Tue. Aug 9th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ ಅದರಲ್ಲಿ ಗಂಟಲು ನೋವು ಸಮಸ್ಯೆ-ಒಂದು ಜನರಿಗೆ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ ಇದರಿಂದ ಸಾಕಷ್ಟು ಜನರು ಗಂಟಲು ನೋವಿನಿಂದ ಬಳಲುತ್ತಾರೆ ಹಾಗೂ ಮಾತನಾಡಲು ತುಂಬಾ ಕಷ್ಟ ಆಗುತ್ತದೆ. ಈ ಮನೆಮದ್ದಿಗೆ ಬೇಕಾಗಿರುವ ಸಾಮಗ್ರಿಗಳು ಕಾಲು ಟೀ ಸ್ಪೂನ್ ನಷ್ಟು ತೆರೆದಿರುವ ಗಂಧ ಹಾಗೂ ಕಾಲು ಟೀ ಸ್ಪೂನ್ ನಷ್ಟು ಬೆಲ್ಲ ಬೇಕಾಗುತ್ತದೆ ನಂತರ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು ಪ್ರತಿನಿತ್ಯ ಗಂಧ ಮತ್ತು ಬೆಲ್ಲವನ್ನು ಸೇವನೆ ಮಾಡಬೇಕು ಆಗ ನಿಮ್ಮ ಗಂಟಲು ನೋವು ಸಮಸ್ಯೆ ನಿವಾರಣೆಯಾಗುತ್ತದೆ .ಈ ಮನೆಮದ್ದನ್ನು ಮಕ್ಕಳಿಗೆ ಕೊಡಬೇಕಾದರೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಕೊಡಬೇಕು. ಇದನ್ನು ಬಳಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಅದೇ ರೀತಿ ಎರಡನೇ ಮನೆಮದ್ದು ಇದೆ. ಅದಕ್ಕೆ ಬೇಕಾದ ಸಾಮ ಗ್ರಿಗಳು ಸ್ವಲ್ಪ ಶುಂಠಿ 1 ಟೀ ಸ್ಪೂನ್ ನಷ್ಟು ನಿಂಬೆರಸ ಹಾಗೂ ಜೇನು ತುಪ್ಪ 8 ಮೆಣಸಿನಕಾಳು ಹಾಗೂ ಸ್ವಲ್ಪ ಬೆಲ್ಲ ನಂತರ ಒಂದು ಕಪ್ ನಷ್ಟು ನೀರು ಬೇಕಾಗುತ್ತದೆ ಮೊದಲು ಮೆಣಸಿನ ಕಾಳನ್ನು ಪುಡಿ ಮಾಡಿಕೊಳ್ಳಬೇಕು . ನಂತರ ಕುದಿಯುವ ನೀರಿಗೆ ಮೆಣಸಿನ ಪುಡಿ ಮತ್ತು ಶುಂಠಿಯನ್ನು ಹಾಕಬೇಕು ಅದಕ್ಕೆ ಸ್ವಲ್ಪ ಬೆಲ್ಲ ಕೂಡ ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಸೋಸಿಕೊಂಡು ನಿಂಬೆರಸ ಮತ್ತು ಜೇನುತುಪ್ಪವನ್ನು ಹಾಕಿಕೊಂಡು ಕುಡಿದರೆ ಗಂಟಲು ನೋವು ನಿವಾರಣೆ ಮಾಡುತ್ತದೆ ದಿನಕ್ಕೆ ಮೂರು ಬಾರಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಗಂಟಲು ನೋವು ಬರುವುದಿಲ್ಲ. ಗಂಟಲು ಕಿರಿಕಿರಿ ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.