Fri. Sep 29th, 2023

ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ.
ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ಇಂದು ಇತರರ ಮಾತುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಒಂದಿಷ್ಟು ಕಷ್ಟವಾಗುತ್ತದೆ. ವಿಶೇಷವಾಗಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ತಪ್ಪುಗ್ರಹಿಕೆ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ. ಸ್ವತಹ ನಿಮ್ಮ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.

ವೃಷಭ ರಾಶಿ:- ವೈವಾಹಿಕ ಸಮಸ್ಯೆಗಳು ಬಹಳ ಸೂಕ್ಷ್ಮವಾಗಿ ಪರಿಹರಿಸಲು ಪ್ರಯತ್ನಿಸಿ. ಇಂದು ಒತ್ತಡದ ಸಂದರ್ಭಗಳನ್ನು ಎದುರಿಸ ಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಇಂದು ವಿವಾದವನ್ನು ಹೊಂದಬಹುದು. ನಿಮ್ಮ ನಡುವಿನ ಸಂಬಂಧ ಹಾನಿಯಾಗುವ ಸಾಧ್ಯತೆ ಇದೆ.

ಮಿಥುನ ರಾಶಿ:- ಸಮಸ್ಯೆಗಳನ್ನು ಎದುರಿಸಲು ಸ್ನೇಹಿತರಿಂದ ಸಹಾಯವನ್ನು ಪಡೆಯುತ್ತೀರಿ. ಹಿಂದಿನ ದುಃಖಗಳನ್ನು ನೆನಪಿಸಿ ಕೊಳ್ಳುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಏಕೆಂದರೆ ಅದು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೆಚ್ಚುವರಿ ಹಣವನ್ನು ಸುರಕ್ಷಿತ ಸ್ಥಳದಲ್ಲಿರಿಸಿ.

ಕಟಕ ರಾಶಿ:- ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿದೆ. ಮಂಗಳ ಕಾರ್ಯದ ಚಿಂತನೆಯನ್ನು ನಡೆಯಬಹುದು. ಆಗಾಗ ಶಾರೀರಿಕ ತೊಂದರೆಗಳನ್ನು ಅನುಭವಿಸಿ ಯಾತನೆ ಪಡುವಿರಿ ನೀವು ಕಚೇರಿಯಲ್ಲಿ ಹೊಸ ಯೋಜನೆಯನ್ನು ಪಡೆಯಬಹುದು. ನೀವು ಮಾಡುತ್ತಿರುವ ಕೆಲಸ ಅಥವಾ ಉದ್ಯೋಗ ಯಶಸ್ವಿಯಾಗಲು ದೇವಾಲಯಕ್ಕೆ ಹೋಗಿ ಕರ್ಪೂರವನ್ನು ದಾನ ಮಾಡಿ.

ಸಿಂಹ ರಾಶಿ:- ವೃತ್ತಿ ರಂಗದಲ್ಲಿ ನಿಮ್ಮ ಕಾರ್ಯವೈಕರಿ ಸರಾಗವಾಗಿ ನಡೆಯಲಿದೆ. ಸಂಸಾರದಲ್ಲಿ ಮನಸ್ಸಿಗೆ ಸಂತೋಷ ನೀಡುವ ಘಟನೆಗಳು ನಡೆಯಲಿವೆ. ಕೆಲವೊಂದು ಮೂಲಗಳಿಂದ ಉತ್ತಮ ಆದಾಯವನ್ನು ನೀವು ನಿರೀಕ್ಷಿಸಬಹುದು. ಅನಿರೀಕ್ಷಿತ ಹಣಗಳಿಸುವ ಸಾಧ್ಯತೆ ಕೂಡ ಇಂದು ಇದೆ.

ಕನ್ಯಾ ರಾಶಿ:- ಆಗಾಶ ಒಂದಿಷ್ಟು ತೊಂದರೆಗಳು ಕಂಡು ಬಂದರು ತಾಳ್ಮೆ ಸಮಾಧಾನದಿಂದ ಮುಂದೆ ಹೋಗಿ ಕಾರ್ಯಕ್ಷೇತ್ರದಲ್ಲಿ ಮುಖ್ಯ ಗುರಿಯನ್ನು ಸೂಕ್ತ ಸಮಯದಲ್ಲಿ ತಲುಪುತ್ತೀರಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ, ಮಕ್ಕಳಿಗೆ ಸಂತಸವಿದೆ. ಹೊಸ ಜನರೊಂದಿಗೆ ಸ್ನೇಹ ಬೆಳೆಸುವ ಸಾಧ್ಯತೆ ಇದೆ.

