ಪರಂಗಿಹಣ್ಣನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುತ್ತಾರೆ ಆದರೆ ಇದನ್ನು ಕೇವಲ ಬರಿ ಒಂದು ಹಣ್ಣು ಎಂದು ತಿಳಿದುಕೊಂಡು ತಿನ್ನುತ್ತಾರೆ ಆದರೆ ಇದರಲ್ಲಿ ಹಲವಾರು ರೋಗಗಳಿಗೆ ಔಷಧಿ ಗುಣವನ್ನು ಹೊಂದಿದೆ ಎಂದು ಯಾರಿಗೂ ತಿಳಿದಿರುವುದಿಲ್ಲ ಆದರೆ ಪರಂಗಿ ಹಣ್ಣಿನಲ್ಲಿ ಹಲವಾರು ರೋಗಗಳಿಗೆ ಔಷಧಿ ಗುಣವನ್ನು ಹೊಂದಿದೆ ಇದು ಯಾವ ಯಾವ ರೋಗಗಳಿಗೆ ಒಳ್ಳೆಯದು ಮತ್ತು ಇದನ್ನು ಹೇಗೆ ಉಪಯೋ ಗಿಸಬೇಕು ಇದರ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಪರಂಗಿ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಜಂತುಹುಳು ಮತ್ತು ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಈ ಪರಂಗಿಹಣ್ಣು ಚರ್ಮಕ್ಕೆ ಸಕ್ಕರೆ ಕಾಯಿಲೆಯವರಿಗೆ ಮತ್ತು ನಮ್ಮ ದೇಹದ ಸುಸ್ತನ್ನು ಕಡಿಮೆ ಮಾಡುವುದಕ್ಕೆ ಪರಂಗಿ ಹಣ್ಣು ಹಲವಾರು ರೀತಿಯಾಗಿ ನಮಗೆ ಸಹಾಯ ಮಾಡುತ್ತದೆ ಜೊತೆಗೆ ನರಗಳ ದೌರ್ಬಲ್ಯ ಸುಧಾರಣೆ ಮಾಡುತ್ತದೆ ಹೊಟ್ಟೆಯಲ್ಲಿ ಗೆಡ್ಡೆ ಆಗುವುದು ಗ್ಯಾಸ್ಟಿಕ್ ಸಮಸ್ಯೆಗೆ ಹುಳ ಕಚ್ಚಿದಾಗ ನೋವಾಗುವುದು ಹೀಗೆ ಹಲವಾರು ಸಮಸ್ಯೆಗಳಿಗೆ ಪರಂಗಿ ಹಣ್ಣು ತುಂಬಾ ಒಳ್ಳೆಯದು ಪರಂಗಿ ಹಣ್ಣಿನಲ್ಲಿ ನಾರಿನಂಶ ವಿಟಮಿನ್ ಎ ಸಿ ಇ ಅಂಶ ಇದೆ ಇದನ್ನ ಗರ್ಭಿಣಿಯರು ಮಾತ್ರ ತಿನ್ನಬಾರದು.
ಗರ್ಭಿಣಿಯರು ಯಾಕೆ ತಿನ್ನಬಾರದು ಎಂದರೆ ಈ ಹಣ್ಣು ಈಟಾಗಿರುವುದರಿಂದ ಅಷ್ಟೊಂದು ಒಳ್ಳೆಯದಲ್ಲ ಆದರೆ ಮಕ್ಕಳಿಗೆ ಬಾಣಂತಿಯರಿಗೆ ತುಂಬಾನೇ ಒಳ್ಳೆಯ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ ಇವಾಗ ನಾನು ಒಂದು ಪೀಸ್ ಪರಂಗಿ ಹಣ್ಣನ್ನು ಚೆನ್ನಾಗಿ ಕಿವುಚಿ ಕೊಂಡಿದ್ದೇನೆ ನಿಮ್ಮ ಮನೆಯಲ್ಲಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ ಅದಕ್ಕೆ ಒಂದು ಲೋಟ ಹಾಲು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿದರೆ ಪಪ್ಪಾಯ ಟಾನಿಕ್ ರೆಡಿ ಇದನ್ನು ಪ್ರತಿದಿನ ಸಾಯಂಕಾಲ ಬೆಳಿಗ್ಗೆ ಯಾವ ಟೈಮಲ್ಲಿ ಆದರೂ ಕುಡಿಯಬಹುದು ಆದರೆ ಬೆಳಗ್ಗೆ ಟೈಮ್ ಕುಡಿದರೆ ತುಂಬಾನೆ ಒಳ್ಳೆಯದು ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಆಗುವ ಸುಸ್ತು ಆಯಾಸ ನರ ದೌರ್ಬಲ್ಯಕ್ಕೆ ಕಡಿಮೆ ಮಾಡುತ್ತದೆ.
