ತಲೆನೋವು ಮೈಗ್ರೇನ್ ಏನೇ ಇದ್ದರು ದಿನಕ್ಕೆ ಎರಡು ಚಮಚ ಇದನ್ನು ಸೇವಿಸಿ ತಲೆನೋವು ಜೀವನದಲ್ಲಿ ಮತ್ತೆ ಬರುವುದಿಲ್ಲ.ವಿಪರೀತವಾದಂತಹ ತಲೆನೋವು ಮತ್ತು ಮೈಗ್ರೇನ್ ನಿಂದ ನೀವು ತುಂಬಾನೇ ಸಮಸ್ಯೆ ಅನುಭವಿಸುತ್ತಿದ್ದಾರೆ ದಿನಕ್ಕೆ ಎರಡು ಚಮಚ ಇದನ್ನು ಸೇವಿಸಿ ಜೀವನದಲ್ಲಿ ಎಂದಿಗೂ ಕೂಡ ತಲೆನೋವು ನಿಮ್ಮನ್ನು ಬಾಧಿಸುವುದಿಲ್ಲ. ಸಾಮಾನ್ಯವಾಗಿ ತಲೆನೋವು ಎಂಬುವುದು ಪ್ರತಿಯೊಬ್ಬರಿಗೂ ಕೂಡ ಬರುವಂತಹ ನೋವಾಗಿದೆ. ಕೆಲವೊಮ್ಮೆ ಇದು ತಿಂಗಳಿಗೆ ಹದಿನೈದು ದಿನಕ್ಕೊಮ್ಮೆ ಬರುತ್ತದೆ ಆದರೆ ಕೆಲವರಿಗೆ ಪ್ರತಿನಿತ್ಯ ತಲೆನೋವು ಬರುತ್ತದೆ. ಹಾಗಾಗಿ ಇಂತಹ ತಲೆನೋವು ಬಂದಾಗ ಅವರು ವಿಪರೀತವಾದ ನೋವು ಅನುಭವಿಸಬೇಕಾಗುತ್ತದೆ. ಈ ತಲೆನೋವು ಹೋಗುವುದಕ್ಕೆ ಪ್ರತಿನಿತ್ಯವೂ ಕೂಡ ಅವರು ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ದೇಹಕ್ಕೆ ತುಂಬಾನೇ ಅಡ್ಡಪರಿಣಾಮಗಳು ಉಂಟಾಗುತ್ತದೆ. ಹಾಗಾಗಿ ಯಾವುದೇ ರೀತಿಯಾದಂತಹ ಮಾತ್ರೆ ಹಾಗೂ ಇಂಜೆಕ್ಷನ್ ಸಹಾಯವಿಲ್ಲದೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಾಗಿ ತಲೆನೋವನ್ನು ಹೋಗಲಾಡಿಸಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.
ಮೊದಲನೇದಾಗಿ ಈ ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಏನು ಅಂತ ನೋಡುವುದಾದರೆ ಚಕ್ಕೆ ಪುಡಿ ಹಾಗೂ ಅರಿಶಿಣದ ಪುಡಿ ಈ ಎರಡು ಇದ್ದರೆ ಸಾಕು ಮನೆಮದ್ದನ್ನು ತಯಾರಿಸಬಹುದಾಗಿದೆ. ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಚಕ್ಕೆ ಪುಡಿ ಹಾಗೂ ಒಂದು ಟೇಬಲ್ ಸ್ಪೂನ್ ಅರಶಿಣದ ಪುಡಿಯನ್ನು ಹಾಕಿ ಇವೆರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ತಯಾರು ಮಾಡಿಕೊಂಡಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಳಗಿನ ಸಮಯದಲ್ಲಿ ಸೇವನೆ ಮಾಡಬೇಕು. ಹಾಗೂ ಸಾಯಂಕಾಲದ ಸಮಯ ಒಂದು ಗ್ಲಾಸ್ ಬಿಸಿ ನೀರಿಗೆ ತಯಾರಿಸಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸೇವನೆ ಮಾಡಬೇಕು. ತಲೆನೋವು ಬಂದಾಗ ದಿನಕ್ಕೆ ಎರಡು ಬಾರಿ ಈ ಒಂದು ಮಿಶ್ರಣವನ್ನು ಸೇವನೆ ಮಾಡುವುದರಿಂದ ತಲೆನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
