ಇತ್ತೀಚೆಗೆ ಸಾಕಷ್ಟು ಜನರಿಗೆ ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಅದರಿಂದ ನಡೆದಾಡಲು ತುಂಬಾ ಸಮಸ್ಯೆಯಾಗುತ್ತದೆ .ಹಾಗೂ ಕುಳಿತುಕೊಳ್ಳಲು ತುಂಬಾ ತೊಂದರೆ ಆಗುತ್ತದೆ ಆಸ್ಪತ್ರೆಯಲ್ಲಿ ಸರಿಯಾದ ಔಷಧಿ ತೆಗೆದುಕೊಂಡರು ಕಡಿಮೆಯಾಗುವುದಿಲ್ಲ .ಕೆಲವು ಸಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಕೀಲುನೋವು ಸಮಸ್ಯೆ ನಿವಾರಣೆಯಾಗುತ್ತದೆ .ಮೊದಲ ಮನೆಮದ್ದು ಯಾವುದೆಂದರೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ಮತ್ತು ಅದರ ಜೊತೆಗೆ ಉಪ್ಪನ್ನು ಬೆರೆಸಿ ಸೇವನೆ ಮಾಡುವುದರಿಂದ ಕೀಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ಎರಡನೇ ಮನೆಮದ್ದು ಯಾವುದೆಂದರೆ ಹರಳೆಣ್ಣೆ ಜೊತೆ ಬೆಳ್ಳುಳ್ಳಿ ಚೆನ್ನಾಗಿ ಜಜ್ಜಿ ಎಣ್ಣೆ ಜೊತೆ ಮಿಕ್ಸ್ ಮಾಡಿ ನಂತರ ಕಾಲುಗಳಿಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿದಾಗ ಕೀಲುನೋವು ಸಮಸ್ಯೆ ನಿವಾರಣೆಯಾಗುತ್ತದೆ.
ಮೂರನೇ ಮನೆಮದ್ದು 1 ಚಮಚ ಶುಂಠಿ ರಸ ಹಾಗೂ ಹರಳೆಣ್ಣೆ ಜೊತೆ ಮಿಕ್ಸ್ ಮಾಡಿ ಚೆನ್ನಾಗಿ ಮಂಡಿ ಮತ್ತು ಕಾಲುಗಳಿಗೆ ಮಸಾಜ್ ಮಾಡಿದಾಗ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ .ನಾಲ್ಕನೇ ಮನೆಮದ್ದು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಕಾಲಿಗೆ ಹಚ್ಚಿದರೆ ಕೀಲುನೋವು ಸಮಸ್ಯೆ ನಿವಾರಣೆ ಆಗುತ್ತದೆ ವಾರದಲ್ಲಿ ನಾಲ್ಕು ಬಾರಿ ಈ ರೀತಿ ಮಾಡಿದರೆ ಕಡಿಮೆಯಾಗುತ್ತದೆ. ನಂತರ ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ಆ ನೀರಿನಲ್ಲಿ ಮಂಡಿಯನ್ನು ಚೆನ್ನಾಗಿ ತೊಳೆದರೆ ನೋವು ಕಡಿಮೆಯಾಗುತ್ತದೆ. ನಂತರ 5ನೇ ಮನೆಮದ್ದು ಒಂದು ಲೋಟ ಹಾಲು ಅದಕ್ಕೆ ಸ್ವಲ್ಪ ಅರಿಶಿಣ ಮತ್ತು 1 ಚಮಚ ಜೇನುತುಪ್ಪ ಎರಡು ತಿಂಗಳ ಕಾಲ ಕುಡಿದರೆ ಕೀಲು ನೋವು ಸಮಸ್ಯೆ ನಿವಾರಣೆಯಾಗುತ್ತದೆ ಅಥವಾ ಜೇನುತುಪ್ಪ ಮತ್ತು ಅರಿಶಿಣಕ್ಕೆ ಪ್ರತಿನಿತ್ಯ ಒಂದು ಚಮಚ ಕುಡಿದು ಕೊಂಡು ಬಂದರೆ ಕೀಲುನೋವು ಸಮಸ್ಯೆ ನಿವಾರಣೆ ಆಗುತ್ತದೆ. ಈ ಎಲ್ಲಾ ಮನೆಮದ್ದು ಗಳನ್ನು ಬಳಸುವುದರಿಂದ ಕೀಲುನೋವು ಸಮಸ್ಯೆ ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಉತ್ತಮ ಫಲಿತಾಂಶ ಸಿಗುತ್ತದೆ.
