Sat. Jun 25th, 2022

ನಿಮ್ಮ ಕೂದಲು ಉದುರುತಿದ್ಯಾ, ಕೂದಲು ಕಪ್ಪಾಗಬೇಕಾ ಹಾಗಿದ್ದರೆ ಕೂಡಲೇ ಈ ವಿಡಿಯೊ ನೋಡಿ. ಕೂದಲಿನ ಆರೋಗ್ಯ ಚನ್ನಾಗಿರಲು ಈ ಮನೆ ಮದ್ದು ಬಹಳ ಒಳ್ಳೆಯದು, ಕೂದಲು ಉದುರುವುದು, ಡ್ಯಾಂಡ್ರಪ್ ಸಮಸ್ಯೆ, ಕೂದಲು ಕಪ್ಪಾಗಾಗಲು ಇದು ಬಹಳ ಸಹಾಯಕಾರಿ. ಈ ಎಣ್ಣೆ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ, ಈಗಿನ ದಿನದಲ್ಲಿ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಇದ್ದೇ ಇರುತ್ತದೆ, ಡ್ಯಾಂಡ್ರಫ್ ಮತ್ತು ಅತಿ ಬೇಗನೆ ಬಿಳಿ ಕೂದಲು ಆಗುವುದು ಈ ಎಲ್ಲಾ ಸಮಸ್ಯೆಗೆ ಈ ಎಣ್ಣೆ ತುಂಬಾ ಉಪಯುಕ್ತವಾಗಿದೆ. ದಾಸವಾಳದ ಎಲೆಗಳು ನಮ್ಮ ಕೂದಲಿಗೆ ತುಂಬಾನೆ ಒಳ್ಳೆಯದು ಇದು ನಮ್ಮ ಕೂದಲನ್ನು ಕಪ್ಪಾಗಿ ಮಾಡುತ್ತದೆ ಮತ್ತು ಇದು ಡ್ಯಾಂಡ್ರಫ್ ಅನ್ನು ತೆಗೆದುಹಾಕುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಖಂಡಿತವಾಗಿ ಕಡಿಮೆಯಾಗುತ್ತದೆ. ಈಗ ಎಣ್ಣೆ ಮಾಡುವ ವಿಧಾನ ತಿಳಿದ್ದುಕೊಳ್ಳೋಣ,


ಒಂದು ಪಾತ್ರೆಗೆ ಅರ್ಧ 1/2 ಲೀಟರ್ ಕೊಬ್ಬರಿ ಎಣ್ಣೆ ಹಾಕಿ ಒಲೆಯ ಮೇಲೆ ಸಣ್ಣ ಉರಿಯಲ್ಲಿ ಇಡಿ ಅಧಕ್ಕೆ 1 ಚಮಚ ಮೆಂತ್ಯ ಕಾಳು, 20 ದಾಸವಾಳದ ಎಲೆ, 2 ನೆಲ್ಲಿಕಾಯಿ, 20 ಕರಿಬೇವಿನ ಎಲೆ ಮೂರರಿಂದ ನಾಲ್ಕು ದಾಸವಾಳದ ಹೂವು, ಸ್ವಲ್ಪ ಲೋಳೆಸರ ಎಲ್ಲವನ್ನೂ ಕೊಬ್ಬರಿ ಎಣ್ಣೆಗೆ ಹಾಕಿ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ಇದು ತಣ್ಣಗಾದ ನಂತರ ಒಂದು ಬಾಟಲಿಗೆ ಹಾಕಿ ಆರು ತಿಂಗಳ ಕಾಲ ನೀವು ಶೇಖರಿಸಿ ಕೊಳ್ಳಬಹುದು, ಎಣ್ಣೆಯನ್ನು ಎಲ್ಲಾ ವಯಸ್ಸಿನವರು ಉಪಯೋಗಿಸಬಹುದು. ಎಣ್ಣೆಯನ್ನು ತಲೆಗೆ ಹಚ್ಚಿ 2 ಗಂಟೆಯ ನಂತರ ಸ್ನಾನ ಮಾಡಿಕೊಳ್ಳಿ ಹೀಗೆ ನೀವು ಮನೆಯಲ್ಲೇ ಎಣ್ಣೆಯನ್ನು ತಯಾರಿಸಿಕೊಂಡು ಹಚ್ಚಿ ಕೊಳ್ಳುವುದರಿಂದ ನಿಮ್ಮ ಕೂದಲನ್ನು ನೀವು ಕಾಪಾಡಿಕೊಳ್ಳ ಬಹುದು.