ಉಪ್ಪಿನ ದೀಪವನ್ನು ಹಚ್ಚಿ ಲಕ್ಷ್ಮಿಯನ್ನು ಒಲಿಸಿಕೊಳ್ಳಿ…ತಾಯಿ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಯಾರ ಮನೆಯಲ್ಲಿ ಇರುತ್ತದೆಯೋ ಅಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ. ಮನೆಯಲ್ಲಿ ಯಾವುದೇ ರೀತಿಯಾದಂತಹ ಕಲಹ ಆಗಿರಬಹುದು ಜಗಳ ಆಗಿರಬಹುದು ವ್ಯಾಪಾರದಲ್ಲಿ ನಷ್ಟ ಆಗಿರಬಹುದು ಉದ್ಯೋಗದಲ್ಲಿ ತೊಂದರೆ ಉಂಟಾಗುವುದಿಲ್ಲ. ಹಾಗಾಗಿ ಯಾರ ಮನೆಯಲ್ಲಿ ತಾಯಿ ಮಹಾಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಅಂತಹ ಮನೆಯಲ್ಲಿ ಸದಾ ಸಂತೋಷ ಎಂಬುದು ನಂದಾದೀಪವಾಗಿರುತ್ತದೆ. ಹಾಗಾಗಿ ಇಂದು ನೀವೇನಾದರೂ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬೇಕು ಅಂತ ಅಂದರೆ ನಾವು ಹೇಳುವಂತಹ ಈ ವಿಧಾನದಲ್ಲಿ ನೀವು ದೀಪವನ್ನು ಹಚ್ಚಿದರೆ ಖಂಡಿತವಾಗಿಯೂ ಕೂಡ ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಎಂಬುದು ನಿಮ್ಮ ಮನೆಗೆ ದೊರೆಯುತ್ತದೆ.
ಮಹಾಲಕ್ಷ್ಮಿದೇವಿ ಗೆ ಯಾವ ರೀತಿಯಾಗಿ ನಾವು ದೀಪವನ್ನು ಬೆಳಗಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಸಾಮಾನ್ಯವಾಗಿ ಮನೆಯಲ್ಲಿ ನಾವು ಬೆಳಗ್ಗೆ ಎದ್ದ ಕೂಡಲೇ ಸ್ನಾನವನ್ನು ಮಾಡಿದ ನಂತರ ದೇವರ ಮನೆಗೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಈ ರೀತಿ ಮಾಡುವಾಗ ದೇವರಿಗೆ ದೀಪ ಹಚ್ಚುವುದು ಕೂಡ ಸರ್ವೇ ಸಾಮಾನ್ಯವಾಗಿದೆ ಆದರೆ ನೀವು ಪ್ರತಿ ನಿತ್ಯ ದೀಪ ಬೆಳಗುವ ಮಾದರಿಯಲ್ಲಿ ದೀಪವನ್ನು ಹಚ್ಚದೆ ನಾವು ಹೇಳುವಂತಹ ರೀತಿಯಲ್ಲಿ ದೀಪವನ್ನು ಹಚ್ಚಿದರೆ ಮನೆಯ ಸಕಲ ಸಂಕಷ್ಟಗಳೂ ಕೂಡ ದೂರವಾಗುತ್ತದೆ.
ನೀವು ದೀಪವನ್ನು ಹಚ್ಚಬೇಕು ಅಂದರೆ ಅದಕ್ಕೂ ಮುಂಚೆ ಉಪ್ಪನ್ನು ಇಟ್ಟು ಅದರ ಮೇಲೆ ದೀಪವನ್ನು ಹಚ್ಚಿದರೆ ಕಂಡಿತವಾಗಿಯೂ ಕೂಡ ನಿಮ್ಮ ಮನೆಯಲ್ಲಿ ಇರುವಂತಹ ಸರ್ವ ದೋಷಗಳು ಕೂಡಾ ನಿವಾರಣೆಯಾಗುತ್ತದೆ. ನೀವು ಪ್ರತಿನಿತ್ಯವೂ ಕೂಡ ಉಪ್ಪಿನಿಂದ ಈ ರೀತಿಯಾದಂತಹ ದೀಪವನ್ನು ಬೆಳಗಲು ಸಾಧ್ಯವಾಗದೇ ಇದ್ದರೆ ಪ್ರತಿ ಶುಕ್ರವಾರ ದಿನ ಅಥವಾ ಮಂಗಳವಾರದ ದಿನ ಒಂದು ವಿಧಾನವನ್ನು ಅನುಸರಿಸಿ ದೀಪವನ್ನು ಹಚ್ಚಬಹುದು. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಪ್ಪನ್ನು ಶ್ರೀ ಮಹಾಲಕ್ಷ್ಮಿ ದೇವಿಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ಉಪ್ಪಿನ ಮುಖಾಂತರ ಈ ರೀತಿ ದೀಪವನ್ನು ಬೆಳಗಿದರೆ ಶ್ರೀ ಮಹಾಲಕ್ಷ್ಮಿದೇವಿಯು ಪೂಜೆಗೆ ಒಲಿದು ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳನ್ನು ನೆರವೇರಿಸುತ್ತಾರೆ ಎಂಬ ನಂಬಿಕೆ ತುಂಬಾನೇ ಇದೆ.