Thu. Sep 29th, 2022

ಭಾದ್ರಪದ ಮಾಸದ 13 ನೇ ದಿನವನ್ನು ಸ್ವರ್ಣಗೌರಿ ವ್ರತವನ್ನು ನಮ್ಮ ಹಿಂದೂಗಳು ಆಚರಣೆ ಮಾಡುತ್ತಾರೆ. ಈ ವಿಶೇಷವಾದ ದಿನವು ಹೆಣ್ಣು ಮಕ್ಕಳ ಹಬ್ಬವೆಂದೆ ಪ್ರಸಿದ್ದಿಯನ್ನು ಪಡೆದಿವೆ ಕೈಲಾಸದಿಂದ ಸಾಕ್ಷಾತ್ ಮಹಾದೇವಿ ತನ್ನ ತವರು ಮನೆಗೆ ಬರುತ್ತಾಳೆ ಈ ವಿಶೇಷವಾದ ದಿನವೆ ಸ್ವರ್ಣಗೌರಿ ಹಬ್ಬ ಎಂದು ಕರೆಯುತ್ತಾರೆ. ನಂತರದ ದಿನ ಗಣಪತಿಯೂ ಕೈಲಾಸದಿಂದ ತನ್ನ ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಬರುತ್ತಾನೆ‌ ಎಂಬ ಪ್ರತೀತಿ ಇದೆ. ಹಾಗಾಗಿ ಈ ಗೌರಿ ಹಬ್ಬದ ದಿನ ಹೊಸದಾಗಿ ಮದುವೆ ಆದ ಅಥವಾ ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಬಾಗಿನವನ್ನು ನೀಡಿದರೆ ತುಂಬಾ ಅದೃಷ್ಟ ಹಾಗೂ ನಿಮ್ಮ ಸಂಸಾರಿಕ ಜೀವನವೂ ಸುಖ ಸಂಪತ್ತು ಸಮೃದ್ದಿ ಹಾಗೂ ಮುತ್ತೈದೆತನ ಶಾಶ್ವತವಾಗಿ ಇರುತ್ತದೆ.‌ ಇನ್ನು ಮೊರಾದ ಬಾಗಿನವನ್ನು ನೀವೆನಾದರೂ ಮೊದಲ ಬಾರಿ ನೀಡುತ್ತಿದ್ದರೆ ಈ ವಸ್ತುಗಳನ್ನು ಹಾಕಿ . ಮೊದಲಿಗೆ ವಿಳ್ಯೆದೆಲೆ , ಅಡಿಕೆ ಎರಡು ಬಾಳೆ ಹಣ್ಣು,

ತೆಂಗಿನ ಕಾಯಿ, ಅರಿಶಿನ, ಕುಂಕುಮ, ಕಣ್ಣು ಕಪ್ಪು ಡಬ್ಬಿ, ಚಿಕ್ಕ ಬಾಚಣಿಗೆ, ಚಿಕ್ಕ ಕನ್ನಡಿ ಹಣೆ ಬಟ್ಟು, ಗೌರಿ ಬಳೆ ಅಂದರೆ ಚಿಕ್ಕ ಕಪ್ಪು ಬಳೆಗಳು, ಒಂದು ಡಜನ್ ಗಾಜಿನ ಬಳೆ, ಸೀರೆ ಅಥವಾ ಬ್ಲೌಸ್ ಪೀಸ್, ಅರಿಶಿನದ ಕೊನೆ, ಗೌರಿದಾರ, ಐದು ತರಹದ ಬೇಳೆಗಳು ಅಂದರೆ ತೊಗರಿ ಬೆಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿರು ಬೇಳೆ, ಹಾಗೂ ಒಂದು ಧಾನ್ಯ ಗೋಧಿ ಅಥವಾ ರವೆ. ಅಕ್ಕಿ , ಒಂದು ಹಚ್ಚು ಬೆಲ್ಲ ಇವೆಲ್ಲವನ್ನು ಹೊಸ ಮೊರಾಕ್ಕೆ ಹಾಕಬೇಕು ನಂತರ ಒಂದು ಮೊರದ ಮೇಲೆ ಇನ್ನೊಂದು ಮೊರಾವನ್ನು ವಿರುದ್ದ ದಿಕ್ಕಿನಲ್ಲಿ ಮುಚ್ಚಿ ಇಟ್ಟು ನಂತರ ಮನೆಗೆ ಬರುವ ಮುತ್ತೈದೆಯರಿಗೆ ಕಾಲಿಗೆ ಕೈಗೆ ಅರಿಶಿನ ಹಚ್ಚಿ ಅವರಿಗೆ ಬಾಗಿನ‌ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು, ಹೀಗೆ ಮಾಡೊದರಿಂದ ಗೌರಿ ದೇವಿಯ ಸಂಪೂರ್ಣ ಅನುಗ್ರಹವಾಗುತ್ತದೆ ಹಾಗೂ ಸುಖ ಶಾಂತಿ ನೆಮ್ಮದಿ ಸಮೃದ್ದಿ ಮುತ್ತೈದೆ ಭಾಗ್ಯ ಪ್ರಾಪ್ತಿ ಆಗುತ್ತದೆ.ಜೈ ಗೌರಿ ತಾಯಿ ಅಂತ ಕಾಮೆಂಟ್ ಮಾಡಿ‌ ಧನ್ಯವಾದಗಳು