ತುಲಾ ರಾಶಿ:- ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗಳ ಮಾಡದೆ ಮಾತುಕತೆಯಿಂದ ಮುಂದುವರೆದರೆ ಒಳ್ಳೆಯದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕುಶವಾಗಿ ಪರಿ ಶೀಲಿಸಿ. ದೂರದ ಊರಿನಿಂದ ಬರುವ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನಗಳ ಸಮಸ್ಯೆ ಪರಿಹಾರವಾಗುವ ಎಲ್ಲಾ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ:- ವೃತ್ತಿಯಲ್ಲಿ ಬೇಸರ ಉಂಟಾಗುವುದು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುತ್ತದೆ. ಆಗಂತ ಸದ್ಯದ ವೃತ್ತಿಗೆ ರಾಜೀನಾಮೆ ನೀಡುವುದು ಸರಿಯಲ್ಲ. ಇರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋದರೆ ಒಳ್ಳೆಯದು. ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ.

ಧನಸ್ಸು ರಾಶಿ:- ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬರ ಬೇಕಾಗಬಹುದು. ಇಂದು ನೀವು ಸ್ವಲ್ಪ ನಿರಾಶೆ ಮತ್ತು ದುಃಖ ಅನುಭವಿಸುವಿರಿ. ವ್ಯಾಪಾರ ಕ್ಷೇತ್ರದಿಂದ ಬರುವ ಅವಕಾಶವನ್ನು ಕೈಯಿಂದ ಹೋಗಲು ಬಿಡಬೇಡಿ. ಇದರ ಲಾಭವನ್ನು ಪಡೆಯಲು ನೀವು ಶೀಘ್ರವೇ ಒಂದು ನಿರ್ಧಾರ ತೆಗೆದುಕೊಳ್ಳಿ.

ಮಕರ ರಾಶಿ:- ಕೈಯಲ್ಲಿ ಬೇಕಾದಷ್ಟು ಹಣ ಇದೆ ಎಂದು ಹಳೆಯ ದಾರಿ ಹಿಡಿಯಬೇಡಿ. ಉತ್ತಮ ಸ್ನೇಹಿತರ ಸಹವಾಸವನ್ನು ಮಾಡಿ ಮನಸ್ಸಿಗೆ ದುಗುಡ ಇದ್ದಿದ್ದೆ, ಆತ್ಮೀಯರ ಸಹಕಾರದಿಂದ ಅಂತಹ ಕಷ್ಟದಿಂದ ಪಾರಾಗುತ್ತೀರಿ. ಆದಾಯ ಹೆಚ್ಚಾಗಲಿದೆ. ಇಂದು ನಿಮ್ಮ ಮನಸ್ಸಿಗೆ ಹೊಸ ಆಲೋಚನೆಗಳು ಬರಲಿವೆ.

ಕುಂಭ ರಾಶಿ:- ನಿಮ್ಮ ಕೆಲಸವನ್ನು ಇತರರ ವೃತ್ತಿಗೆ ಹೋಲಿಸಿ ಕೀಳರಿಮೆ ಬೆಳೆಸಿಕೊಳ್ಳಬೇಡಿ. ನಿಮಗೆ ದೇವರ ಕೃಪೆ ಇದೆ. ಹಿಂದೆ ದೂರವಾಗಿದ್ದ ಬಂಧುಗಳು ನಿಮ್ಮ ನಂಟು ಬೆಳೆಸಲು ಬರುತ್ತಾರೆ. ಜೀವನದಲ್ಲಿ ಉತ್ಸಾಹ ಮೂಡುತ್ತದೆ, ಇಂದು ವ್ಯವಹಾರಕ್ಕೆ ಉತ್ತಮ ದಿನವಾಗಿದೆ.

ಮೀನ ರಾಶಿ:- ಗುರು ಹಿರಿಯರು ಮತ್ತು ಬಂಧುಗಳಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ನೆಮ್ಮದಿಯ ವಾತಾವರಣ ಇರುತ್ತದೆ. ಇಡೀ ದಿನ ಉಲ್ಲಾಸದಿಂದ ಇರುತ್ತೀರಿ ಮಕ್ಕಳು ಸಂತೋಷವಾಗಿರುತ್ತಾರೆ ಬರಬೇಕಾದ ಬಾಕಿ ಹಣ ನಿಮ್ಮ ಕೈಸೇರುವ ಎಲ್ಲಾ ಸಾಧ್ಯತೆಗಳು ಇದೆ.