Fri. Dec 8th, 2023

ನಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆಮಾಡಿಕೊಳ್ಳಲು ಮನೆಯಲ್ಲೇ ತಯಾರಿಸಿ ರುವಂತಹ ಮನೆಮದ್ದನ್ನು ನಾನು ನಿಮಗೆ ತಿಳಿಸುತ್ತೇನೆ ಬನ್ನಿ ಇದಕ್ಕೆ ಬೇಕಾಗಿರುವ ಮನೆಮದ್ದಿನ ಪದಾರ್ಥಗಳು ಒಂದು ಮುಷ್ಟಿಯಷ್ಟು ಕೊತ್ತಂಬರಿಯನ್ನು ತೆಗೆದುಕೊಂಡಿದ್ದೇನೆ ಒಂದು ಮುಷ್ಟಿ ಕೊತ್ತಂಬರಿ ಬೀಜಕ್ಕೆ ಒಂದು ಲೀಟರ್ ಅಷ್ಟು ನೀರು ತೆಗೆದುಕೊಂಡಿದ್ದೇನೆ ಮೊದಲಿಗೆ ಕೊತ್ತಂಬರಿ ಬೀಜವನ್ನು ಸ್ವಲ್ಪ ಉರಿದುಕೊಳ್ಳುತ್ತೇನೆ ಇದನ್ನ ನಾನು ಡ್ರೈ ರೋಸ್ಟ್ ಮಾಡುತ್ತೇನೆ ಸ್ವಲ್ಪ ಗಮಲು ಬರುವ ರೀತಿ ಮಾಡಿಕೊಳ್ಳಬೇಕು ಇವಾಗ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಂಡರೆ ಸಾಕು ಇವಾಗ ಸ್ಟವ್ ಆಫ್ ಮಾಡಿ ಕುಟಾಣಿ ಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.

ಇದನ್ನು ಮಿಕ್ಸಿಗೆ ಹಾಕಿ ಕೊಳ್ಳಬಾರದು ಕುಟಾಣಿ ಕಲ್ಲಿನಲ್ಲಿ ಹಾಕಿ ಪುಡಿ ಮಾಡಬೇಕು ಪುಡಿಮಾಡಿ ಆಗಿದೆ ಇವಾಗ ನಾನು ಸ್ಟವ್ ಮೇಲೆ ಒಂದು ಲೀಟರ್ ನೀರನ್ನು ಇಡುತ್ತಿದ್ದೇನೆ ಆ ನೀರಿಗೆ ಕೊತ್ತಂಬರಿ ಪುಡಿಯನ್ನು ಆಗುತ್ತಿದ್ದೇನೆ ಈ ಡ್ರಿಂಕು ತುಂಬಾ ತಂಪು ನಮ್ಮ ಬಾಡಿಯನ್ನು ಉಷ್ಣತೆ ಇದ್ದಾಗ ಉರಿಮೂತ್ರ ಆಗುವಾಗ ಮತ್ತು ಕಣ್ಣು ಉರಿ ಗ್ಯಾಸ್ಟ್ರಬಲ್ ಎಲ್ಲದಕ್ಕೂ ತುಂಬಾ ಒಳ್ಳೆಯ ಮನೆ ಮದ್ದು ಈಗ ಚೆನ್ನಾಗಿ ಕುದಿಸಿದ ನಂತರ ಬೇರೆ ಪಾತ್ರೆಗೆ ಸೋಸಿಕೊಳ್ಳಬೇಕು ಇದನ್ನು ಕೊತ್ತಂಬರಿ ನೀರು ಅಂತನಾದರೂ ಹೇಳಬಹುದು ಅಥವಾ ಕೊತ್ತಂಬರಿ ಕಷಾಯ ಅಂತಾದರೂ ಹೇಳಬಹುದು.

ಈ ಕಷಾಯವನ್ನು ನಾವು ಬೆಳಿಗ್ಗೆ ಮಾಡಿಟ್ಟರೆ ರಾತ್ರಿಯ ತನಕ ಕುಡಿಯಬಹುದು ನೀವು ಯಾವಾಗ ಯಾವಾಗ ನೀರು ಕುಡಿಯುತ್ತೀರಾ ಅಲ್ಲೆಲ್ಲ ಕೊತ್ತಂಬರಿ ಕಷಾಯವನ್ನು ಕುಡಿಯಬಹುದು ಇದನ್ನು ಕುಡಿಯುವುದರಿಂದ ಉರಿಮೂತ್ರ ಆಗುವುದು ಉಷ್ಣತೆ ಗ್ಯಾಸ್ಟಿಕ್ ಮತ್ತು ಕೈ ಕಾಲು ಉರಿ ಬರುವುದು ಇದೆಲ್ಲವೂ ನಿವಾರಣೆಯಾಗುತ್ತದೆ ನೋಡಿದಿರಲ್ಲ ಈ ಕೊತ್ತಂಬರಿ ಕಷಾಯವನ್ನು ಮನೆಯಲ್ಲೇ ಯಾವ ರೀತಿ ಮಾಡಿಕೊಂಡು ನಮ್ಮ ದೇಹದ ಉಷ್ಣತೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ನೀವು ಸಹ ನಿಮ್ಮ ಮನೆಯಲ್ಲಿ ಕೊತ್ತಂಬರಿ ಕಷಾಯವನ್ನು ಮಾಡಿ ಕುಡಿದು ನೋಡಿ.