Fri. Mar 1st, 2024

ಈ ಲಕ್ಷಣಗಳು ನಿಮ್ಮಲ್ಲಿಯೂ ಇದ್ದರೆ ಎಚ್ಚರವಹಿಸಿ, ವಿಟಮಿನ್ ಬಿ12 ಕೊರತೆ ಇದ್ದರೆ ಹೀಗೆ ಆಗುತ್ತದೆ ನೋಡಿ…

ಮಲಗಿ ಎದ್ದ ತಕ್ಷಣ ನಿಮ್ಮ ಎರಡು ಭುಜಗಳು ನಿಮಗೆ ನೋವು ನೋಡುತ್ತಿದ್ದರೆ ಇದನ್ನು ನೀವು ಗಮನಿಸಲೇಬೇಕು ಅಷ್ಟಕ್ಕೂ ಈ ರೀತಿ ನೋವುಗಳು ಯಾಕೆ ಬರುತ್ತದೆ ಗೊತ್ತಾ. ಭುಜಗಳು ನೋವಾಗುವುದು, ಮಾಂಸಖಂಡಗಳು ಹಿಡಿದಂತೆ ಆಗುವುದು, ಸ್ವಲ್ಪ ನಕ್ಕರು ಕೂಡ ಹೊಟ್ಟೆಯಲ್ಲಿ ಹಿಡಿದುಕೊಳ್ಳುವಂತೆ ಆಗುವುದು, ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋಗುವುದು, ವಸ್ತುವನ್ನು ಇಟ್ಟು ಅದನ್ನು ಮರೆತು ಬೇರೊಂದು ಕಡೆ ವಸ್ತುವನ್ನು ಹುಡುಕುವುದು, ಈ ರೀತಿಯಾದಂತಹ ತೊಂದರೆಗಳನ್ನು ನೀವು ಅನುಭವಿಸುತ್ತ ಇರಬಹುದು. ಮಲಬದ್ಧತೆ ಸಮಸ್ಯೆ ಇರುವುದು, ರಕ್ತದಲ್ಲಿ ಕೆಂಪು ರಕ್ತಕಣಗಳು ಉತ್ಪತ್ತಿ ಕಡಿಮೆಯಾಗುವುದು, ಇದನ್ನು ವಿಟಮಿನ್ ಬಿ12 ಲಕ್ಷಣಗಳು ಎಂದು ಕರೆಯಲಾಗುತ್ತದೆ. ನಿಮ್ಮ ದೇಹದಲ್ಲಿ ಕೂಡ ಈ ಲಕ್ಷಣಗಳು ಕಂಡುಬರುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್-ಬಿ12 ಎಂಬ ಅಂಶ ಕಡಿಮೆಯಾಗಿದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.

ನಮ್ಮ ದೊಡ್ಡ ಕರುಳಿನಲ್ಲಿ ಕೆಲವೊಂದಷ್ಟು ಬ್ಯಾಕ್ಟೀರಿಯಾಗಳು ಇರುತ್ತವೆ ಈ ಬ್ಯಾಕ್ಟೀರಿಯಗಳು ನಾವು ತಿಂದ ಆಹಾರವನ್ನು ಸೇವಿಸಿ ಅದರ ಟಾಕ್ಸಿನ್ ಅನ್ನು ಬಿಡುತ್ತದೆ. ಈ ಒಂದು ವಿಟಮಿನ್ ನನ್ನೇ ನಾವು ವಿಟಮಿನ್ ಬಿ12 ಎಂದು ಕರೆಯುತ್ತೇವೆ. ಕೆಲವು ಕಾರಣದಿಂದಾಗಿ ಬ್ಯಾಕ್ಟೀರಿಯಗಳು ಈ ರೀತಿಯಾದಂತಹ ಚಲನವಲನಗಳನ್ನು ಮಾಡುವುದನ್ನು ನಿಲ್ಲಿಸುತ್ತದೆ. ಆಗ ನಮ್ಮ ದೇಹದಲ್ಲಿ ವಿಟಮಿನ್ ಗಳ ಕೊರತೆ ಉಂಟಾಗುತ್ತದೆ ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ನಮ್ಮ ಮುಖದ ಬಣ್ಣವು ಬಿಳಿ ಬಣ್ಣಕ್ಕೆ ತಿರುಗುತ್ತದೆ, ಅಷ್ಟೇ ಅಲ್ಲದೆ ಮುಖದಲ್ಲಿ ಕಾಂತಿ ಇರುವುದಿಲ್ಲ, ಹಸಿವು ಆಗದೆ ಇರುವುದು, ನರಗಳಲ್ಲಿ ದೌರ್ಬಲ್ಯ ಉಂಟಾಗುವುದು, ಕೈ ಜುವು ಹಿಡಿಯೋದು ಈ ರೀತಿ ನಾನ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇನ್ನೂ ವಿಟಮಿನ್ ಬಿ12 ಎಂಬ ಅಂಶ ನಮ್ಮ ದೇಹದಲ್ಲಿ ಇದ್ದರೆ ಮಾತ್ರ ಕೆಂಪು ರಕ್ತಕಣಗಳು ಉತ್ಪತ್ತಿಯಾಗುವುದಕ್ಕೆ ಇದು ಸಹಾಯ ಮಾಡುತ್ತದೆ.