು ನರಸಿಂಹ ಸ್ವಾಮಿಯ ಎದೆಯ ಮುಂದೆಯೂ ಒಂದನ್ನು ಮುಖದ ಮುಂದೆಯೂ ಜೋಡಿಸಲಾಗಿದೆ ಸ್ವಾಮಿಯ ಮುಖದ ಎದುರು ಇರುವ ದೀಪವು ಕದಲುತ್ತದೆ ಆದರೆ ಎದೆಯ ಮುಂದಿರುವ ದೀಪ ಸ್ಥಿರವಾಗಿರುತ್ತದೆ ಸ್ವಾಮಿಯ ಮುಖದ ಮುಂದೆ ಇರುವ ದೀಪ ಅಲುಗಾಡಲು ಸ್ವಾಮಿ ಉಸಿರಾಡುವುದೇ ಕಾರಣ ಎಂದು ಇಲ್ಲಿಯ ಸ್ಥಳೀಯರು ನಂಬುತ್ತಾರೆ.