Fri. Sep 29th, 2023

ತುಂಬಾ ದುಃಖ ಆಗಿದ್ದರೆ ತಲೆಯಲ್ಲಿ ಗೊಂದಲ ಇದ್ದರೆ ಶ್ರೀಕೃಷ್ಣನ ಈ 5 ಪಾಠವನ್ನು ಮರೆಯಬೇಡಿ…

ಯಾವಾಗ ಕುರುಕ್ಷೇತ್ರದಲ್ಲಿ ಪಾಂಡವರು ಮತ್ತು ಕೌರವರ ಯುದ್ಧ ಪ್ರಾರಂಭವಾಗುತ್ತದೆ ಆಗ ಅರ್ಜುನನು ತುಂಬಾ ದುಃಖದಲ್ಲಿ ಇರುತ್ತಾನೆ. ಅಲ್ಲದೆ ತುಂಬಾನೇ ಗೊಂದಲದಲ್ಲಿ ಇರುತ್ತಾನೆ ಆಗ ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯ ಸಾರವನ್ನು ತಿಳಿಸುತ್ತಾನೆ. ಆಗ ಅರ್ಜುನನು ದುಃಖದಿಂದ ಹಾಗೂ ಗೊಂದಲದಿಂದ ಹೊರ ಬರುತ್ತಾನೆ ಮುಖ್ಯವಾಗಿ ಐದು ಭಗವದ್ಗೀತೆಯ ಸಾರವು ಅರ್ಜುನನ ದಿಕ್ಕನ್ನೇ ಬದಲಾಯಿಸುತ್ತದೆ. ಹಾಗಾಗಿ ಇಂದು 5 ಮುಖ್ಯ ಗೀತೆಯ ಸಾರಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ನಿಮಗೆ ತಿಳಿಸಲಾಗುವುದು. ಈಗಿನ ಕಾಲದಲ್ಲಿ ಯುವಕರೇ ಅತಿ ಹೆಚ್ಚು ನಿರಾಶೆಯಲ್ಲಿ ಮತ್ತು ಡಿಪ್ರೆಶನ್ ನಲ್ಲಿ ಇರುತ್ತಾರೆ ಅವರಿಗೆ ಮಾರ್ಗದರ್ಶನದ ಅಗತ್ಯ ಇರುತ್ತದೆ. ಭಗವಾನ್ ಶ್ರೀಕೃಷ್ಣನು ಅಂದು ತಿಳಿಸಿದಂತಹ ಭಗವದ್ಗೀತೆಯ ಸಾರವು ಇಂದಿನ ಯುವಕರಿಗೆ ತುಂಬಾನೇ ಮುಖ್ಯವಾಗಿದೆ.

ಮೊದಲನೆಯ ಸಾರ ತ್ಯಾಗ ಕೌರವರ ಕಡೆ ಯುದ್ಧ ಮಾಡುತ್ತಿದ್ದಂತಹ ಕರ್ಣನ ಹತ್ತಿರ ಇಂದ್ರಸ್ತ್ರ ಇತ್ತು ಅಂದರೆ ಎಷ್ಟೇ ದೊಡ್ಡ ಪರಾಕ್ರಮಿಯಾಗಿದ್ದರು ಇಂದ್ರಸ್ತ್ರದ ಮುಂದೆ ಅವರು ಎಷ್ಟೇ ಬಲಶಾಲಿಯಾಗಿದ್ದರು ಕೂಡ ಅವರ ಸಾವು ಖಚಿತವಾಗಿತ್ತು. ಈ ವಿಚಾರ ಶ್ರೀ ಕೃಷ್ಣನಿಗೆ ತಿಳಿದಿತ್ತು ಹಾಗಾಗಿ ಭೀಮನ ಮಗ ಘಟೋದ್ಗಜನಿಕೆ ಕರ್ಣನ ಜೊತೆ ಯುದ್ಧ ಮಾಡುವುದಕ್ಕೆ ಹೇಳುತ್ತಾನೆ. ಘಟೋದ್ಗಜ ಬಹಳನೇ ಶಕ್ತಿಯನ್ನು ಹೊಂದಿದಂತಹ ಪರಾಕ್ರಮಿ ಈತನನ್ನು ನೋಡಿದರೆ ಸಾಕು ಅದೆಷ್ಟೋ ಜನ ಎದೆ ಒಡೆದುಕೊಂಡು ಸಾಯುತ್ತಿದ್ದರು. ಅಂತಹ ಪರಾಕ್ರಮಿ ಈತ ಈ ಒಂದು ಕಾರಣದಿಂದಾಗಿ ಕರ್ಣನಿಗೆ ಇಂದ್ರಸ್ತ್ರ ಉಪಯೋಗ ಮಾಡುವಂತಹ ಸಂದರ್ಭ ಒದಗಿ ಬರುತ್ತದೆ. ಆಗ ಕರ್ಣನು ಇಂದ್ರಸ್ತ್ರವನ್ನು ಘಟೋದ್ಗಜನ ಮುಂದೆ ಪ್ರಯೋಗ ಮಾಡಬೇಕಾಗುತ್ತದೆ. ಈ ಒಂದು ಕಾರಣದಿಂದ ಘಟೋದ್ಗಜ ಸಾವನಪ್ಪುಬೇಕಾತ್ತದೆ ಕೃಷ್ಣ ಇಲ್ಲಿ ಘಟೋದ್ಗಜ ಪರಾಕ್ರಮಿಯನ್ನು ತ್ಯಾಗ ಮಾಡುವಂತಹ ಕಾಲ ಬಂದಿತ್ತು.