Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಮೂಳೆ ನೋವು ಮತ್ತು ಕೀಲು ನೋವು ಸಮಸ್ಯೆ ಬರುತ್ತದೆ ಹಾಗೂ ನಿಮ್ಮ ದೇಹದ ಮೂಳೆಗಳಲ್ಲಿ ಕಟ್ ಕಟ್ ಎಂದು ಸೌಂಡು ಬರುತ್ತದೆ ಹಾಗೂ ದೇಹದಲ್ಲಿ ನಿಮಗೆ ನಿಶಕ್ತಿ ಉಂಟಾಗುತ್ತದೆ ಆದರೆ ಇದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ತಕ್ಷಣ ಪರಿಹಾರ ಆಗುತ್ತದೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ .ಹಿಂದಿನ ಕಾಲದಲ್ಲಿ ರಾಗಿ ಅಂಬಲಿ ಕುಡಿಯುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಫಾಸ್ಟ್ ಫುಡ್ ಸೇವನೆ ಮಾಡುವುದರಿಂದ ಮೂಳೆಗಳ ನೋವು ಮತ್ತು ಹಲವಾರು ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ .ಆದ್ದರಿಂದ ಪ್ರತಿಯೊಬ್ಬರು ರಾಗಿಯನ್ನು ಹೆಚ್ಚಾಗಿ ಬಳಸಬೇಕು ಇದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ಇರುತ್ತದೆ ನಮ್ಮ ದೇಹದಲ್ಲಿ ಜಾದು ರೀತಿ ಕೆಲಸ ಮಾಡುತ್ತದೆ .ವಿಟಮಿನ್ ಮತ್ತು ಮುಂತಾದ ಪೋಷಕಾಂಶ ಅಂಶಗಳು ಇದರಲ್ಲಿ ಇದೆ ಆದ್ದರಿಂದ ಪ್ರತಿಯೊಬ್ಬ ರಾಗಿ ಇಂದ ಯಾವ ವಸ್ತುಗಳನ್ನು ಮಾಡುತ್ತಾರೆ ಅದನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ರಾಗಿ ಇಂದ ಹಲವಾರು ಪದಾರ್ಥಗಳನ್ನು ಮಾಡಿರುತ್ತಾರೆ. ಇದನ್ನು ತಿನ್ನುವುದರಿಂದ ನಮ್ಮ ದೇಹವನ್ನು ಗಟ್ಟಿಮುಟ್ಟಾಗಿ ಮಾಡಲು ಸಹಾಯ ಮಾಡುತ್ತದೆ ಹಾಗೂ ಶುಗರ್ ರೋಗಿಗಳಿಗೆ ಇದು ತುಂಬಾ ಸಹಾಯ ಮಾಡುತ್ತದೆ ಮೂಳೆಗಳನ್ನು ಪುಷ್ಟಿ ಮಾಡಲು ತುಂಬಾ ಸಹಾಯ ಮಾಡುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡುತ್ತದೆ ರಾಗಿ ಸೇವನೆ ಮಾಡುವುದರಿಂದ ಹಾಗೂ ಪ್ರತಿಯೊಬ್ಬರೂ ರಾಗಿಮುದ್ದೆ ತಿನ್ನುವುದರಿಂದ ದೇಹದಲ್ಲಿ ವಿಟಮಿನ್ ಮತ್ತು ಪೋಷಕಾಂಶ ಹೆಚ್ಚುತ್ತದೆ. ಮೂಳೆಗಳ ನೋವು ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ನಂತರ ಮನೆಮದ್ದು ಅಂದರೆ ರಾಗಿ ಮಾಲ್ಟ್ ಹೇಗೆ ಮಾಡುವುದು ಎಂದರೆ ಮೊದಲಿಗೆ ಒಂದು ಚಮಚ ರಾಗಿ ಹಸಿಟ್ ಅನ್ನು ಒಂದು ಚಮಚ ನೀರಿನಲ್ಲಿ ಚೆನ್ನಾಗಿ ಕಲೆಸಿಕೊಳ್ಳಬೇಕು ನಂತರ ಒಂದು ಲೋಟ ಹಾಲಿಗೆ ಚೆನ್ನಾಗಿ ಬಿಸಿ ಆದಮೇಲೆ ರಾಗಿ ಪುಡಿಯನ್ನು ಹಾಕಬೇಕು . ನಂತರ ಅದನ್ನ ಮಿಕ್ಸ್ ಮಾಡಿ ಚೆನ್ನಾಗಿ ಸೋಸಿಕೊಂಡು ಕುಡಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಪ್ರತಿನಿತ್ಯ ಈಗೆ ಮಾಡಿ ಕುಡಿದರೆ ಮೂಳೆಗಳ ಸಮಸ್ಯೆ ನಿವಾರಣೆಯಾಗುತ್ತದೆ. ರಾಗಿ ಮಾಲ್ಟ್ ಕುಡಿಯುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಇದರಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ನಿಶ್ಶಕ್ತಿ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ. ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ ಇದರ ಜೊತೆಗೆ ಪ್ರತಿನಿತ್ಯ ಚಪಾತಿ ಮತ್ತು ರೊಟ್ಟಿ ಸೇವನೆ ಮಾಡಿದ್ದ ಬಂದರೆ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ರೋಗದ ಸಮಸ್ಯೆ ಬರುವುದಿಲ್ಲ ಈ ರೀತಿ ಮಾಡಿ ಉತ್ತಮವಾಗಿ ಆರೋಗ್ಯ ಇರುತ್ತದೆ.