Wed. Jun 7th, 2023

ಮೇಷ ರಾಶಿ: ಈ ದಿನದಲ್ಲಿ ನಿಮಗೆ ಅಷ್ಟು ಒಳ್ಳೆಯ ಫಲಗಳೆನು ಸಿಗುವುದಿಲ್ಲ, ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಹಾಗೆನೆ ಪ್ರೀತಿ ಪ್ರೇಮ ವಿಚಾರದಲ್ಲಿ ಹಿನ್ನಡೆಯಾಗಬಹುದು ಹಾಗೂ ಜೊತೆಗಾರರ ನಡುವೆ ಮಾತಿನ ಚಕಮಕಿ ನಡೆಯುವ ಸಾದ್ಯಾತೆ ಹೆಚ್ಚು. ಮೌನ ವಹಿಸಿದರೆ ಈ ದಿನ ಕಳೆಯುತ್ತದೆ.

ವೃಷಭ: ಈ ದಿನ ಹಣದ ವಿಚಾರವಾಗಿ ಯಾರು ಓಡಾಡತ್ತಿರುತ್ತಿರ ಅವರಿಗೆ ಶುಭಯೋಗ ಅಂತ ಹೇಳಬಹುದು ಇನ್ನು ಗೃಹಿಣಿಯರಿಗೆ ಸ್ವಲ್ಲ ಆಯಾಸದ ದಿನ ಕಾರಣ ನಿಮ್ಮ ಮನೆಗೆ ಅತಿಥಿಗಳು ಬರುತ್ತಾರೆ. ವಿದ್ಯಾರ್ಥಿಗಳಿಗೆ ಸಹ ಶುಭಫಲ.

ಮಿಥುನ ರಾಶಿ: ಈ ರಾಶಿಯವರಿಗೆ ಆಕಸ್ಮಿಕವಾಗಿ ಪ್ರಯಾಣ ಮಾಡಬೇಕಾದ ಸಂದರ್ಭ ಒದಗಿಬರುತ್ತದೆ, ಇನ್ನು ಮದುವೆ ವಿಚಾರವಾಗಿ ಏನಾದರೂ ನೀವು ಹುಡುಗ/ಹುಡುಗಿ ನೋಡಿದ್ದರೆ ಅದು ಕೂಡದೆ ನಿಮಗೆ ಮನಸಿಗೆ ಬೇಸರವಾಗಬಹುದು ಆದರೆ ದಿನದ ಕೊನೆಯಲ್ಲಿ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ತಂದೆ ತಾಯಿಗಳ ಆಶೀರ್ವಾದದಿಂದ ಇಂದು ವಾಹನದ ಯೋಗ ಕೂಡಿ ಬರುತ್ತದೆ. ಜೊತೆಗೆ ಮಹಾ ಶುಭದಿನ ಕಾರಣ ನಿಮಗೆ ಉದ್ಯೋಗದ ಜಾಗದಲ್ಲಿ ಇರುವ ಕಿರಿಕಿರಿ ತಪ್ಪುತ್ತದೆ.

ಸಿಂಹ ರಾಶಿ: ಕೋಪವನ್ನು ನಿಯಂತ್ರಿಸಿದರೆ ಲಾಭದ ಜೊತೆಗೆ ದಿನದ ಕೊನೆಯಲ್ಲಿ ಮುಖ್ಯವಾದ ಕೆಲಸಗಳನ್ನು ಮುಗಿಸುತ್ತಿರಾ ಇಲ್ಲವಾದರೆ ನಿಮ್ಮ‌ಮುಂದಿನ ಭವಿಷ್ಯಕ್ಕೆ ತೊಡಕಾಗುವ ಸಾಧ್ಯಾತೆ, ಹಿತ ಶತ್ರುಗಳಿಂದ ಎಚ್ಚರಿಕೆಯಿಂದ ಇರಬೇಕು ನಿಮಗೆ ಈ ದಿನ ದೈವಾನುಗ್ರಹವಿದೆ ಶುಭಫಲ ಖಚಿತ ಆದರೆ ಕೋಪ ನಿಯಂತ್ರಣದಲ್ಲಿ ಇರಬೇಕು.

