Sat. Dec 9th, 2023

ನಾವು ತಲತಲಾಂತರದಿಂದಲೂ ಮಹಾಲಕ್ಷ್ಮಿ ಪೂಜೆಯನ್ನು ಮಾಡಿ ಕೊಂಡು ಬರುತ್ತಿದ್ದೇವೆ ಆದರೆ ನಮಗೆ ಪೂಜೆ ಫಲ ನಮಗೆ ಸಿಗ ಬೇಕಾದರೆ ಪೂಜೆಯನ್ನು ಯಾವ ರೀತಿ ಮಾಡಬೇಕು ಮತ್ತು ತಾಂ ಬೂಲದಲ್ಲಿ ಏನನ್ನು ಕೊಡಬೇಕು ಏನನ್ನು ಕೊಡಬಾರದು ಲಕ್ಷ್ಮಿಯನ್ನು ಯಾವಾಗ ವಿಸರ್ಜನೆ ಮಾಡಬೇಕು ಇವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ವರಮಹಾಲಕ್ಷ್ಮಿ ಹಬ್ಬವನ್ನು ಮಾಡುವ ಉದ್ದೇಶವೇ ಮನೆಯಲ್ಲಿ ಶಾಂತಿ ಸಮೃದ್ಧಿ ಸಂಪತ್ತು ಜಾಸ್ತಿ ಆಗಲಿ ಮನೆಗೆ ಅದೃಷ್ಟ ಬರಲಿ ಮನೆ ಯವರ ಆರೋಗ್ಯ ಚೆನ್ನಾಗಿರಲಿ ಮಕ್ಕಳಿಗೆ ವಿದ್ಯಾಭ್ಯಾಸ ಚೆನ್ನಾಗಿರಲಿ ಅನ್ನುವ ಒಂದು ಸಂಕಲ್ಪದಿಂದ ಪರ್ವತವನ್ನು ಆಚರಣೆ ಮಾಡುತ್ತೇವೆ. ಇದನ್ನು ಮಾಡುವಾಗ ನಮಗೆ ಯಾವುದೇ ರೀತಿಯ ಆತಂಕ ದುಗುಡ ಇರಬಾರದು ಇದನ್ನು ಒಂದು ಮನಸ್ಸಿನಿಂದ ಮಾಡಬೇಕು ಅಂದರೆ ನಾವು ಹಿಂದಿನ ದಿನದ ಸಾಮಗ್ರಿಗಳನ್ನು ತಯಾರಿ ಮಾಡಿಕೊಳ್ಳಬೇಕು. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನಾವು ವರಮಹಾಲಕ್ಷ್ಮಿ ಹಬ್ಬವನ್ನು ಮಾಡುತ್ತೇವೆ. ಹುಣ್ಣಿಮೆ ಗಿಂತ ಮುಂಚೆ ಬರುವ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುತ್ತೇವೆ ಇದಕ್ಕೆಲ್ಲ ಸಾಮ ಗ್ರಿಗಳು ಬೇಕು ಎಂದರೆ ಹರಿಶಿಣ ಕುಂಕುಮ ಗಂಧ ಸುಗಂಧ ಬರಿತಾ ಹೂವುಗಳು ಫಲಗಳು ಮತ್ತು ಲಕ್ಷ್ಮಿ ಫೋಟೋ ಹೀಗೆ ಹಲವಾರು ಸಾಮಗ್ರಿಗಳು ಬೇಕಾಗುತ್ತದೆ.

ನಾವು ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿದ ನಂತರ ಪೂಜೆಯನ್ನು ಎಲ್ಲಾ ವಿಧಿವಿಧಾನದ ರೀತಿಯಲ್ಲಿ ಮಾಡುತ್ತೇವೆ ಮಾಡಿದ ನಂತರ ಒಂಬತ್ತು ಜನ ಮುತ್ತೈದೆಯರಿಗೆ ಅರಿಶಿನ ದಾರವನ್ನು ಕಟ್ಟಿ ಕೊಳ್ಳಲು ಕೊಡಬೇಕು ಅವರಿಗೆ ತಾಂಬೂಲವನ್ನು ಕೊಡಬೇಕು ತಾಂಬೂಲದಲ್ಲಿ ಅರಿಶಿನ-ಕುಂ ಕುಮ ಹೂ ಬಳೆ ದಕ್ಷಿಣೆ ಹಣ್ಣುಗಳನ್ನು ಇಟ್ಟು ಕೊಡಬೇಕು ಮತ್ತು ಬ್ಲೌಸ್ ಪೀಸ್ ಅನ್ನು ಕೊಡಬಹುದು ಬಳೆ ಅಥವಾ ಬ್ಲೌಸ್ ಪೀಸ್ ಅನ್ನು ಬೇರೆಯವರು ಕೊಟ್ಟಿದ್ದನ್ನು ಯಾವುದೇ ಕಾರಣಕ್ಕೂ ಮುತ್ತೈದೆ ಯರಿಗೆ ಕೊಡಬಾರದು ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನು ಯಾವುದೇ ಕಾರಣಕ್ಕೂ ಕೊಡಬಾರದು ಅವರಿಗೆ ಉಪಯೋಗಕ್ಕೆ ಬರುವಂತಹ ಬ್ಲೌಸ್ ಪೀಸನ್ನು 5 ಜನಕ್ಕೆ ಅಥವಾ ಒಂಬತ್ತು ಜನಕ್ಕೆ ಕೊಟ್ಟರೆ ಆ ತಾಯಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಅದರ ಬದಲಾಗಿ ಬೇರೆ ಯಾರು ಕೊಟ್ಟ ಬ್ಲೌಸ್ ಪೀಸ್ ಅಥವಾ ಪ್ಲಾಸ್ಟಿಕ್ ಸಾಮಾನನ್ನು ಕೊಟ್ಟರೆ ಅವರಿಗೆ ಮನೆಯಲ್ಲಿ ಕಷ್ಟ ತಪ್ಪಿದ್ದಲ್ಲ ಈ ರೀತಿಯಾದ ವಿಧಿವಿಧಾನಗಳಿಂದ ಲಕ್ಷ್ಮಿಯನ್ನು ಮನೆಯಲ್ಲಿ ಕೂರಿಸಿ ಪೂಜೆ ಮಾಡು ವುದರಿಂದ ಬಂದಂತಹ 9 ಮಹಿಳೆಯರಿಗೆ ಕೊಡುವುದರಿಂದ ನಮ್ಮ ಮನೆಯಲ್ಲಿ ಸಂಪತ್ತು ಸಮೃದ್ಧಿ ಆರೋಗ್ಯ ವೃದ್ಧಿಸುತ್ತದೆ ಮನೆಯಲ್ಲಿ ಯಾವಾಗಲೂ ನಗುನಗುತ್ತಾ ಖುಷಿಯಾಗಿ ಇರುತ್ತೇವೆ.