ಗಣಿಕೆ ಸೊಪ್ಪಿನಲ್ಲಿ ತುಂಬಾನೇ ಉಪಯೋಗ ಇದೆ ಗಣಿಕೆ ಸೊಪ್ಪಿನಲ್ಲಿ ಎರಡು ವಿಧ ಒಂದು ಕಪ್ಪು ಇನ್ನೊಂದು ಕೆಂಪು ಇದರ ಹಣ್ಣು ತುಂಬಾ ನೇ ರುಚಿ ಹಾಗೆ ಹುಳಿ ಕೂಡ ಇರುತ್ತದೆ ಔಷಧಿಗುಣ ನೋಡಿದರೆ ತುಂ ಬಾನೇ ಇದೆ ಇದನ್ನು ಕಾಕಿ ಸೊಪ್ಪು, ಎಂದು ಕರೆಯುತ್ತೇವೆ ಕಾಕವ್ವ, ಕಾಟಿ, ಇದರ ಔಷಧಿ ಗುಣಗಳನ್ನು ನೋಡುವುದಾದರೆ ಇದರ ಎಲೆ ಆಗಿರಬಹುದು. ಕಾಂಡ ಆಗಿರಬಹುದು. ಎಲ್ಲವೂ ಕೂಡ ಉಪಯು ಕ್ತವಾಗಿರುತ್ತದೆ. ಅದಕ್ಕಾಗಿ ಇದನ್ನು ಅಡಿಗೆಗೆ ಉಪಯೋಗಿಸುತ್ತಾರೆ. ಈ ಸೊಪ್ಪನ್ನು ಬಳಸಿ ಅಡುಗೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂದರೆ ಗಣಿಕೆ ಸೊಪ್ಪಿನ ಸಾರು ಮಾಡುತ್ತಾರೆ. ಗಣಿಕೆ ಸೊಪ್ಪಿನ ಸಾಗು ಮಾಡು ತ್ತಾರೆ .ಮತ್ತು ಗಣಿಕೆ ಸೊಪ್ಪಿನ ಬಜ್ಜಿ ಮಾಡುತ್ತಾರೆ. ಈ ರೀತಿ ಸುಮಾರು ರೀತಿಯಾಗಿ ಮಾಡುತ್ತಾರೆ.
ಇದರಲ್ಲಿ ಔಷಧಿ ಗುಣವನ್ನು ನೋಡುವುದಾದರೆ ಇದರಲ್ಲಿ ಅತಿ ಹೆಚ್ಚು ಕಬ್ಬಿಣಾಂಶ ಇದೆ ಅಂದರೆ ಐರನ್ ರಂಜಕ ಆಗಿರಬಹುದು. ವಿಟಮಿನ್ ಡಿ ಮತ್ತು ಸಿ ಅದಕ್ಕೋಸ್ಕರ ಇದನ್ನ ರೋಗನಿರೋಧಕ ಶಕ್ತಿಯನ್ನು ಹೊಂದಿರುವಂತಹ ಸೊಪ್ಪು ಎಂದು ಕರೆಯುತ್ತಾರೆ. ಈ ಸೊಪ್ಪಿನಿಂದ ಯಾರ್ಯಾರಿಗೆ ಜ್ವರ ಬಂದಿರುತ್ತದೆ ಅಗ್ನಿಮಾಂದ್ಯ ಆಗಿರುತ್ತದೆ ಲಿವರ್ ತೊಂದರೆ ಆಗಿರುತ್ತದೆ. ಕರುಳಿನಲ್ಲಿ ಹುಣ್ಣು ಮತ್ತು ಬಾಯಲ್ಲಿ ಹುಣ್ಣು ಆಗಿರುತ್ತದೆ ಅವರಿಗೂ ಕೂಡ ಈ ಸೊಪ್ಪನ್ನು ಉಪಯೋಗಿಸಿಕೊಳ್ಳ ಬಹುದು. ಮತ್ತು ಚರ್ಮರೋಗಕ್ಕೆ ಈ ರೀತಿಯ ಸುಮಾರು ರೋಗ ಗಳಿಗೆ ಈ ಸೊಪ್ಪನ್ನು ಬಳಸಿಕೊಳ್ಳುತ್ತಾರೆ.
ಯಾರಿಗೆ ಮಲಬದ್ಧತೆ ಅಜೀರ್ಣ ಮಧುಮೇಹ ರಕ್ತದೊತ್ತಡ ಯಾರಿಗೆ ಇರುತ್ತದೆ ಅವರಿಗೆ ಇದನ್ನು ಆಹಾರದಲ್ಲಿ ಬಳಸುವುದರಿಂದ ಮತ್ತು ಇನ್ನೊಂದು ಇದರಿಂದ ದೇಹದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳ ಬಹುದು. ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೆ ಯಾರಿಗೆ ಮೂಲವ್ಯಾಧಿ ಆಗಿರುತ್ತದೆಯೋ ಅಂದರೆ ಪೈಲ್ಸ್ ,ಪಿಸ್ತೂಲ, ಪಿಸುರ, ಈ ಬಿಸಿಲಿನ ತಾಪಕ್ಕೆ ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ . ಇದಕ್ಕೆಲ್ಲ ಈ ಸೊಪ್ಪನ್ನು ಬಳಸುವುದರಿಂದ ಕಡಿಮೆಯಾಗುತ್ತದೆ. ಮತ್ತು ಗಣಿಕೆ ಸೊಪ್ಪಿನ ಎಲೆಯನ್ನು ತಂದು ಅರಿಶಿನ ಬೆರೆಸಿ ಚೆನ್ನಾಗಿ ಅರೆದು ದಲ್ಲಿ ಯಾವ ಭಾಗದಲ್ಲಾದರೂ ನೋವಾಗಿದ್ದರೆ ಆ ಜಾಗಕ್ಕೆ ಇದನ್ನು ಹಚ್ಚಿದರೆ ನೋವು ಬೇಗ ಕಡಿಮೆಯಾಗುತ್ತದೆ.
