Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಅದರಲ್ಲಿ ಬೆನ್ನುನೋವು ಸಮಸ್ಯೆ ಮತ್ತು ಮೂಳೆಗಳ ಸಮಸ್ಯೆ ನರಗಳ ಸಮಸ್ಯೆ ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ಜನರು ಬಳಲುತ್ತಾರೆ. ಬೆನ್ನುನೋವಿಗೆ ಸಾಕಷ್ಟು ಕಾರಣಗಳಿವೆ ಅದರಲ್ಲಿ ಮೊದಲನೆಯದು ಬೆನ್ನಿನ ಮೇಲೆ ಮೇಲೆ ಜಾಸ್ತಿ ಒತ್ತಡ ಕೊಡುವುದರಿಂದ ಬೆನ್ನು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೂ ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕೆಲಸ ಮಾಡಿರುವುದರಿಂದ ಬೆನ್ನು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದರಿಂದ ಈ ರೀತಿ ಸಮಸ್ಯೆಗಳು ಕಾಣಿಸಿಕೊ ಳ್ಳುತ್ತದೆ .ಆದ್ದರಿಂದ ಪ್ರತಿಯೊಬ್ಬರು ತುಂಬಾ ಜೋಪಾನದಿಂದ ನಿಧಾನ ವಾಗಿ ಕೆಲಸ ಮಾಡಬೇಕು. ಹೆಚ್ಚು ಭಾರ ಇರುವ ವಸ್ತುಗಳನ್ನು ಎತ್ತಬಾರದು ಇದನ್ನ ಕಡಿಮೆ ಮಾಡಲು ಒಂದು ಮನೆಮದ್ದು ಇದೆ ಇದರಿಂದ ಸಾಕಷ್ಟು ಕಡಿಮೆಯಾಗುತ್ತದೆ. ಮನೆಮದ್ದು ತುಂಬಾ ಉತ್ತಮವಾಗಿದೆ ಇನ್ನು ಗ್ಯಾಸ್ಟಿಕ್ ಸಮಸ್ಯೆ ಇರುವವರಿಗೆ ಈ ಸಮಸ್ಯೆ ಗಳು ಉಂಟಾಗುತ್ತದೆ .ಆದ್ದರಿಂದ ಮೊದಲು ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಮಾಡಿಕೊಳ್ಳಿ ಆಗ ನಿಮಗೆ ಬೆನ್ನುನೋವು ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರು ಉಪ್ಪನ್ನು ಕಡಿಮೆ ತಿನ್ನಿ ಆಗ

ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.ಆ ಮನೆ ಮದ್ದು ಯಾವುದು ಎಂದರೆ ಬಿಳಿ ಎಳ್ಳಿನ ಹಾಲು ಇದು ಹೇಗೆ ತಯಾರು ಮಾಡುವುದು ಎಂದರೆ ಒಂದು ಕಪ್ ಬಿಳಿ ಎಳ್ಳನ್ನು ತೆಗೆದುಕೊಂಡು ಮೂರು ಲೋಟ ನೀರನ್ನು ಹಾಕಿ ಒಂದು ರಾತ್ರಿ ನೆನೆಸಬೇಕು. ನಂತರ ನೆನೆಸಿದ ಎಳ್ಳು ಅನ್ನು ಮಿಕ್ಸಿಯಲ್ಲಿ ಹಾಕಿ ಅದರ ಜೊತೆಗೆ ಕರ್ಜೂರವನ್ನು ಬೆರೆಸಿ ಮಿಕ್ಸಿಯಲ್ಲಿ ರುಬಿ ಕೊಳ್ಳಬೇ ಕು. ನಂತರ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಸೋಸಿ ಕೊಳ್ಳಬೇಕು. ಅದರಲ್ಲಿ ಒಂದು ಲೋಟದಿಂದ ಎರಡು ಲೋಟ ಬಿಳಿ ಎಳ್ಳಿನ ಹಾಲು ಸಿಗುತ್ತದೆ ನಂತರ ಸ್ವಲ್ಪ ತವ ಮೇಲೆ ಹಾಲನ್ನು ಇಟ್ಟು ಸ್ವಲ್ಪ ಬಿಸಿ ಮಾಡಬೇಕು. ನಂತರ ಇದನ್ನು ವಾರದಲ್ಲಿ ಒಂದು ಬಾರಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಬೆನ್ನುನೋವು ಸಮಸ್ಯೆಗೆ ಕಾಣಿಸಿಕೊಳ್ಳುವುದಿಲ್ಲ .ಬೆಳಗ್ಗೆ ಖಾಲಿ ಹೊಟ್ಟೆ ಇದನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.