Thu. Sep 29th, 2022

ಈ ದಿನ ನಾವು ಗರ್ಭಿಣಿಯರಿಗೆ (ಪ್ರೆಗ್ನೆನ್ಸಿ) ಸಮಯದಲ್ಲಿ ವಾಂತಿಯಾಗುವುದರ ಬಗ್ಗೆ ಹಾಗೂ ಅದಕ್ಕೆ ಪರಿಹಾರ
ಗರ್ಭಿಣಿಯರಿಗೆ ಈ ಸಮಯದಲ್ಲಿ ವಾಂತಿಯಾಗುವುದು ಸಹಜ, ಆದರೆ ಕೆಲವರಿಗೆ ಕೆಲವು ಆಹಾರವನ್ನು ನೋಡಿದಾಗ,ಅದರ ವಾಸನೆ ಇಂದ ತಡೆಯಾಲಾಗದಷ್ಟು ವಾಂತಿಯಾಗುತ್ತದೆ. ಇದರಿಂದ ನಿಶ್ಯಕ್ತಿಯಾಗುತ್ತಾರೆ. ಅಂತಹ ಸಮಯದಲ್ಲಿ ನಾವು ಹೇಳುವಂತಹ ಮನೆಮದ್ದನ್ನು ಬಳಸುವುದರಿಂದ ವಾಂತಿಯಾಗುವುದು ಕಡಿಮೆಯಾಗುತ್ತದೆ‌.ಇದರಿಂದ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ನಾವು ಇಲ್ಲಿ ಮೂರು ವಿಧವಾದ ಔಷಧ ಗುಣವುಳ್ಳ ತರಕಾರಿ ನೀರಿನ ಬಗ್ಗೆ ತಿಳಿಸಿದ್ದೆವೆ. ಇದರಲ್ಲಿ ನೀವು ಒಂದು ಮಾಡಿದರೆ ಸಾಕು.ಮೊದಲನೆಯದಾಗಿ ಬೇಕಾಗಿರುವ ಪದಾರ್ಥಗಳು.ಬೂದಗುಂಬಳಕಾಯಿ ಮೂರರಿಂದ ನಾಲ್ಕು ಇಂಚು,ಕ್ಯಾರೆಟ ಎರಡು ಇಂಚು,ಮೂಲಂಗಿ ಎರಡು ಇಂಚು,ಬಿಟ್ರೋಟ್ ಎರಡು ಇಂಚು,ನಾಲ್ಕು ಪಾಲಕ ಎಲೆ,ಒಂದು ಕಪ್ ನೀರು.

ತರಕಾರಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮಿಕ್ಸಿಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು ನಂತರ ನೀರನ್ನು ಬೇರೆಸಿ ಅದನ್ನು ಶೋದಿಸಿಕೊಂಡು ಪ್ರತಿ ದಿನ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ಎರಡನೇ ರಾಮಬಾಣ ಔಷಧಿ ಅದಕ್ಕೆ ಬೇಕಾಗಿರುವ ಪಧಾರ್ಥಗಳು ಬಿಳಿ ಎಳ್ಳು (ಬಿಳಿ ಅಥವ ಕಪ್ಪು ಎಳ್ಳು)ಒಂದು ಚಮಚ, ಒಂದು ಸಣ್ಣ ಬೆಲ್ಲದ ತುಂಡು,ಅರ್ಧ ಕಪ್ ನೀರು ತಯಾರಿಸುವ ವಿಧಾನ ಬಿಳಿ ಎಳ್ಳನ್ನು ಕುಟಾಣಿ ಅಥವಾ ಮಿಕ್ಸಿಜಾರಿನಲ್ಲಿ ಪುಡಿ ಮಾಡಿಕೊಂಡು ಸ್ವಲ್ಪ ನೀರನ್ನು ಸೇರಿಸಿ ಇಡಿ ರಾತ್ರಿ ನೆನೆಸಿ ಮರು ದಿನ ಬೆಳ್ಳಿಗ್ಗೆ ಮಿಕ್ಸಿಜಾರಿಗೆ ನೆನೆಸಿದ ಎಳ್ಳು ನೀರು ಮತ್ತೆ ಬೆಲ್ಲ ಸೇರಿಸಿ ರುಬ್ಬಿಕೊಂಡು ಸ್ವಲ್ಪ ನೀರನ್ನು ಸೇರಿಸಿ ಒಂದು ಲೋಟಕ್ಕೆ ಶೋದಿಸಿ ಪ್ರತಿ ದಿನ ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಗರ್ಭಿಣಿಯರಿಗೆ ವಾಂತಿಯಾಗುವುದು ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೇಲಿನ ವಿಡಿಯೋ ನೋಡಿ.