Fri. Mar 1st, 2024

ತುಲಾ ರಾಶಿ 2022 ರ ವರ್ಷ ಭವಿಷ್ಯ…ಕಳೆದ ಒಂದೆರಡು ವರ್ಷಗಳಿಂದ ತುಲಾ ರಾಶಿಯವರು ಹೋರಾಟದ ಜೀವನವನ್ನು ಸಾಗಿಸುತ್ತಿದ್ದಾರೆ ಸಾಕಷ್ಟು ಏರುಪೇರುಗಳು ಆಗಿದ್ದಾವೆ ಅಷ್ಟೇ ಅಲ್ಲದೆ ತಮ್ಮ ಜೀವನದಲ್ಲಿ ತುಂಬಾ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಅಂದರೆ 2021 ರಲ್ಲಿ ಗುರುವಿನ ಅನುಗ್ರಹದಿಂದ ತಕ್ಕ ಮಟ್ಟಿಗೆ ಇವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಮಾತ್ರ ಅನುಭವಿಸಿದ್ದಾರೆ. ಆದರೆ ಶತ್ರುಗಳ ತೊಂದರೆ ಅನಾರೋಗ್ಯ, ಆರ್ಥಿಕ ಸಮಸ್ಯೆಗಳು, ಉದ್ಯೋಗದಲ್ಲಿ ಸಂಕಷ್ಟಗಳು, ಈ ರೀತಿ ನಾನಾ ರೀತಿಯಾದಂತಹ ತೊಂದರೆಗಳು ಮುಂದುವರೆದಿದೆ. ವರ್ಷ ಇಷ್ಟೆಲ್ಲಾ ಸಮಸ್ಯೆ ಆಗಿದೆ ಆದರೆ ಮುಂದೆ ಬರುವಂತಹ 2022 ತುಲಾ ರಾಶಿಯವರಿಗೆ ಯಾವ ರೀತಿಯಾದಂತಹ ಶುಭ ಫಲವನ್ನು ನೀಡುತ್ತದೆ ಯಾವುದಾದರೂ ನಂಬಿಕೆಯನ್ನು ಇಡಬಹುದಾ ಉನ್ನತವಾದಂತಹ ಕ್ಷೇತ್ರದಲ್ಲಿ ಇವರಿಗೆ ಯಶಸ್ಸು ದೊರೆಯಬಹುದು ಇನ್ನು ಮುಂತಾದ ಮಾಹಿತಿಗಳನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ಇನ್ನೂ ಈ ಒಂದು ತುಲಾ ರಾಶಿಗೆ ಶನಿ ಗ್ರಹ ಎಂಬುವುದು ತುಂಬಾನೇ ಮುಖ್ಯ ಶನಿಗ್ರಹವು ರಾಶ್ಯಾಧಿಪತಿ ಆದಂತಹ ಶುಕ್ರನಿಗೆ ತುಂಬಾನೇ ಮಿತ್ರ. ಅಲ್ಲದೆ ತುಲಾ ರಾಶಿ ಎಂದರೆ ಶನಿಗೆ ಬಹಳ ಇಷ್ಟ ಶನಿಗ್ರಹವು ಈ ವರ್ಷ ಎರಡು ಬಾರಿ ಪರಿವರ್ತನೆಯಾಗಲಿದೆ. ಇನ್ನು ತುಲಾರಾಶಿಯವರ ಗುಣಲಕ್ಷಣವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ನಾನು ಮಾತ್ರ ಚೆನ್ನಾಗಿದ್ದರೆ ಸಾಲದು ನನ್ನ ಜೊತೆ ಇರುವವರು ಕೂಡ ಚೆನ್ನಾಗಿರಬೇಕು ಎಂಬ ಮನೋಭಾವನೆಯನ್ನು ನೀವು ಹೊಂದಿರುತ್ತೀರ. ಅಷ್ಟೇ ಅಲ್ಲದೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಯಶಸ್ಸನ್ನು ನೀವು ಹೊಂದಿದಾಗ ಯಶಸ್ಸನ್ನು ನಿಮ್ಮ ಪರಿವಾರದವರು ಕೂಡ ಹೊಂದಬೇಕು ಎಂಬ ಆಸೆಯನ್ನು ಹೊಂದಿರುತ್ತಿರ. ಇನ್ನೂ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಕುಟುಂಬದಲ್ಲಿ ಯಾವುದೇ ರೀತಿಯಾದಂತಹ ಕಲಹ ಉದ್ಯೋಗದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರಬಾರದು ಎಂದು ಸದಾಕಾಲ ನೀವು ಚಿಂತಿಸುತ್ತ ಇರುತ್ತೀರ.