ತಿಂಗಳಲ್ಲಿ ಒಂದು ಉಂಡೆ ತಿಂದರೆ ಸಾಕು ಮೂಳೆಗಳ ಸವೆತ ಕಡಿಮೆ ಮಾಡುತ್ತದೆ.ಸಾಮಾನ್ಯವಾಗಿ ವಯಸ್ಸಾದಂತೆ ಮೂಳೆಗಳು ಸವೆಯಲು ಶುರುವಾಗುತ್ತೆ, ಕೆಲವೊಮ್ಮೆ ಸರಿಯಾದ ವಿಟಮಿನ್ ಸಿಗದೆ ಮೂಳೆಗಳು ಬಲಹೀನವಾಗುತ್ತದೆ ಅಂತಹ ಸಮಯದಲ್ಲಿ ನಾವು ಹೇಳುವ ಈ ಮನೆಮದ್ದನ್ನು ಮಾಡುವುದರಿಂದ ದೇಹಕ್ಕೆ ಆಗತ್ಯವಾಗಿರುವ ವಿಟಮಿನ್ಸ್ ಜೊತೆಗೆ ಮೂಳೆಗಳಿಗೆ ಶಕ್ತಿ ನೀಡುತ್ತದೆ. ಕ್ಯಾಲ್ಸಿಯಂ, ಐರನ್ ಕಂಟೆಂಟ್ ಮತ್ತು ದೇಹಕ್ಕೆ ಆಗತ್ಯವಾದ ಖನಿಜಾಂಶಗಳನ್ನು ಒಳಗೊಂಡಿರುವ ಈ ಪ್ರೋಟಿನ್ ಲಡ್ಡು ಮಾಡಲು ಬೇಕಾಗಿರುವ ವಸ್ತುಗಳು ಯಾವುವು ಅಂದರೆ, ಬಿಳಿ ಎಳ್ಳು, ಖರ್ಜೂರ, ಮತ್ತು ಒಣ ಕೊಬ್ಬರಿ. ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಅಷ್ಟು ಶಕ್ತಿವಂತರಾಗಿದ್ದು ಈ ತರಹದ್ದ ಮನೆ ಮದ್ದುಗಳಿಂದಲೇ.
ಇದನ್ನು ಮಾಡುವ ವಿಧಾನ ಮೊದಲಿಗೆ ಎಳ್ಳನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಹಾಕಿ ತುರಿ ತುರಿಯಾಗಿ ರುಬ್ಬಿಕೊಳ್ಳಿ, ನಂತರ ಒಣ ಕೊಬ್ಬರಿ ಅದನ್ನು ಸಹ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ, ಇದರ ಜೊತೆ ಖರ್ಜೂರ ವನ್ನು ತೆಗೆದುಕೊಂಡು ಮೂರನ್ನು ಒಟ್ಟಿಗೆ ಸೇರಿಸಿ ರುಬ್ಬಿ ನಂತರ ಇದು ಅಂಟು ಅಂಟು ತರಹ ಆಗುತ್ತದೆ ಆಗ ಅದನ್ನು ಉಂಡೆ ಮಾಡಿರಿ ಈಗ ರುಚಿಯಾದ ಆರೋಗ್ಯಕರವಾದ ಪ್ರೊಟೀನ್ ಲಡ್ಡು ರೆಡಿ. ಇದನ್ನು ಸೇವಿಸೊದರಿಂದ ದೇಹಕ್ಕೆ ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ ಮತ್ತು ರಕ್ತಹೀನತೆಯನ್ನು ದೂರ ಮಾಡುತ್ತದೆ, ಯಾರಿಗೆಲ್ಲ ಸಂದುಗಳಲ್ಲಿ ನೋವು, ಮೂಳೆಗಳ ನೋವು, ಋತುಮತಿಯಾದಾಗ ಸೊಂಟ ನೋವು ಬರುವಂತವರು ಸೇವಿಸಿದರೆ ಬಹಳನೆ ಒಳ್ಳೆಯದು. ನೋಡಿದ್ರಲ್ಲ ಮೂಳೆಗಳ ಸವೆತಕ್ಕೆ ಮನೆ ಮದ್ದನ್ನು ಮತ್ತಷ್ಟು ಆರೋಗ್ಯ ಮಾಹಿತಿಗಳಿಗೆ ಲೈಕ್ ಮಾಡಿ.
