Wed. Jun 29th, 2022

ಕೂಲ್ ಕೂಲ್ ಪುನರ್ಪುಳಿ ಶರ್ಬತ್ ಮಾಡುವುದು ಹೇಗೆ ಎಂದರೆ ಮೊದಲಿಗೆ ಪುನರ್ಪುಳಿ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿದ ಸಿಪ್ಪೆ ಬೇಕಾಗುತ್ತದೆ. ಹಾಗೂ ಒಂದು ನಿಂಬೆಹಣ್ಣು ಬೇಕಾಗುತ್ತದೆ 1 ಚಮಚ ಜೀರಿಗೆ ಹಾಗೂ ಅರ್ಧ ಚಮಚ ಕಾಮಕಸ್ತೂರಿ ಬೇಕಾಗಿದೆ ನಿಮಗೆ ಎಷ್ಟು ಸಿಹಿ ಬೇಕಾಗುತ್ತದೆ ಅಷ್ಟು ಸಕ್ಕರೆ ಬಳಸಿ ಪುನರ್ಪುಳಿ ಸಿಪ್ಪೆಯನ್ನು ಮೊದಲು ನೀರಿನಲ್ಲಿ ನೆನೆ ಹಾಕಬೇಕು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು ಅದಕ್ಕೆ ಬೇರೆ ನೀರನ್ನು ಹಾಕಬೇಕು. ನಂತರ ಅರ್ಧ ಚಮಚ ಕಾಮಕಸ್ತೂರಿ ಗೆ ಸ್ವಲ್ಪ ನೀರನ್ನು ಹಾಕಿ ನೆನೆಸಬೇಕು .ನಂತರ ಜೀರಿಗೆ ಹುರಿದುಕೊಂಡ ಚೆನ್ನಾಗಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.

ನಂತರ ಪುನರ್ಪುಳಿ ರಸ ಚೆನ್ನಾಗಿ ಅದರ ಸಿಪ್ಪೆಯನ್ನು ಚೆನ್ನಾಗಿ ರಸವನ್ನು ಹಿಂಡಿ ಕೊಳ್ಳಬೇಕು. ನಂತರ ಸೋಸಿಕೊಳ್ಳಬೇಕು ನಂತರ ಅದಕ್ಕೆ ಸಕ್ಕರೆ ಹಾಕಬೇಕು ಹಾಗೂ ಜೀರಿಗೆ ಪುಡಿ ಕಾಮಕಸ್ತೂರಿ ಹಾಕಬೇಕು ನಂತರ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಬೇಕು .ಆಗ ಪುನರ್ಪುಳಿ ಶರ್ಬತ್ ರೆಡಿಯಾಗುತ್ತದೆ ಇದು ತುಂಬಾ ತಲೆನೋವಿಗೆ ಪಿತ್ತ ಸಮಸ್ಯೆ ಇರುವವರಿಗೆ ಹಾಗೂ ಆಹಾರವು ತುಂಬಾ ಜೀರ್ಣ ಆಗಲೂ ಈ ಜ್ಯೂಸ್ ಸಹಾಯಮಾಡುತ್ತದೆ .ಬೇಸಿಗೆ ಕಾಲದಲ್ಲಿ ಕುಡಿಯುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರು ಇದನ್ನು ಕುಡಿಯಿರಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.