ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಕೂದಲು ತುಂಬಾ ಸುಂದರವಾಗಿ ಇರಬೇಕೆಂದು ಹುಡುಗಿಯರು ಮತ್ತು ಹುಡುಗರು ಹಲವಾರು ಎಣ್ಣೆಯನ್ನು ಮತ್ತು ಶಾಂಪು ಗಳನ್ನು ತಲೆಗೆ ಬಳಸುತ್ತಾರೆ. ಆದರೆ ಅದು ಸರಿಯಾಗಿ ಫಲಿತಾಂಶ ಕೊಡದೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದು ಒಂದು ದೊಡ್ಡ ಸಮಸ್ಯೆಯಾಗಿದೆ ಇದರಿಂದ ಸಾಕಷ್ಟು ಜನರು ನನಗೆ ಕಡಿಮೆ ವಯಸ್ಸಿನಲ್ಲಿ ಕೂದಲು ಉದುರು ಹೋಯಿತೆಂದು ಗಾಬರಿ ಪಡುತ್ತಾರೆ .ಆದ್ದರಿಂದ ಪ್ರತಿಯೊಬ್ಬರು ಗಾಬರಿಯಾಗುವ ಅವಶ್ಯಕತೆ ಇಲ್ಲ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಕೂದಲಿಗೆ ಒಂದು ಟಾನಿಕ್ ಇದೆ ಇದನ್ನು ಬಳಸುವುದರಿಂದ ನಿಮಗೆ ಉತ್ತಮವಾಗಿ ಕೂದಲು ಚೆನ್ನಾಗಿ ಉದ್ದವಾಗಿ ಬೆಳೆಯುತ್ತದೆ .ಹಾಗೂ ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲು ಬರುವುದು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಮೊದಲಿಗೆ ಈ ಮನೆಮದ್ದು ಮಾಡಲು ಸೀಬೆಕಾಯಿ ಎಲೆಯನ್ನು ತೆಗೆದುಕೊಳ್ಳಬೇಕು. ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಇರುತ್ತದೆ ಇದು ನಮ್ಮ ಕೂದಲಿನ ಬೆಳವಣಿಗೆ ತುಂಬಾ ಸಹಾಯ ಮಾಡುತ್ತದೆ ನಂತರ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಎರಡು ಚಮಚ ಮೆಂತೆ ಕಾಳನ್ನು ಹಾಕಬೇಕು ನಂತರ ಇದಕ್ಕೆ ಸೀಬೆಕಾಯಿ ಎಲೆಯನ್ನು ಹಾಕಬೇಕು ಚೆನ್ನಾಗಿ ಕುದಿಸಬೇಕು ನಂತರ ಇದಕ್ಕೆ ಒಂದು ಪ್ಲಾಸ್ಟಿಕ್ ಟ್ಯೂಬ್ನಲ್ಲಿ ಅದನ್ನು ಹಾಕಿಕೊಂಡು ತಲೆಗೆ ಕೂದಲಿಗೆ ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಉತ್ತಮವಾಗಿ ಚೆನ್ನಾಗಿ ಬೆಳೆಯುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
