Fri. Sep 29th, 2023

ಕೊರೋನಾ ವೈರಸ್ ನಿಂದ ದೂರ ಇರಬೇಕು ಮತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿ ಮಾಡಿಕೊಳ್ಳಬೇಕು ಅಂದರೆ ನಾವು ಹೇಳುವಂತಹ ಈ ಕಷಾಯವನ್ನು ಮಾಡಿ ಕುಡಿಯಿರಿ ಆಗಾದರೆ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಬೇಕಾಗಿರುವಂತಹ ಸಾಮಾಗ್ರಿಗಳು ಅರಿಶಿಣದ ಕೊಂಬು ಕೊತ್ತಂಬರಿ ಬೀಜ ಮೆಂತ್ಯ ಕಾಳು ಜೀರಿಗೆ ನಂತರ ಶುಂಠಿ ಏಲಕ್ಕಿ ಚೆಕ್ಕೆ ಲವಂಗ ಕಾಳುಮೆಣಸು ಬೆಲ್ಲ ಮತ್ತು ತುಪ್ಪ ಹಾಲು ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪವನ್ನು ಹಾಕಿ ಕೊತ್ತಂಬರಿ ಬೀಜ ಜೀರಿಗೆ ಮೆಂತೆ ಕಾಳು ಚೆಕ್ಕೆ ಏಲಕ್ಕಿ ಮತ್ತು ಲವಂಗ ಕಾಳುಮೆಣಸು ಅರಿಶಿಣದ ಕೊಂಬು ಎಲ್ಲವನ್ನು ಶುಂಠಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ನಂತರ ಒಂದು ಮಿಕ್ಸಿ ಜಾರ್ ಒಳಗಡೆ ಹಾಕಿ ಪುಡಿ ಮಾಡಿಕೊಳ್ಳಬೇಕು ಅದಾದ ಮೇಲೆ ಒಲೆ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಎರಡು ಲೋಟ ನೀರನ್ನು ಹಾಕಿ ನಂತರ ಒಂದು ಚಮಚ ಈ ಪುಡಿಯನ್ನು ಹಾಕಿ ಮತ್ತು ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಬೆಲ್ಲವನ್ನು ಹಾಕಬೇಕು ಕೊನೆಯಲ್ಲಿ ರುಚಿಗೆ ತಕ್ಕಷ್ಟು ನಂತರ ಒಂದು ಲೋಟಕ್ಕೆ ಕಷಾಯವನ್ನು ಸೋಸಿಕೊಳ್ಳಬೇಕು ಇದೀಗ ಕಷಾಯ ರೆಡಿಯಾಗಿದೆ ಬೆಳಿಗ್ಗೆ ಮತ್ತು ರಾತ್ರಿ ಕುಡಿಯಿರಿ ತುಂಬಾ ಒಳ್ಳೆಯದು ಹಾಗೂ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿನೋಡಿ ಹೇಗಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.