ಕನ್ಯಾ ರಾಶಿ: ಮನಸಿಗೆ ಉಲ್ಲಾಸಕರವಾದ ವಾತಾವರಣ ನಿಮ್ಮ ಮನೆಯಲ್ಲಿ ಆಗುತ್ತದೆ ಹೆಂಡತಿ / ಗಂಡ ನಿಮಗೆ ಉಡುಗೊರೆ ನೀಡುತ್ತಾರೆ, ಮನಸು ಶಾಂತವಾಗಿರುವ ದಿನವಿದು ಆದರೆ ನಿಮ್ಮ ಮಕ್ಕಳ ಮೇಲೆ‌ ಗಮನಹರಿಸಿ.

ತುಲಾ‌ ರಾಶಿ: ಜೀವನದ ಮೇಲೆ‌ ಜಿಗುಪ್ಸೆ ಬರುವಂತಹ ಘಟನೆ‌ ಜರಗುವ ಕೆಟ್ಟ ದಿನವಿದು ಆದರೆ ನಿಮ್ಮ ಇಷ್ಟ ದೈವದ ಪ್ರಾರ್ಥನೆಯಿಂದ ನಿಮಗೆ ದಿನದ ಕೊನೆಯಲ್ಲಿ ಒಳಿತಾಗುತ್ತೆ.‌ ಯಾರನ್ನು ಕೀಳಾಗಿ ನೋಡಬೇಡಿ ಇದು ನಿಮಗೆ ನಕಾರಾತ್ಮಕ ಪರಿಣಾಮ ಬೀರಬಹುದು.

ಧನಸ್ಸು ರಾಶಿ: ಈ ದಿನ ಹಣ ಕಾಸಿನ ವಿಚಾರದಲ್ಲಿ ಅಂದುಕೊಂಡಷ್ಟು ಕೈಗೂಡದು, ಮನೆಯ ಹಿರಿಯರಿಗೆ ಅನಾರೋಗ್ಯ ಕಾಡುತ್ತದೆ‌, ಮನೆ ದೇವರಿಗೆ ತುಪ್ಪದ ದೀಪ ಹಚ್ಚುವುದರಿಂದ ಹೆಚ್ಚಿನ ಶುಭಫಲಗಳನ್ನು ಕಾಣುತ್ತಿರ

ವೃಶ್ಚಿಕ‌ರಾಶಿ: ನಿಮಗೆ ಇಂದು ಶುಭದಿನ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ‌ಅಂತಾನೆ ಹೇಳಬಹುದು. ಗಂಡ ಹೆಂಡತಿಯರ ನಡುವೆ ಒಳ್ಳೆಯ ಬಾಂದವ್ಯ ಬರುತ್ತದೆ, ಮಕ್ಕಳಿಗೆ ಸಂತಸದ ದಿನ.

ಮಕರ ರಾಶಿ: ಮಾಡಿದ‌ ಪಾಪಾ ಕರ್ಮಗಳನ್ನು‌ ಅನುಭವಿಸುವ ದಿನವಿದು, ಮನಸಿನ ಮಾತಿನಂತೆ‌ ನಡೆದರೆ‌ ಜೀವನದಲ್ಲಿ ‌ಯಶಸ್ಸು‌ ದೊರೆಯುತ್ತದೆ, ಅನ್ಯರ ಮಾತಿನಿಂದ ಈ ದಿನ ನಷ್ಟವಾಗತ್ತದೆ ಎಚ್ಚರ.

ಕುಂಭ ರಾಶಿ: ವ್ಯಾಪಾರಸ್ಥರಿಗೆ ಲಾಭದ ದಿನ, ಟೀಚರ್ ಗಳಿಗೆ ಸ್ವಲ್ಪ ಒತ್ತಡದ ದಿನವಾಗಬಹುದು, ಪ್ರೀತಿ ವಿಚಾರದಲ್ಲಿನ ಬಹುದಿನಗಳ ತೊಂದರೆ ಸರಿಯಾಗಿ ನಿಮ್ಮ ಪ್ರೀತಿ‌ಪಾತ್ರರ ಭೇಟಿಯಾಗುತ್ತದೆ.

ಮೀನ ರಾಶಿ: ಆರೋಗ್ಯದ ಕಡೆ ಎಚ್ಚರಿಕೆ ವಹಿಸಿ‌ ಬಹುದಿನಗಳ ನಿಮ್ಮ‌ಕನಸು ನನಸಾಗುತ್ತದೆ ಹಾಗೂ ಮನೆಯಲ್ಲಿ ಶುಭಕಾರ್ಯ ಜರಗುತ್ತದೆ ಮತ್ತಷ್ಟು ಹೆಚ್ಚಿನ ಶುಭಫಲಕ್ಕಾಗಿ ಮನೆ ದೇವರನ್ನು ಪ್ರಾರ್ಥಿಸಿ.