Fri. Dec 8th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲೂ ಇವತ್ತಿನ ದಿನಗಳಲ್ಲಿ ಬೇಕಾದಂತಹ ಒಳ್ಳೆ ಯ ಆಹಾರವನ್ನು ತಿನ್ನದೆ ಬೇಡ ವಾದಂತಹ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆಯನ್ನು ಹಾಳು ಮಾಡಿಕೊಂಡಿರುತ್ತಾರೆ ಹಾಗಾದರೆ ನಾವು ಹೊಟ್ಟೆಯಲ್ಲಿರುವ ಕಲ್ಮಶ ವನ್ನು ಹೇಗೆ ಹೊರ ಹಾಕುವುದು ಮತ್ತು ಇದಕ್ಕೆ ಬೇಕಾದಂತಹ ಮನೆಮದ್ದು ಯಾವುದು ಇದನ್ನು ಯಾವುದರಿಂದ ತಯಾರಿಸಬಹುದು ಇದನ್ನು ತಿಳಿದುಕೊಳ್ಳೋಣ ಬನ್ನಿ. ಕೆಲವರಿಗೆ ಬೆಳಿಗ್ಗೆ ತಿಂದಂತ ಆಹಾರ ರಾತ್ರಿವರೆಗೂ ಜೀರ್ಣ ಆಗದೆ ಇದ್ದಾಗ ಬಾಯಿಂದ ಅದೇ ಆಹಾರದ ವಾಸನೆ ಬರುತ್ತಿರುತ್ತದೆ ಅದೇರೀತಿ ನಾವು ತಿಂದ ಆಹಾರ ಜೀರ್ಣ ಆಗದೆ ಇದ್ದಾಗ ನಮ್ಮ ದೇಹ ಕ್ಕೆ ಶಕ್ತಿ ಆಗುವುದಕ್ಕೆ ಸಾಧ್ಯವಿಲ್ಲ ಮತ್ತು ರಕ್ತ ಹೆಚ್ಚುವುದಿಲ್ಲ. ಆಗ ನಿಮ್ಮ ದೇಹದಲ್ಲಿ ಹಲವಾರು ಕಾಯಿಲೆಗಳು ಉತ್ಪತ್ತಿಯಾಗುತ್ತದೆ ಇದರಿಂದ ನಿಮ್ಮ ದೇಹ ಕಾಯಿಲೆಗಳು ಗೂಡಾಗುತ್ತದೆ.

ನಿಮ್ಮ ಜೀರ್ಣಕ್ರಿಯೆಯನ್ನು ಸರಿಪಡಿಸಿಕೊಳ್ಳದೆ ನಿಮ್ಮ ಯಾವುದೇ ಕಾಯಿಲೆಗೆ ಔಷಧಿ ತೆಗೆದುಕೊಂಡರೂ ಅದು ಪ್ರಯೋಜನವಿಲ್ಲ. ಯಾ ವ ಕಾಯಿಲೆ ಕೂಡ ವಾಸಿ ಆಗುವುದಿಲ್ಲ ಅದಕ್ಕೆ ನಾವು ಮೊದಲೇ ಮಾಡಬೇಕಾಗಿರೋದು ನಮ್ಮ ಜೀರ್ಣಕ್ರಿಯೆಯ ಕೆಲಸ ಅದನ್ನು ನಾವು ಮೊದಲು ಸರಿಪಡಿಸಿಕೊಳ್ಳಬೇಕು. ಇದು ಯಾವ ರೀತಿ ಎಂದರೆ ವಾರಕ್ಕೆ ಒಂದು ದಿವಸ ಉಪವಾಸ ಮಾಡಬೇಕು ಇದಕ್ಕೆ ಆಯು ರ್ವೇದದಲ್ಲಿ ಲಂಘನಂ ಪರಮೌಷದಂ ಎಂದು ಹೇಳುತ್ತಾರೆ ಏನನ್ನು ತೆಗೆದುಕೊಳ್ಳದಿರುವ ಅಂತದೆ ಎಲ್ಲದಕ್ಕಿಂತ ಒಳ್ಳೆಯ ಚಿಕಿತ್ಸೆ. ನಾವು ವಾರಕ್ಕೆ ಒಂದು ಬಾರಿ ವಾಸ ಮಾಡುವುದರಿಂದ ನಾವು ಹಿಂದಿನಿಂದ ತಿಂದುಕೊಂಡು ಬಂದಿರುವಂತಹ ಕೆಟ್ಟ ಆಹಾರವನ್ನು ಮಲ ವಿಸರ್ಜ ನೆಯ ಮೂಲಕ ಹೊರ ಹಾಕುತ್ತದೆ ಬೇಡವಾದ ತ್ಯಾಜ್ಯವನ್ನು ನಮ್ಮ ಹೊಟ್ಟೆಯಿಂದ ಹೊರ ಹಾಕುವುದರಿಂದ ನಮ್ಮ ಹೊಟ್ಟೆ ಚೆನ್ನಾಗಿ ಕ್ಲೀನಾ ಗಿ ನಾವು ಮುಂದೆ ಆರೋಗ್ಯವಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ.