Thu. Feb 2nd, 2023

ನಮ್ಮ ದೇಹಕ್ಕೆ ನೀರಿನಂಶ ಬಹಳ ಮುಖ್ಯ ನಮ್ಮ ದೇಹ ಮುಕ್ಕಾಲುಭಾಗ ನೀರಿನಿಂದಲೇ ಕೂಡಿದೆ ವೈದ್ಯರು ಕೂಡ ನಮಗೆ ಆಗಾಗ ನೀರು ಕುಡಿಯುವಂತೆ ಸೂಚಿಸುತ್ತಾರೆ ನಮ್ಮ ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದಷ್ಟು ಆಂತರಿಕ ವಾಗಿ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಜೊತೆಗೆ ವಿಷಕಾರಿ ಅಂಶವು ಕೂಡ ನಮ್ಮ ದೇಹದಿಂದ ಹೊರಗೆ ಬಂದು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡುತ್ತದೆ ಆದರೆ ಇಂದಿಗೂ ಕೂಡ ನಾವು ನೀರನ್ನು ಕುಡಿಯುವ ಸರಿಯಾದ ಅಭ್ಯಾಸವನ್ನು ಕಲಿತಿಲ್ಲ ನಾವು ನೀರನ್ನು ಕುಡಿಯುವಾಗ ಮಾಡುವ ಕೆಲವು ಮುಖ್ಯ ತಪ್ಪುಗಳಿಂದ ನಮಗೆ ತೊಂದರೆ ತಪ್ಪಿದ್ದಲ್ಲ ಇದರಿಂದ ಯಾವುದೇ ಲಾಭ ನಮ್ಮ ಆರೋಗ್ಯಕ್ಕೂ ದೊರೆಯುವುದಿಲ್ಲ ನಮ್ಮ ದೇಹವೂ ರೋಗಮುಕ್ತ ವಾಗುವುದಿಲ್ಲ ಯಾವುದೇ ತಪ್ಪುಗಳು ಎಂದು ತಿಳಿದುಕೊಳ್ಳೋಣ ಬನ್ನಿ.

ನಿಂತುಕೊಂಡು ನೀರನ್ನು ಕುಡಿಯಬಾರದು ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ತಿಂಡಿ ತಟ್ಟೆಯನ್ನು ತಿನ್ನುವಾಗ ಓಡಾಡಿಕೊಂಡು ಕೈಯಲ್ಲಿ ಹಿಡಿದುಕೊಂಡು ತಿನ್ನುತ್ತಿದ್ದರೆ ಮನೆಯಲ್ಲಿರುವ ದೊಡ್ಡವರು ಒಂದು ಕಡೆ ಕುಳಿತುಕೊಂಡು ತಿನ್ನುವಂತ ಹೇಳುತ್ತಾರೆ ಇದು ಕುಡಿಯುವ ನೀರಿಗೂ ಸಹ ಅನ್ವಯಿಸುತ್ತದೆ ನಾವು ನಿಂತುಕೊಂಡು ನೀರು ಕುಡಿಯುವುದರಿಂದ ನೀರಿನಲ್ಲಿರುವ ಅನೇಕ ಪೌಷ್ಟಿಕ ಸತ್ವಗಳು ನೀರಿನ ಸಮೇತ ನೇರವಾಗಿ ನಮ್ಮ ಕೆಳಗಿನ ಹೊಟ್ಟೆಗೆ ಹೋಗಿ ತಲುಪುತ್ತದೆ ಆದ್ದರಿಂದ ನಿಂತುಕೊಂಡು ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಬಹಳಷ್ಟು ತೊಂದರೆ ಉಂಟು ಮಾಡುವುದಲ್ಲದೆ ಸಹ ನಮ್ಮನ್ನು ಹಲವಾರು ಕಾಯಿಲೆಗಳಿಗೆ ಗುರಿಮಾಡುವುದು ಮತ್ತು ನಮ್ಮ ದೇಹದ ಅಂಗಾಂಗಗಳು ಸರಿಯಾಗಿ ಕೆಲಸ ಮಾಡದೇ ಇರದಂತೆ ಪ್ರೇರೆಪಿಸುತ್ತವೆ ಹೆಚ್ಚು ನೀರು ಬಾಯಿಗೆ ತುಂಬಿಕೊಂಡು ವೇಗವಾಗಿ ನೀರು ಕುಡಿಯುವುದು ನೀರು ಕುಡಿಯುವಾಗ ಇದೊಂದು ತಪ್ಪನ್ನು ಮಾಡುತ್ತೇವೆ ಆತುರದಲ್ಲಿ ಬೇರೆಲ್ಲಾ ನೋಡಿಕೊಂಡು ಸರಸರನೆ ಹೆಚ್ಚಾಗಿ ನೀರನ್ನು ಕುಡಿಯುತ್ತೇವೆ ಇದರಿಂದ ನೀರಿನಲ್ಲಿರುವ ಕಲ್ಮಶಗಳು ನೇರವಾಗಿ ಮೂತ್ರಪಿಂಡ ಮೂತ್ರಕೋಶಗಳಿಗೆ ಹೋಗಿ ಶೇಖರಣೆಯಾಗುತ್ತದೆ.

