ಒಮ್ಮೆ ಮಾಡಿ ಸೇವನೆ ಮಾಡಿದರೆ ಸಾಕು ಮತ್ತೆ ಮತ್ತೆ ಕುಡಿಯಬೇಕು ಅನಿಸುತ್ತದೆ ಅಷ್ಟು ಚೆನ್ನಾಗಿರುತ್ತದೆ ಆಗು ಬೇಸಿಗೆಕಾಲದಲ್ಲಿ ಈ ಮಜ್ಜಿಗೆಯನ್ನು ಕುಡಿಯುವುದರಿಂದ ನಮ್ಮ ದೇಹ ತುಂಬಾ ತಂಪಾಗಿರುತ್ತದೆ ಮತ್ತು ನಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಬೇಕಾಗಿರುವಂತಹ ಸಾಮಾಗ್ರಿಗಳು ಗೋಡಂಬಿ ಬಾದಾಮಿ ನಂತರ ಖರ್ಜೂರ ಮಜ್ಜಿಗೆ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ 10 ಗೋಡಂಬಿ ನಂತರ 10 ಬಾದಾಮಿ ಹಾಕಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಬೇಕು ಅದಾದ ಮೇಲೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಖರ್ಜೂರ ನಂತರ ಗೋಡಂಬಿ ಬಾದಾಮಿ ಎಲ್ಲವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ಅದಾದ ಮೇಲೆ ಮಜ್ಜಿಗೆ ತೆಗೆದುಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿ ನಂತರ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದೀಗ ರುಚಿಕರವಾದ ಅಂತಹ ಮಜ್ಜಿಗೆ ರೆಡಿಯಾಗಿದೆ ಒಂದು ಲೋಟಕ್ಕೆ ಮಜ್ಜಿಗೆ ಹಾಕಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ದೇಹ ತಂಪಾಗಿರುತ್ತದೆ ಹಾಗೂ ಚಿಕ್ಕ ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ಕುಡಿಯುತ್ತಾರೆ ನೀವು ಕೂಡ ಒಮ್ಮೆ ಮನೆಯಲ್ಲಿ ಮಾಡಿನೋಡಿ ಹೇಗಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.
