ನವರಾತ್ರಿಯ ನಾಲ್ಕನೆ ದಿನ ಯಾವ ದೇವಿಯ ಯಾವ ಅವತಾರವನ್ನು ಪೂಜಿಸಬೇಕು, ಯಾವ ಮಂತ್ರವನ್ನು ಪಠಿಸಬೇಕು ಹಾಗೇ ಯಾವ ಬಣ್ಣದ ವಸ್ತ್ರ ಧರಿಸಬೇಕು , ನೇವೆದ್ಯ ಅರ್ಪಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ ನೀಡಲಾಗಿದೆ . ನಾಳೆ ನಾಲ್ಕನೇಯ ಅವತಾರವಾದ ಕೂಷ್ಮಂಡ ದೇವಿಯನ್ನು ನಾವು ಪೂಜಿಸಬೇಕು. ಕೂಷ್ಮಂಡಾ ಎಂದರೆ ಬೂದುಗುಂಬಳ ಅಂತ ಅರ್ಥ . ಮನಸಿನ ಕ್ಲೇಷ ಕಳೆದು ಮನದ ಜ್ಞಾನ ಮೂಡುತ್ತದೆ ಹಾಗೂ ಜ್ಞಾನದಿಂದ ಖುಷಿಗೆ ಉಂಟಾಗುತ್ತದೆ. ಜಗತ್ತಿನ ಸರ್ವ ಶಕ್ತಿಯನ್ನು ತನ್ನಲಿ ಅಡಗಿಸಿ ಜಗತ್ತನ್ನು ನಡೆಸುವ ದೇವಿಯೆ ಕೂಷ್ಮಂಡ ದೇವಿ. ಇನ್ನು ಕೇಲವು ಪುರಾಣಗಳ ಪ್ರಕಾರ ಈಕೆಯು ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಎಲ್ಲಿ ಕೂಷ್ಮಂಡ ದೇವಿಯನ್ನು ಆರಾಧಿಸುತ್ತಾರೊ ಅಲ್ಲಿ ಬೆಳಕು ಜ್ಞಾನ ಇರುತ್ತದೆ. ಕೂಷ್ಮಂಡಾ ದೇವಿಯೂ ಎಂಟು ಭುಜಗಳನ್ನು ಹೊಂದಿರುವ ಕಾರಣ ಅಷ್ಟಭುಜಾದೇವಿಅಂತಾನು ಕರೆಯುತ್ತಾರೆ.
ಹಾಗೆನೆ ಸೂರ್ಯಗ್ರಹದ ಅಧಿಪತಿಯಾಗಿರುವ ಕಾರಣ ಸೂರ್ಯ ಗ್ರಹಕ್ಕೆ ಸಂಬಂಧಿಸಿದ ದೋಷಗಳಿದ್ದರು ದೇವಿ ಆರಾಧನೆಯಿಂದ ದೋಷ ನಿವಾರಣೆಯಾಗುತ್ತದೆ. ಇನ್ನು ಜಗತ್ತಿನಲ್ಲಿ ಅಂಧಕಾರ ತುಂಬಿದಾಗ ತಾಯಿಯೂ ತನ್ನ ಶಕ್ತಿಯಿಂದ ಜಗತ್ತನ್ನು ಬೆಳಗಿದಳಂತೆ ಅದಕ್ಕೆ ಈಕೆಯನ್ನು ಆದಿ ಶಕ್ತಿ ಸ್ವರೂಪಿಣಿ ಅಂತಾನು ಉಲ್ಲೇಖಿಸಲಾಗಿದೆ. ಕೂಷ್ಮಂಡ ದೇವಿಯ ಪೂಜೆಗೆ ಕೆಂಪು ಬಣ್ಣದ ಹೂಗಳಿಂದ ಪೂಜಿಸಿದರೆ ಒಳ್ಳೆಯದು ಜೊತೆಗೆ ನಾಳೆ ನೇವೆದ್ಯವಾಗಿ ಬೂದುಗುಂಬಳ ಕಾಯಿಯಿಂದ ಮಾಡಿ ಯಾವುದಾದರೂ ಸಿಹಿಯನ್ನು ಅರ್ಪಿಸಬೇಕು. ಜೀವನದ ಕತ್ತಲೆಕಳೆದು ಬೆಳಕು ನಿಡು ತಾಯಿಅಂತ ಜಗನ್ಮಾತೆಯನ್ನು ನೆನೆಯುತ್ತಾ ಈ ಮಂತ್ರವನ್ನು ಪಠಿಸಿ ಸುರಸಂಪೂರ್ಣಕಲಶಂ ರುಧಿರಾಪ್ಲುತ್ಮೇವ ಚ
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ
ಇನ್ನು ಈ ಮಂತ್ರದ ಅರ್ಥ ಹೀಗಿದೆ ಮದಿರಾ ಮತ್ತು ರಕ್ತದಿಂದ ತುಂಬಿದ ಎರಡು ಕಳಶಗಳನ್ನು ಕಮಲದಂತಹ ಕೈನಲ್ಲಿ ಹಿಡಿದಿರುವವಳೆ ನನಗೆ ವರವನ್ನು ನೀಡು ಎಂಬ ಅರ್ಥವನ್ನು ನೀಡುತ್ತದೆ. ಜೀವನದಲ್ಲಿ ಅಂಧಕಾರ ಹೋಗಲಾಡಿಸಿ ಜಗತ್ತಿಗೆ ಬೆಳಕು ನೀಡುವ ಕೂಷ್ಮಂಡ ದೇವಿಗೆ ಜೈ ಅಮ್ಮ ಎಂದು ಕಾಮೆಂಟ್ ಮಾಡಿ ಕೃಪೆಗೆ ಪಾತ್ರರಾಗಿ ಮತ್ತಷ್ಟು ದೈವ ಮಾಹಿತಿಗಾಗಿ ನಮ್ಮ ಚಾನಲ್ ಗೆ ಭೇಟಿ ನೀಡಿ.
