Sat. Sep 30th, 2023

ಮನೆಯಲ್ಲಿ ನಾಯಿ ಇದ್ದರೆ ತಪ್ಪದೆ ಇದನ್ನು ನೋಡಿ…

ನಾಯಿ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಹಾಗೂ ಎಲ್ಲರ ಮನೆಯಲ್ಲಿ ಕೂಡ ನಾಯಿ ಸಾಕಣೆ ಮಾಡುತ್ತಾರೆ ಹಾಗೂ ನಾಯಿ ನಮ್ಮ ಮನೆಯಲ್ಲಿ ಇದ್ದರೆ ನಮ್ಮ ಮನೆಗೆ ಯಾರು ಕೂಡ ಕಳ್ಳರು ಬರುವುದಿಲ್ಲ ಮತ್ತು ನಮ್ಮನ್ನು ಕಾಯುತ್ತದೆ ಎಂಬ ನಂಬಿಕೆ ಹಲವಾರು ಜನರಲ್ಲಿ ಇರುತ್ತದೆ ಅದಕ್ಕಾಗಿ ನಾಯಿಯನ್ನು ಪ್ರೀತಿಯಿಂದ ಸಾಕುತ್ತಾರೆ. ಆದರೆ ಇದೀಗ ನಮ್ಮ ವಿಷಯ ಏನಪ್ಪಾ ಅಂದರೆ ನಾಯಿ ಕಚ್ಚಿದರೆ ಏನೆಲ್ಲ ತೊಂದರೆಗಳು ಆಗುತ್ತದೆ ಗೊತ್ತಾ ಇದೀಗ ನಮ್ಮ ಜೊತೆ ಸರ್ಜನ್ ಡಾಕ್ಟರ್ ಆದಂತಹ ಅಂಜನಪ್ಪ ಅವರು ಇದ್ದಾರೆ ಅವರು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತಾರೆ ನಮ್ಮ ಮನೆಯಲ್ಲಿ ಇರುವಂತಹ ನಾಯಿ ಏನಾದರೂ ನಮಗೆ ಕಚ್ಚಿದರೆ ಕೇವಲ ಒಂದೇ ಇಂಜೆಕ್ಷನ್ ಹಾಕಿಸಿಕೊಂಡರೆ ಸಾಕು ಗುಣಮುಖ ಆಗುತ್ತೇವೆ. ಅದೇ ಬೀದಿಯಲ್ಲಿ ಓಡಾಡುವಂತಹ ನಾಯಿಗಳು ನಮಗೆ ಕಚ್ಚಿದರೆ 5 ಇಂಜೆಕ್ಷನ್ ಹಾಕಿಸಿಕೊಳ್ಳಬೇಕು ಹಾಗೂ ಇದರಿಂದ ನಮಗೆ ತುಂಬಾ ತೊಂದರೆಗಳು ಕೂಡ ಉಂಟಾಗುತ್ತದೆ ಅದರಲ್ಲೂ ಕೂಡ ಹುಚ್ಚುನಾಯಿಗಳು ಕಚ್ಚಿದರೆ ಏನಾಗುತ್ತೆ ಗೊತ್ತಾ ಈ ಲೇಖನ ಓದಿ.

ನಾಯಿ ಕಚ್ಚಿದ ತಕ್ಷಣ ನಾವು ಡಾಕ್ಟರ್ ಹತ್ತಿರ ಹೋಗುತ್ತೇವೆ ನಂತರ ನಮಗೆ ಅವರ ಇಂಜೆಕ್ಷನ್ ಹಾಕುತ್ತಾರೆ ಅದರಲ್ಲೂ ಕೂಡ ಹುಚ್ಚು ನಾಯಿ ಕಚ್ಚಿದರೆ ತುಂಬಾ ಕಷ್ಟ ಆಗುತ್ತದೆ. ಹಾಗೂ ನೀವು ಇನ್ನೊಂದು ವಿಷಯವನ್ನು ಕೂಡ ಅರ್ಥಮಾಡಿಕೊಳ್ಳಬೇಕು ಹುಚ್ಚುನಾಯಿ ಕಚ್ಚಿದ ತಕ್ಷಣ ನಮಗೆ ಹುಚ್ಚು ಹಿಡಿಯುವುದಿಲ್ಲ ಒಂದು ವೇಳೆ ನಾಯಿ ಕಚ್ಚಿದ ಮೇಲೆ ನಮ್ಮ ದೇಹಕ್ಕೆ ರೇ ಬಿಎಸ್ ಎಂಬ ಅಂಶ ನರಗಳ ಮೂಲಕ ನಮ್ಮ ಮೆದುಳಿಗೆ ಹೋದರೆ ನಮಗೆ ಹುಚ್ಚು ಹಿಡಿಯುತ್ತದೆ. ಹಾಗೂ ಈ ರೀತಿ ಹುಚ್ಚು ಹಿಡಿದರೆ ಯಾರೂ ಕೂಡ ಬದುಕಲು ಆಗುವುದಿಲ್ಲ ಹಾಗೂ ಬದುಕಿರುವಂತಹ ನಿರ್ದರ್ಶನ ಕೂಡ ಇಲ್ಲ. ಜಪಾನ್ ದೇಶದಲ್ಲಿ ಒಬ್ಬರು ಮಾತ್ರ ಬದುಕಿದ್ದಾರೆ ಎಂದು ಹೇಳಿದ್ದಾರೆ ಹಾಗೂ ಈ ರೀತಿ ಕಾಯಿಲೆಗಳು ಉಂಟಾದರೆ ಯಾವ ಆಸ್ಪತ್ರೆಯಲ್ಲಿ ಕೂಡ ಅಡ್ವೆಂಟ್ ಮಾಡಿಕೊಳ್ಳುವುದಿಲ್ಲ ರೋಗಿಯನ್ನು ಇದಕ್ಕೆ ಅಂತ ಒಂದು ಆಸ್ಪತ್ರೆಯಿದೆ ಓಲ್ಡ್ ಮದ್ರಾಸ್ ರೋಡ್ ನಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಅಲ್ಲಿ ಇವರನ್ನು ಅಡ್ಮಿಟ್ ಮಾಡುತ್ತಾರೆ ಹಾಗೂ ಅವರಿಗೆ ಅಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ.