Fri. Dec 8th, 2023

ಮೋಷನ್ ಗಟ್ಟಿಯಾಗಿ ಹೋಗುತ್ತೇವೆ ಇದಕ್ಕೆ ಪರಿಹಾರ ಕೇಳಿ ಅಂತ ಸುಮಾರು ಜನ ಹೇಳಿದ್ದಾರೆ ಇದಕ್ಕೆ ಪರಿಹಾರವನ್ನು ನಾವು ಇವತ್ತು ತಿಳಿಸಿಕೊಡುತ್ತೇವೆ ಅತ್ಯಂತ ಉಪಯುಕ್ತವಾಗಿ ಕೆಲಸ ಮಾಡುವಂತಹ ಔಷಧಿಯನ್ನು ತಿಳಿಸಿಕೊಡುತ್ತೇವೆ ಮಲಬದ್ಧತೆಯಿಂದ ಹಲವಾರು ತೊಂದರೆಗಳು ಆಗುತ್ತದೆ ಅದರಿಂದ ಮೊಳೆರೋಗ ಪಿಸ್ತೂಲ ಇಂತಹ ಕಾಯಿಲೆಗಳು ಬರುತ್ತದೆ ಎನ್ನುತ್ತಾರೆ ಇದಕ್ಕೆಲ್ಲ ಮನೆ ಮದ್ದನ್ನು ತಿಳಿಸಿಕೊಡಿ ಮಲಬದ್ಧತೆಗೆ ಮುಖ್ಯವಾದ ಕಾರಣ ಏನು ಅಂದರೆ ಎರಡು ತರದ ಕಾರಣ ಇದೆ ಮೊದಲನೇದಾಗಿ ಅಗ್ನಿಮಾಂದ್ಯ ಅಂದರೆ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ ಎರಡನೇ ಕಾರಣ ಜೀರ್ಣಕ್ರಿಯೆ ಸರಿಯಾಗಿ ಆಗಿ ಮಲ ಉತ್ಪಾದನೆ ಆದರೂ ಕೂಡ ವಿಸರ್ಜನೆ ಸರಿಯಾಗಿ ಆಗದೆ ಇರುವುದು. ಅದನ್ನು ಆಯುರ್ವೇದದಲ್ಲಿ ಅಪಾನ ವಾತ ದೃಷ್ಟಿ ಅಂತ ಹೇಳಬಹುದು ಇವೆರಡಕ್ಕೂ ರಾಮಬಾಣದಂತೆ ಔಷಧಿ ಅಂದರೆ ಎಲ್ಲರ ಮನೆಯಲ್ಲೂ ಇದೆ.

ಮುಖ್ಯವಾಗಿ ತುಪ್ಪ ಅದರಲ್ಲೂ ಹಸುವಿನ ತುಪ್ಪ ಹಸುವಿನ ಹಾಲಿನಲ್ಲಿ ತಯಾರು ಮಾಡಿದಂತ ತುಪ್ಪ ತುಪ್ಪವನ್ನು ಎಷ್ಟೋ ಜನ ತಪ್ಪು ಆಲೋಚನೆಯಿಂದ ಬಿಟ್ಟು ಬಿಟ್ಟಿದ್ದಾರೆ ತುಪ್ಪವನ್ನು ತಿಂದರೆ ದಪ್ಪ ಆಗುತ್ತಿವೆ ಅಂತ ಆದರೆ ತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು ಉದಾಹರಣೆಗೆ ಹೋಮದಲ್ಲಿ ತುಪ್ಪ ಹಾಕಿದರೆ ಬೆಂಕಿ ಚೆನ್ನಾಗಿ ಹತ್ತಿಕೊಳ್ಳುತ್ತದೆ ಅದೇ ರೀತಿ ನಮ್ಮ ಹೊಟ್ಟೆಯಲ್ಲಿ ಕೂಡ ಅಗ್ನಿ ಅಂತ ಇರುತ್ತದೆ ಅದಕ್ಕೆ ಹಾಕುವ ಔಷಧಿ ಅಂದರೆ ತುಪ್ಪ.ಮುಖ್ಯವಾಗಿ ತುಪ್ಪವನ್ನು ತೆಗೆದುಕೊಳ್ಳುವುದಕ್ಕೆ ಎರಡು ವಿಧಾನ ಇದೆ ಒಂದು ತುಪ್ಪವನ್ನು ನೇರವಾಗಿ ತಿನ್ನುವಂತಹ ಇನ್ನೊಂದು ತುಪ್ಪವನ್ನು ಆಹಾರದಲ್ಲಿ ಕಲಸಿ ತಿನ್ನುವಂತೆ ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆಯೋ ಅವರು ಎರಡು ಚಮಚ ತುಪ್ಪವನ್ನು ನೇರವಾಗಿ ಊಟಕ್ಕೆ 15 ನಿಮಿಷಕ್ಕೆ ಮುಂಚೆ ತಿಂದರೆ ಅವರಿಗೆ ಮಲಬದ್ಧತೆ ಸಮಸ್ಯೆ ಇರುವುದಿಲ್ಲ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ ಇದನ್ನು ನೀವು ಸರಿಯಾದ ಕ್ರಮದಲ್ಲಿ ತೆಗೆದುಕೊಂಡರೆ ನಿಮ್ಮ ಮಲಬದ್ಧತೆ ಸಮಸ್ಯೆ ಎಷ್ಟೇ ಕಠಿಣವಾಗಿದ್ದರೆ ಪರಿಹಾರ ಆಗುತ್ತದೆ.