ಇವತ್ತು ನಾನು ಮಾಡುತ್ತಿರುವ ಮನೆಮದ್ದು ಬಾಳೆದಿಂಡನ್ನು ಉಪಯೋಗಿಸಿ ಯಾವ ರೀತಿ ಜ್ಯೂಸ್ ಮಾಡುವುದು ಎಂದು. ಬಾಳೆದಿಂಡನ್ನು ತೆಗೆದುಕೊಂಡಿದ್ದೇನೆ ಇದರಲ್ಲಿ ಅರ್ಧದಷ್ಟು ಕಟ್ ಮಾಡಿಕೊಳ್ಳುತ್ತೇನೆ ಅರ್ಧ ಜ್ಯೂಸ್ ಮಾಡುತ್ತೇನೆ ಅರ್ಧ ಇನ್ನೊಂದು ಮನೆಮದ್ದನ್ನು ಮಾಡುತ್ತೇನೆ ಮೇಲ್ಗಡೆ ಸಿಪ್ಪೆಯಲ್ಲಿ ತೆಗೆದುಕೊಂಡಿದ್ದೇನೆ ಈ ರೀತಿ ರೌಂಡಾಗಿ ಕಟ್ ಮಾಡಿಕೊಳ್ಳಬೇಕು ಇವಾಗ ಹಾಗೆ ನಾರನ್ನು ತೆಗೆಯುತ್ತ ಹೋಗಬೇಕು ಇವಾಗ ಇದನ್ನು 4pc ಗಳನ್ನಾಗಿ ಮಾಡಿಕೊಳ್ಳಬೇಕು ಒಂದು ಮಿಕ್ಸಿ ಜಾರಿಗೆ ಕಟ್ ಮಾಡಿದ ಬಾಳೆದಿಂಡು ಸ್ವಲ್ಪ ಉಪ್ಪು ಮಜ್ಜಿಗೆ ನಂತರ ಕಾಳುಮೆಣಸು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ ಕೊಂಡಿದ್ದೇನೆ ಮತ್ತೆ ಎಷ್ಟು ಬೇಕು ಅಷ್ಟು ನೀರನ್ನು ಹಾಕಿ ಮತ್ತೆ ರುಬ್ಬಿಕೊಳ್ಳಬೇಕು ಇವಾಗ ಬಾಳೆದಿಂಡಿನ ಜ್ಯೂಸ್ ರೆಡಿಯಾಗಿದೆ ಲೋಟಕ್ಕೆ ಹಾಕುತ್ತಿದ್ದೇನೆ ಇದನ್ನು ಕುಡಿಯ ಬೇಕಾದರೆ ಸ್ವಲ್ಪ ಕಷ್ಟ ಆಗುತ್ತದೆ ಬಾಯಿಗೆ ನಾರಿನ ರೀತಿ ಸಿಗುತ್ತದೆ ಒಂದು ಕಡ್ಡಿ ಅಥವಾ ಫೋರ್ಕ್ ಹಾಕಿ ತಿರುವಿ ನ ನಾರನ್ನು ತೆಗೆದು ಇದನ್ನು ಕುಡಿಯುವುದರಿಂದ ನಮ್ಮ ಕಿಡ್ನಿಯಲ್ಲಿ ಕಲ್ಲು ಇದ್ದರೆ ಅದು ಮೂತ್ರದ ಮುಖಾಂತರ ಹೊರಟುಹೋಗುತ್ತದೆ.
ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವುದಕ್ಕೆ ಇದು ಸಿಂಪಲ್ಲಾದ ಮನೆಮದ್ದು ಇದರಿಂದ ತುಂಬಾ ಉಪಯೋಗವಿದೆ ನೀವೇನಾದರೂ ಬಾಳೆದಿಂಡಿನ ಜ್ಯೂಸ್ ಬೇಡ ಅಂದರೆ ಬಾಳೆ ದಿಂಡಿನಿಂದ ಈ ರೀತಿ ಅಂದರೆ ಕೋಸಂಬರಿ ರೀತಿ ಮಾಡಿಕೊಂಡು ತಿನ್ನಬಹುದು ಇದಕ್ಕೂ ಅಷ್ಟೇ ರೌಂಡಾಗಿ ಕಟ್ ಮಾಡಿಕೊಂಡು ನಾರನ್ನು ತೆಗೆಯಬೇಕು ಈ ರೀತಿ ನೀಟಾಗಿ ತೆಗೆಯಬೇಕು ಇವಾಗ ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ಇದು ತುಂಬಾನೇ ಸುಲಭವಾದ ಮನೆಮದ್ದು ಕಿಡ್ನಿಯಲ್ಲಿ ಏನಾದರೂ ಕಲ್ಲು ಇದ್ದರೆ ರೆಗುಲರ್ ಆಗಿ ಬಾಳೆದಿಂಡನ್ನು ತಿನ್ನಬೇಕು ಅಂತಾರೆ ಹಾಗಾಗಿ ದಿನಾಲು ಜ್ಯೂಸ್ ಕುಡಿಯುವುದಕ್ಕೆ ಆಗುವುದಿಲ್ಲ ಅಂದರೆ ಒಂದು ದಿನ ಜ್ಯೂಸ್ ಮತ್ತು ಒಂದು ದಿನ ಕೋಸಂಬರಿ ರೀತಿ ಮಾಡಿಕೊಂಡು ತಿನ್ನಬಹುದು.
ಹೇಗಾದರೂ ಸರಿ ಕಿಡ್ನಿಯಲ್ಲಿ ಕಲ್ಲು ಇದ್ದಾಗ ಬಾಳೆದಿಂಡನ್ನು ನಾವು ಉಪಯೋಗಿಸಬೇಕು ಈ ರೀತಿ ಸಣ್ಣದಾಗಿ ಆಗಿ ಕಟ್ ಮಾಡಿಕೊಂಡಿದ್ದೇನೆ ಇವಾಗ ನಾನು ಇದಕ್ಕೆ ಮೊಸರನ್ನು ಹಾಕುತ್ತಿದ್ದೇನೆ ನೀವು ಬೇಕಾದರೆ ನಿಂಬೆಹಣ್ಣನ್ನು ಬೇಕಾದರೂ ಉಪಯೋಗಿಸಬಹುದು ತಕ್ಷಣ ಹಾಕಬೇಕಾಗುತ್ತದೆ ಇಲ್ಲ ಅಂದರೆ ಬಾಳೆದಿಂಡು ಕಪ್ಪಾಗಿ ಬಿಡುತ್ತದೆ ಇವಾಗ ಇದಕ್ಕೆ ಸ್ವಲ್ಪ ಉಪ್ಪನ್ನು ಹಾಕುತ್ತಿದ್ದೇನೆ ನಂತರ ಸಣ್ಣದಾಗಿ ಹಚ್ಚಿರುವ ಈರುಳ್ಳಿಯನ್ನು ಹಾಕುತ್ತಿದ್ದೇನೆ ನಂತರ ಹೆಚ್ಚಿದ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪನ್ನು ಹಾಕುತ್ತಿದ್ದೇನೆ ಇವಾಗ ಇದಿಷ್ಟನ್ನು ಮಿಕ್ಸ್ ಮಾಡಿದ್ದಾರೆ ಬಾಳೆದಿಂಡಿನ ಕೋಸಂಬರಿ ರೆಡಿಯಾಗಿದೆ.