Thu. Sep 28th, 2023

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ತುಂಬೆ ಗಿಡವು ಸಹ ಚಿಕ್ಕದಿದ್ದರೂ ಮನುಷ್ಯನ ಆರೋಗ್ಯಕ್ಕೆ ಆರೋಗ್ಯಕರವಾದ ಗಿಡವಾಗಿದೇ ತುಂಬೆ ಹೂವನ್ನು ಉಪಯೋಗಿಸಿಕೊಂಡು ಹಲವು ಕಾಯಿಲೆಗಳನ್ನು ಗುಣಪಡಿಸಬಹುದು ಬನ್ನಿ ಹಾಗಾದರೆ ಯಾವುದೆಲ್ಲಾ ಕಾಯಿಲೆಗಳಿಗೆ ತುಂಬಾ ಉಪಯೋಗಿಸಿಕೊಳ್ಳಬಹುದು ಎಂದು ನೋಡೋಣ ಜ್ವರಕ್ಕೆ ರಾಮಬಾಣ ಆಗಾಗ ಕಾಡುವ ಜ್ವರಕ್ಕೆ 10 ಮಿಲಿ ತುಂಬಿ ಸೊಪ್ಪಿನ ರಸಕ್ಕೆ ಮೆಣಸನ್ನು ಸೇರಿಸಿ ದಿನಕ್ಕೆ ಎರಡುಸಲ ಸೇವಿಸುವುದರಿಂದ ಜ್ವರವನ್ನು ನಿವಾರಣೆ ಮಾಡಬಹುದು. ತಲೆನೋವಿಗೆ ಉತ್ತಮ ನಿಮಗೆ ತಲೆನೋವು ಬಂದಾಗ ಬೇಡವಾದ ಮಾತ್ರೆ ಸೇವನೆ ಮಾಡುವ ಬದಲು ತುಂಬೆ ಗಿಡವನ್ನು ಕಾಂಡ ಸಮೇತ ನೀರಿನಲ್ಲಿ ತೊಳೆದು ನೀರಿನಲ್ಲಿ ಕುದಿಸಿ ಆವಿಯನ್ನು ತೆಗೆದುಕೊಂಡರೆ.


ನಿಮ್ಮ ತಲೆನೋವು ಬೇಗನೆ ಕಡಿಮೆಯಾಗುತ್ತದೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗೆ ಉತ್ತಮ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಸಮಸ್ಯೆ ಕಣ್ಣುರಿ ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಅಥವಾ ಹಾಲು ಸೇರಿಸಿ ಕಣ್ಣಿನ ಸುತ್ತ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ ಹೀಗೆ ಮಾಡುವುದರಿಂದ ಕಣ್ಣು ತಂಪಾಗುತ್ತದೆ ಹಾಗೂ ಕಪ್ಪು ಕಲೆಯು ಕೂಡ ನಿವಾರಣೆಯಾಗುತ್ತದೆ.
ಊಟ ಮತ್ತು ನೋವು ನಿವಾರಣೆಗೆ ಉತ್ತಮ ಒಂದಿಷ್ಟು ತುಂಬೆ ಗಿಡದ ಎಲೆ ಮತ್ತು ಕಾಂಡವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಒಂದು ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಈ ಬಟ್ಟೆಯಿಂದ ನೋವಿರುವ ಜಾಗಕ್ಕೆ ಒತ್ತಿ ಕೊಂಡರೆ ಊತ ಕಡಿಮೆಯಾಗುತ್ತದೆ ನೋವು ಕೂಡಾ ನಿವಾರಣೆಯಾಗುತ್ತದೆ ಜೀರ್ಣಕ್ರಿಯೆಗೆ ಉತ್ತಮ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ತುಂಬೆ ಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಕುಡಿಯಿರಿ ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಅದೇ ಅಲ್ಲ ಇದರಿಂದ ಹೊಟ್ಟೆ ನೋವು ಕೂಡ ನಿವಾರಣೆಯಾಗುತ್ತದೆ.