Fri. Mar 24th, 2023

ಸೊಂಟ ನೋವು ಬೆನ್ನು ನೋವು ಕತ್ತು ನೋವು ಈ ರೀತಿ ಹಲವಾರು ನೋವುಗಳನ್ನು ನೀವು ಅನುಭವಿಸುತ್ತಾ ಇರುತ್ತೀರಿ ಬೆಳಗ್ಗೆ ಎದ್ದ ತಕ್ಷಣ ಸೊಂಟ ಹಿಡಿದು ಕೊಳ್ಳುವುದು ಕುಳಿತುಕೊಂಡರೆ ಮೇಲಕ್ಕೆ ಹೇಳುವುದಕ್ಕೆ ಆಗುವುದಿಲ್ಲ ಈ ರೀತಿಯಲ್ಲ ಆಗುತ್ತದೆ ಈ ನೋವುಗಳನ್ನು ಕಡಿಮೆ ಮಾಡುವುದಕ್ಕೆ ಒಂದು ಯೋಗಾಸನವನ್ನು ನಾನು ನಿಮಗೆ ಇವತ್ತು ಹೇಳಿಕೊಡುತ್ತೇನೆ ಮೊದಲನೆಯದಾಗಿ ನಾವು ಮಲಗಿರುವ ಸ್ಥಿತಿಯಿಂದ ಸುಲಭವಾಗಿ ಮಲಗಿರುವ ಈ ಸ್ಥಿತಿಯಿಂದ ಸುಲಭವಾಗಿ ಪರಿಹಾರವನ್ನು ಮಾಡಿಕೊಳ್ಳಬಹುದು ಈ ನೋವು ಗಳಿಗೆ ಕೇವಲ ನಿಮಿಷಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.
ಎರಡು ಕಾಲುಗಳನ್ನು ಜೋಡಿಸಿ ಕಾಲುಗಳನ್ನು ಮಡಚಿ ಹಸ್ತಗಳನ್ನು ತಲೆ ಹಿಂದೆ ಹಾಕಿ ನಿಧಾನವಾಗಿ ಬೆನ್ನನ್ನು ಸಂಪೂರ್ಣವಾಗಿ ವಿಶ್ರಾಂತಿ ಗೊಳಿಸೋಣ ನೆನಪಿರಲಿ ತಲೆಗೆ ದಿಂಬು ಅಥವಾ ಬಟ್ಟೆಯನ್ನು ಹಾಕಿಕೊಳ್ಳಬಾರದು ಬರೀ ಕೈ ಸಹಾಯದಿಂದ ಇರಬೇಕು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳೋಣ ಹಾಗೆ ಉಸಿರನ್ನು ಹೊರಗೆ ಹಾಕುತ್ತಾ ನಮ್ಮ ಕಾಲುಗಳನ್ನು ಬಲಭಾಗಕ್ಕೆ ತಿರುಗಿಸಿ ಅದೇ ರೀತಿ ತಲೆಯನ್ನು ಎಡಭಾಗಕ್ಕೆ ತಿರುಗಿಸಿ ಕೊಳ್ಳೋಣ ನಮ್ಮ ಕಾಲುಗಳು ಜೊತೆಗಿರುವಂತೆ ಗಮನಿಸೋಣ ಅದೇ ರೀತಿ ನಮ್ಮ ಪಾದಗಳು ಒಟ್ಟಿಗೆ ಇರಬೇಕು ಬೆನ್ನಿನ ಭಾಗದಲ್ಲಿ ನಡೆಯುತ್ತಿರುವಂತಹ ನೋವನ್ನು ನಾವು

ಗಮನಿಸೋಣ ಅದೇ ರೀತಿ ಬೆನ್ನಿನ ಭಾಗದಲ್ಲಿ ರಕ್ತ ಸಂಚಲನವನ್ನು ಗಮನಿಸೋಣ ಮತ್ತೆ ದೀರ್ಘವಾದ ಉಸಿರಿನೊಂದಿಗೆ ನಿಧಾನವಾಗಿ ಮೇಲಕ್ಕೆ ಬರೋಣ ನಿಧಾನವಾಗಿ ಉಸಿರನ್ನು ಹಾಡುತ್ತಾ ಮತ್ತೊಂದು ಬದಿಗೆ ತಿರುಗೋಣ.ಇದೇ ರೀತಿ ಐದರಿಂದ ಹತ್ತು ಬಾರಿ ಉಸಿರಾಟದ ಚಲನೆಯೊಂದಿಗೆ ಇದೇ ರೀತಿ ನಮ್ಮ ವೇಗವನ್ನು ಕೂಡ ಹೆಚ್ಚು ಗೊಳಿಸಿ ಅಭ್ಯಾಸವನ್ನು ಮಾಡಬಹುದು ಮುಂದಿನದಾಗಿ ನಮ್ಮ ಬಲಗಾಲನ್ನು ಎಡಗಾಲಿನ ಮೇಲೆ ತಂದು ನಮ್ಮ ಹಸ್ತಗಳು ಇದೇ ರೀತಿ ತಲೆಯ ಹಿಂಭಾಗದಲ್ಲಿ ಇರುತ್ತದೆ ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಹಾಕುತ್ತಾ ಕಾಲನ್ನು ನಿಧಾನವಾಗಿ ಎಡಬದಿಗೆ ಹಾಗೂ ತಲೆಯನ್ನು ಬಲಬದಿಗೆ ಹೊರಳಿ ಸೋಣ ನೆನಪಿರಲಿ ಉಸಿರಾಟದ ಒಟ್ಟಿಗೆ ನಮ್ಮ ದೈಹಿಕ ಚಲನೆ ತುಂಬಾನೇ ಮುಖ್ಯ ಉಸಿರನ್ನು ಹೊರಗೆ ಹಾಕುತ್ತಾ ಮತ್ತೊಂದೆಡೆ ನಿಧಾನವಾಗಿ ನಮ್ಮ ಕಾಲನ್ನು ಬಲಭಾಗಕ್ಕೆ ಹಾಕಿದಾಗ ತಲೆ ಎಡಭಾಗಕ್ಕೆ ಹೋಗಬೇಕು ಅದೇ ರೀತಿ ಎಡಭಾಗಕ್ಕೆ ಕಾಲನ್ನು ಹಾಕಿದಾಗ ತಲೆ ಬಲಭಾಗಕ್ಕೆ ಹೋಗಬೇಕು ನೆನಪಿರಲಿ ಈ ಚಲನೆಯನ್ನು ಸುಮಾರು ಐದರಿಂದ ಹತ್ತು ಬಾರಿ ಮುಂದುವರಿಸ ಬಹುದು ಈ ರೀತಿ ಮಾಡುವುದರಿಂದ ಸೊಂಟ ನೋವು ಕುತ್ತಿಗೆ ನೋವು ಎಲ್ಲಾ ಕೂಡ ಕಡಿಮೆಯಾಗುತ್ತದೆ.