Fri. Mar 1st, 2024

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗುತ್ತದೆ ಆದರೆ ಕೆಲವೊಂದು ಸಮಸ್ಯೆಗಳನ್ನು ನಮ್ಮ ಪರಿಸರದಲ್ಲಿ ಸಿಗುವಂತಹ ಗಿಡಮೂಲಿಕೆ ಔಷಧಿ ಗಳನ್ನು ಉಪಯೋಗಿಸಿ ನಾವು ತಿಂದಂತ ಆಹಾರದಲ್ಲಿ ಬೇಡವಾದ ಕಶ್ಮಲ ತ್ಯಾಜ್ಯವನ್ನು ಹೊರಹಾಕುವು ದಕ್ಕೆ ನಾನು ಇಲ್ಲಿ ತೋರಿಸಿ ಕೊಡುತ್ತಿರುವ ನುಗ್ಗೆ ಸೊಪ್ಪಿನ ಚಟ್ನಿಯನ್ನು ತಿನ್ನುವುದರಿಂದ ನಮ್ಮ ದೇಹದ ಕಶ್ಮಲವನ್ನು ಹೊರಹಾಕಿ ಸಿ ನಮ್ಮನ್ನು ಆರೋಗ್ಯದಿಂದ ತೋರಿಸುತ್ತದೆ ಹಾಗಾದರೆ ನುಗ್ಗೆ ಸೊಪ್ಪಿನ ಚಟ್ನಿಯನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ. ನುಗ್ಗೆ ಸೊಪ್ಪಿನ ಲ್ಲಿ ಹತ್ತು ಹಲವಾರು ಔಷಧಿ ಗುಣಗಳಿವೆ ಮತ್ತು ನುಗ್ಗೆ ಸೊಪ್ಪನ್ನು ತಿನ್ನುವುದರಿಂದ ನಮ್ಮ ಲಿವರ್ಗೆ ತುಂಬಾನೆ ಒಳ್ಳೆಯದು ನುಗ್ಗೆಸೊಪ್ಪು ನಮ್ಮ ಚರ್ಮಕ್ಕೆ ತುಂಬಾನೆ ಒಳ್ಳೆಯದು ನುಗ್ಗೆ ಸೊಪ್ಪಿನ ಚಟ್ನಿ ಮಾ ಡಲು ಬೇಕಾಗಿರುವ ಸಾಮಾಗ್ರಿಗಳು.

ನುಗ್ಗೆಸೊಪ್ಪು ಉದ್ದಿನಬೇಳೆ ಕಡಲೆಬೇಳೆ ಮತ್ತು ದನಿಯ ಕಾಳು ಎಲ್ಲವ ನ್ನು ಎರಡೆರಡು ಚಮಚ ಹಾಕಿಕೊಳ್ಳಿ ಮತ್ತು ಸ್ವಲ್ಪ ತೆಂಗಿನ ತುರಿ ಹುಣಸೆಹಣ್ಣು ಹಸಿಮೆಣಸಿನಕಾಯಿ ಸ್ವಲ್ಪ ಇಂಗು ರುಚಿಗೆ ತಕ್ಕಷ್ಟು ಉಪ್ಪು ಈಗ ಮಾಡುವ ವಿಧಾನ ಹೇಗೆ ಅಂದರೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ ಕಡಲೆಬೇಳೆ ದನಿಯಾ ಎಲ್ಲವನ್ನು ಹಾಕಿ ಹುರಿದುಕೊಳ್ಳಬೇಕು ನಂತರ ತೆಂಗಿನ ತುರಿ ಹಸಿ ಮೆಣಸಿನ ಕಾಯಿ ಇಂಗು ಎಲ್ಲವನ್ನೂ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ ನಂತರ ಸೊಪ್ಪನ್ನು ಹಾಕಿ ಚೆನ್ನಾಗಿ ಎಣ್ಣೆಯಲ್ಲಿ ಹುರಿಯಬೇಕು. ಈಗ ಎಣ್ಣೆಯಲ್ಲಿ ಫ್ರೈ ಮಾಡಿರುವುದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು ನಂತರ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಕೊಳ್ಳಬೇಕು ಅನ್ನಕ್ಕೆ ದೋಸೆಗೆ ಚಪಾತಿಗೆ ಇದು ತುಂಬಾನೆ ರುಚಿಕರವಾಗಿರುತ್ತದೆ.