ಇವತ್ತು ನಾವು ಹೀರೆಕಾಯಿ ವಾರದಲ್ಲಿ ಎರಡು ದಿನ ಸೇವಿಸುವುದರಿಂದ ನಮಗೆ ಆಗುವ ಉಪಯೋಗಗಳನ್ನು ಹೇಳುತ್ತೇವೆ. ಹೀರೆಕಾಯಿಯನ್ನು ನಾವು ಪ್ರತ್ಯೇಕವಾಗಿ ಪರಿಚಯ ಮಾಡುವ ಅಗತ್ಯವೇನಿಲ್ಲ ಏಕೆಂದರೆ ಪ್ರತಿಯೊಬ್ಬರೂ ಹೀರೆಕಾಯಿಯನ್ನು ಅಡುಗೆಯಲ್ಲಿ ವಿವಿಧ ರೀತಿಯಲ್ಲಿ ಸೇವಿಸಿರುತ್ತಾರೆ ಎಲ್ಲರಿಗೂ ಸುಲಭವಾಗಿ ಸಿಗುವ ಹೀರೆಕಾಯಿಯ ಬಗ್ಗೆ ಪ್ರತ್ಯೇಕವಾಗಿ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರುವುದಿಲ್ಲ ಇದರ ಉಪಯೋಗಗಳು ಏನು ಎಂದು ನಾವು ಈಗ ತಿಳಿಸುತ್ತೇವೆ. ಮುಖ್ಯವಾಗಿ ಮದ್ಯವನ್ನು ಸೇವಿಸುವವರ ಲಿವರ್ ಹಾಳಾಗಿರುತ್ತದೆ ಆದ್ದರಿಂದ ಆಲ್ಕೋಹಾಲನ್ನು ಸೇವಿಸುವವರು ಹೆಚ್ಚಾಗಿ ಹೀರೆಕಾಯನ್ನು ಸೇವಿಸುವುದರಿಂದ ಅವರ ಲಿವರ್ ಆರೋಗ್ಯವಾಗಿರುತ್ತದೆ ಹಾಗೆ ಮೊದಲೇ ಆಲ್ಕೋಹಾಲ್ ಇಂದ ಹೊಡೆತ ತಿಂದವವರೂ ಕೂಡ ಹೀರೆಕಾಯಿಯನ್ನು ವಾರದಲ್ಲಿ ಎರಡು ಬಾರಿ ಸೇವಿಸುವುದರಿಂದ ಕ್ರಮೇಣ ಲಿವರನ್ನು ಸರಿಪಡಿಸುತ್ತದೆ.
ಹಿರೇಕಾಯಿಯಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬೇಕು ಅನ್ನುವವರು ಹೀರೆಕಾಯಿಯನ್ನು ಸೇವಿಸಬೇಕು. ಹಾಗೇ ನಿಮ್ಮ ರಕ್ತವನ್ನು ಶುದ್ದಿ ಮಾಡುವುದರಲ್ಲಿ ಕೂಡ ಹೀರೆಕಾಯಿ ತುಂಬಾ ಸಹಾಯ ಮಾಡುತ್ತದೆ ಮುಖ್ಯವಾಗಿ ಹೀರೆಕಾಯಿಯಲ್ಲಿ ವಿಟಮಿನ್-ಸಿ, ಐರನ್,ಮೆಗ್ನೀಶಿಯಂ ಇನ್ನು ಮುಂತಾದ ಖಣಿಜ, ಲವಣಗಳು ಇರುವುದರಿಂದ ಇದು ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಹಾಗೆ ಮಹಿಳೆಯರು ಸರಿಯಾದ ಪೋಷಕಾಂಶ ಆಹಾರ ಸೇವಿಸದೇ ಇರುವುದರಿಂದ ರಕ್ತಹೀನತೆ ಉಂಟಾಗಿರುತ್ತದೆ ಇದಕ್ಕೆ ಕಾರಣ ಐರನ್ ಅಂಶ ನಮ್ಮ ದೇಹಕ್ಕೆ ಸಿಗದೇ ಇರುವುದು ಆದ್ದರಿಂದ ಹೀರೆಕಾಯಿಯನ್ನು ವಾರದಲ್ಲಿ ಎರಡು ಬಾರಿ ಸೇವಿಸುವುದರಿಂದ ನಿಮ್ಮ ಕೆಂಪು ರಕ್ತಕಣಗಳು ಹೆಚ್ಚಾಗುತ್ತದೆ.
ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಸೌಂದರ್ಯಕ್ಕೂ ಕೂಡ ಹೀರೇಕಾಯಿ ತುಂಬಾ ಸಹಾಯಕಾರಿಯಾಗಿದೆ ಪೋಷಕ ಆಹಾರಗಳ ಕೊರತೆಯಿಂದ ನಮ್ಮ ಚರ್ಮಕ್ಕೂ ಕೂಡ ಎಷ್ಟೋ ವಿಧವಾದ ಸಮಸ್ಯೆಗಳು ಬರುತ್ತಾ ಇರುತ್ತದೆ ಆದ್ದರಿಂದ ನೀವು ಹೆಚ್ಚಾಗಿ ಹೀರೆಕಾಯಿ ಸೇವಿಸುವುದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ ಮತ್ತು ಹೀರೆಕಾಯಿ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಮಧುಮೇಹದಿಂದ ಬಳಲುತ್ತಿರುವವರು ಹೀರೆಕಾಯಿಯನ್ನು ಸೇವಿಸಬೇಕು ಏಕೆಂದರೆ ಬ್ಲಡ್ ಮತ್ತು ಯೂರಿನಲ್ನಲ್ಲಿ ಇರುವ ಶುಗರ್ ಲೆವೆಲ್ನನ್ನು ಕಡಿಮೆ ಮಾಡುತ್ತದೆ. ಹಾಗೆ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ಕೂಡ ಹೀರೇಕಾಯಿ ಅದ್ಭುತವಾಗಿ ಕೆಲಸ ಮಾಡುತ್ತದೆ ಹಾಗೆಯೇ ಈಗಿನ ದಿನಗಳಲ್ಲಿ ಜನರು ಜಂಕ್ ಫುಡ್ ಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ ಆದ್ದರಿಂದ ವಿವಿಧ ರೀತಿಯ ಎಣ್ಣೆಗಳು ನಮ್ಮ ದೇಹಕ್ಕೆ ಸೇರುತ್ತದೆ .
ಆದ್ದರಿಂದ ಕರುಳಿಗೆ ಅಂಟಿಕೊಳ್ಳುತಿರುತ್ತದೆ ಆದ್ದರಿಂದ ಇದರ ಮೇಲೆ ಬ್ಯಾಕ್ಟೀರಿಯ ಮತ್ತು ಇತರ ಕ್ರಿಮಿಗಳು ಏರ್ಪಟ್ಟು ಅವು ನಮ್ಮ ಜೀರ್ಣ ವ್ಯವಸ್ಥೆಯನ್ನು ನಾಶ ಮಾಡುತ್ತದೆ ಆದ್ದರಿಂದ ಹೀರೆಕಾಯಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯನ್ನು ತಂಣಗೇ ಮಾಡಿ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೆ ಮಲಬದ್ಧತೆಯ ಸಮಸ್ಯೆ ಕೂಡ ನಿವಾರಣೆ ಮಾಡುತ್ತದೆ. ನಮ್ಮ ಶರೀರದ ಎಲ್ಲಾ ಭಾಗಗಳು ಆರೋಗ್ಯವಾಗಿ ಇರಬೇಕು ಅಂದರೆ ನೀವು ಹೀರೆಕಾಯಿಯನ್ನು ಸೇವಿಸಬೇಕು.