ಕತ್ತಿನ ಭಾಗದಲ್ಲಿ ಇರುವಂತಹ ಕಪ್ಪು ಕಲೆಗಳನ್ನು ತೊಲಗಿಸುವಂತಹ ಅದ್ಭುತವಾದಂತಹ ವಿಧಾನ… ಮೊದಲನೇದಾಗಿ ಒಂದು ಪಾತ್ರೆಗೆ ಸ್ವಲ್ಪ ಬಿಸಿ ನೀರನ್ನು ಹಾಕಿಕೊಂಡು ಅದಕ್ಕೆ ಯಾವುದಾದರೂ ಒಂದು ಟವಲ್ ಅಥವಾ ಹತ್ತಿ ಬಟ್ಟೆಯನ್ನು ಅದ್ದಿ ಒಂದು ಬಿಸಿನೀರಿನ ಶಾಖವನ್ನು ಕುತ್ತಿಗೆಯ ಸುತ್ತ ಸ್ಟೀಮ್ ಕೊಡಬೇಕಾಗುತ್ತದೆ ಐದರಿಂದ ಹತ್ತು ನಿಮಿಷಗಳ ಕಾಲ ಹೀಗೆ ಮಾಡಿಕೊಳ್ಳಿ. ಎರಡನೇದಾಗಿ ಸ್ಕ್ರಬಿಂಗ್ ಮಾಡಿಕೊಳ್ಳಬೇಕಾಗುತ್ತದೆ ಇನ್ನೂ ಸ್ಕ್ರಬ್ಬಿಂಗ್ ತಯಾರಿಸುವ ವಿಧಾನ ನೋಡುವುದಾದರೆ ಒಂದು ಆಲೂಗೆಡ್ಡೆಯನ್ನು ತೆಗೆದುಕೊಂಡು ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಅದನ್ನು ತುರಿದುಕೊಂಡು ಅದರಲ್ಲಿರುವ ರಸವನ್ನು ಶೇಖರಣೆ ಮಾಡಿಕೊಳ್ಳಬೇಕು. ಈಗ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಸಕ್ಕರೆ, ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸ ಒಂದು ಟೇಬಲ್ ಸ್ಪೂನ್ ಆಲೂಗೆಡ್ಡೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದನ್ನು ಕುತ್ತಿಗೆ ಭಾಗಕ್ಕೆ ಹಚ್ಚಿ ಐದರಿಂದ ಹತ್ತು ನಿಮಿಷಗಳ ಸ್ಕ್ರಬಿಂಗ್ ಮಾಡಿಕೊಳ್ಳಿ ತದನಂತರ ತಣ್ಣೀರಿನಿಂದ ಇದನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಕಾಫಿ ಪೌಡರ್ ಒಂದು ಟೇಬಲ್ ಸ್ಪೂನ್ ಅಕ್ಕಿಹಿಟ್ಟಿನ ಪುಡಿ ಹಾಕಿ ಇದಕ್ಕೆ ಆಲೂಗೆಡ್ಡೆಯನ್ನು ರಸವನ್ನು ಹಾಕಿ ಪೇಸ್ಟದ ಮಾದರಿಯಲ್ಲಿ ಕಲಿಸಿಕೊಳ್ಳಬೇಕು. ಈ ಮಿಶ್ರಣವನ್ನು ಕುತ್ತಿಗೆಯ ಭಾಗಕ್ಕೆ ಹಚ್ಚಿ ಇದನ್ನು ಸ್ವಲ್ಪ ಆರಲು ಬಿಡಬೇಕು. ತದನಂತರ ಒಂದು ಬಟ್ಟೆಗೆ ನೀರನ್ನು ಹಾಕಿಕೊಂಡು ಇದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಹೀಗೆ ಮಾಡಿದರೆ ಒಂದೇ ದಿನದಲ್ಲಿ ಕುತ್ತಿಗೆಯಲ್ಲಿ ಇರುವಂತಹ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ತಿಂಗಳಿಗೆ ಒಂದು ಬಾರಿ ಈ ರೀತಿ ಮಾಡಿದರೆ ಜೀವನದಲ್ಲಿ ಎಂದು ಕುತ್ತಿಗೆಯಲ್ಲಿ ಕಪ್ಪುಕಲೆಗಳು ನಮಗೆ ಕಂಡುಬರುವುದಿಲ್ಲ.
