Sat. Jul 2nd, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಗಂಟಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ತುಂಬಾ ನೋವು ಇರುವವರಿಗೆ ಮಾತನಾಡಲೂ ಆಗುವುದಿಲ್ಲ ಹಾಗೂ ಅನೇಕ ಗಂಟಲು ನೋವಿನ ಸಮಸ್ಯೆ ಉಂಟಾಗುತ್ತದೆ ಅದಕ್ಕೆ ಒಂದು ಮನೆಮದ್ದು ಇದೆ ಅಮೃತಬಳ್ಳಿಯ ಕಷಾಯವನ್ನು ಕುಡಿದರೆ ಕಡಿಮೆಯಾಗುತ್ತದೆ. ಎಷ್ಟು ದೊಡ್ಡದಾದ ಗಂಟಲು ನೋವಿನ ಸಮಸ್ಯೆ ಇದ್ದರೂ ತಕ್ಷಣ ನಿವಾರಣೆ ಮಾಡುತ್ತದೆ. ಈ ಮನೆಮದ್ದು ಬಳಸುವುದರಿಂದ ಈ ಮನೆ ಮದ್ದು ಮಾಡಲು ಬೇಕಾಗುವ ಸಾಮಗ್ರಿಗಳು ಎರಡು ಲೋಟ ನೀರು ಅರ್ಧ ಚಮಚ ಒಣಶುಂಠಿ ಹಾಗೂ 1 ಚಮಚ ಜೀರಿಗೆ ಮತ್ತು ಅಮೃತಬಳ್ಳಿ ಬೇಕಾಗುತ್ತದೆ. ನಂತರ ಅಮೃತಬಳ್ಳಿ ಎಲೆಗಳನ್ನು ಬಿಡಿಸಿ ಅದರ ಕಾಂಡವನ್ನು ಚೆನ್ನಾಗಿ ಚಚ್ಚಿಕೊಳ್ಳಬೇಕು ಈ ಮನೆಮದ್ದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

ನಂತರ ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಚೆನ್ನಾಗಿ ಚಚ್ಚಿದ ಅಮೃತಬಳ್ಳಿಯ ಕಾಂಡವನ್ನು ಹಾಕಿಕೊಳ್ಳಬೇಕು .ನಂತರ ಅದಕ್ಕೆ ಜೀರಿಗೆ ಬೆರೆಸಿ ಮತ್ತು ಶುಂಠಿಯನ್ನು ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಸೋಸಿಕೊಂಡು ಒಂದು ಲೋಟದಲ್ಲಿ ಸ್ವಲ್ಪ ಬಿಸಿ ಆರಿದ ಮೇಲೆ ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಗಂಟು ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಆದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಉತ್ತಮವಾಗಿ ಆರೋಗ್ಯವನ್ನು ನೋಡಿಕೊಳ್ಳಬಹುದು. ಈ ರೀತಿ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅವು ಗಂಟಲು ಸಮಸ್ಯೆ ಬರುವುದಿಲ್ಲ.