ಎಷ್ಟೇ ಬಾಯಾರಿಕೆ ಯಾಗಿದ್ದರು ನೀರನ್ನು ಒಂದು ಕಡೆ ಕುಳಿತುಕೊಂಡು ಕುಡಿಯಬೇಕು ಹೀಗೆ ಕುಡಿಯುವುದರಿಂದ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಬಲಗೊಂಡು ಮೆಟಬಾಲಿಸಂ ಪ್ರಕ್ರಿಯೆ ಸರಿಯಾಗಿ ನಡೆಯುತ್ತದೆ ಊಟಕ್ಕೆ ಮುಂಚೆ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿಯುವುದು ಹಾಗೂ ಊಟದ ತಕ್ಷಣ ನೀರು ಕುಡಿಯುವ ಅಭ್ಯಾಸ ಈ ಮೂರು ತಪ್ಪುಗಳು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಊಟಕ್ಕೆ ಮುಂಚೆ ನೀರು ಕುಡಿದು ತಕ್ಷಣವೇ ಊಟಕ್ಕೆ ಕುಳಿತರೆ ಹಸಿವಿಲ್ಲದೆ ಸರಿಯಾಗಿ ಊಟ ಮಾಡಲು ಆಗುವುದಿಲ್ಲ ಇದರಿಂದ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ ಇನ್ನು ಕೆಲವರಿಗೆ ಊಟ ಆದ ನಂತರ ಊಟದ ಮಧ್ಯದಲ್ಲಿ ನೀರು ಕುಡಿಯುವ ಅಭ್ಯಾಸವಿದೆ ಇದರಿಂದ ಜೀರ್ಣಕ್ರಿಯೆಗೆ ಸಹಕಾರ ಆಗುವ ಆಮ್ಲಗಳು ತಣ್ಣಗಾಗುತ್ತದೆ ಈ ಕಾರಣದಿಂದ ಜೀರ್ಣಕ್ರಿಯೆ ತುಂಬಾ ನಿಧಾನಗೊಂಡು ಮಲಬದ್ಧತೆ ಮತ್ತು ವಾಕರಿಕೆಗೆ ಕಾರಣವಾಗುತ್ತದೆ ಅತಿ ಹೆಚ್ಚು ನೀರು ಕುಡಿಯುವುದು ತಪ್ಪು ಕೆಲವರಿಗೆ ಪದೇಪದೇ ನೀರು ಕುಡಿಯುವ ಅಭ್ಯಾಸವಿರುತ್ತದೆ ನೀರನ್ನು ಹೆಚ್ಚಾಗಿ ಕುಡಿಯಬೇಕು ನಿಜ ಆದರೆ ಯಾವುದೂ ಕೂಡ ಅತಿಯಾಗಬಾರದು ದೇಹದಲ್ಲಿ ಸೋಡಿಯಂ ಅಂಶ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಮೆದುಳು ಹಾಗೂ ದೇಹದ ಇತರ ಭಾಗಗಳಲ್ಲಿ ತೊಂದರೆಯಾಗಿ ಕೋಮ ಹಾಗೂ ಪಾರ್ಶುವಾಯು ಸಮಸ್ಯೆ ಎದುರಾಗುತ್ತದೆ.