Sun. Sep 24th, 2023

ನವರಾತ್ರಿಯ ಐದನೇ ದಿನ ನಾವು ದುರ್ಗೆಯ ಯಾವ ರೂಪವನ್ನು ಪೂಜಿಸಬೇಕು, ಯಾವ ಮಂತ್ರವನ್ನು ಪಠಿಸಿ, ಯಾವ ನೇವೆದ್ಯ ವನ್ನು ಅರ್ಪಿಸಬೇಕು ಹಾಗೇ ಯಾವ ಬಣ್ಣದ ವಸ್ತ್ರ ವನ್ನು ತಾಯಿಗೆ ಸಮರ್ಪಿಸಬೇಕು ಎಂಬ ಸಂಪೂರ್ಣ ಮಾಹಿತಿ ಯನ್ನು ಈ ವಿಡಿಯೋ ದಲ್ಲಿ ನೀಡಲಾಗಿ. ನವರಾತ್ರಿಯ ಐದನೇ ದಿನ ನಾವು ದುರ್ಗೆಯ ಸ್ಕಂದಮಾತ ರೂಪದಲ್ಲಿ ಪೂಜಿಸಬೇಕು. ಪುರಾಣಗಳ ಪ್ರಕಾರ ತಾರಕಸುರನನ್ನು ಕೊಲ್ಲಲು ಶಿವನ ಪುತ್ರನಿಂದ ಸಾಧ್ಯವೆಂಬ ವರ ಪಡೆದು ರಾಕ್ಷಸ ಸಜ್ಜನರಿಗೆ ಹಿಂಸೆ ನೀಡುತ್ತಿರುತ್ತಾನೆ ಆಗ ಶಿವ ಪಾರ್ವತಿಯರ ಮದುವೆಯಾದ ನಂತರ ಮಗ ಕಾರ್ತೀಕೆಯನು ಹುಟ್ಟಿದನು ತನ್ನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ತಾರಕನನ್ನು ಕೊಲ್ಲುತ್ತಾಳೆ ಸ್ಕಂದನ ತಾಯಿಯೇ ಸ್ಕಂದಮಾತ ಎಂದು ಕರೆಯಲಾಗುತ್ತದೆ. ಇನ್ನು ದೇವಿಯನ್ನು ಆರಾಧಿಸುವವರು ಶ್ರದ್ದೇ ಭಕ್ತಿ ಶುದ್ಧ ಮನಸಿನಿಂದ ಇರಬೇಕು ಆಗ ನಿಮಗೆ ಎಲ್ಲಾ ಸಾಧನೆಗಳು ಹಾಗೂ ಸಂಪತ್ತುಗಳನ್ನು ಕರುಣಿಸುತ್ತಾಳೆ‌ ಜಗನ್ಮಾತೆ ಸ್ಕಂದಮಾತೆ. ಇನ್ನು ನೀವು ದೇವಿಯನ್ನು ಪೂಜಿಸಿದರೆ ಕಾರ್ತೀಕೇಯನನ್ನು ಪೂಜಿಸಿದಂತೆ ಆಗುತ್ತದೆ ಆಗ ಇಬ್ಬರ ಆಶೀರ್ವಾದ ದೊರೆತು ಜೀವನದಲ್ಲಿ ಯಶಸ್ಸು ಲಭಿಸುತ್ತದೆ.

ಎಂತಹ ಮೂರ್ಖನಾದರೂ ಸರಿಯೇ ತಾಯಿಯ ಕೃಪೆಯಿಂದ ಬುದ್ದೀವಂತನಾಗುತ್ತನೆ. ಇನ್ನು ನಾಳೆ ಪೂಜಿಸುವಾಗ ದೇವರಿಗೆ ಕಮಲದ‌ಹೂವಿನಿಂದ ಪೂಜಿಸಿದರೆ ಹಣಕಾಸು ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಖಚಿತ. ದೀಪ ಧೂಪಗಳಿಂದ ದೇವಿಗೆ ಆರತಿ ಮಾಡಿ ನೇವೆದ್ಯವಾಗಿ ಹಾಲಿನಿಂದ ಮಾಡಿದ ಖೀರು ಅಥವಾ ಹಾಲಿನಿಂದ ತಯಾರಿಸಿದ ಯಾವುದಾದರು ಸಿಹಿ ಅರ್ಪಿಸಿದರೆ ಜನ್ಮ ಜನ್ಮಗಳ ಪಾಪಾ‌ ಕಳೆದು ಮನಸಿನ ಆಸೆಗಳು ಈಡೇರುತ್ತವೆ. ಇನ್ನು ಜಗನ್ಮಾತೆ ಸ್ಕಂದ ಮಾತೆಯಲ್ಲಿ ಮನೆಯ ಅಭಿವೃದ್ಧಿ ಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡತಡೆ ಇಲ್ಲದೆ ಎಲ್ಲವೂ ಒಳ್ಳೆಯದಾಗಲಿ ಅಂತ ಈ ಮಂತ್ರವನ್ನು ಪಠಿಸಬೇಕು
ಓಂ ದೇವಿ ಸ್ಕಂದಮಾತಾಯೈ ನಮಃ
ಸಿಂಹಾಸಂಗತಂ ನಿತ್ಯಂ ಪದ್ಮಾಂಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ”
ಈ ಮಂತ್ರದ ಅರ್ಥ ಹೀಗಿದೆ ಕಾರ್ತಿಕೇಯನ್ನು ಹಿಡಿದು ಸಿಂಹದ ಮೇಲೆ ಸವಾರಿ ಮಾಡುವವಳೆ ಎರಡು ಕೈಯಲ್ಲಿ ಕಮಲವನ್ನು ಹಿಡಿದು ಅಭಯಮುದ್ರೆ ಹೊಂದಿರುವ ದೇವಿಯೆ ನಮ್ಮನ್ನು ಹರಸು . ಸ್ಕಂದ ಮಾತೆಯ ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ.