Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದಾರ್ಥವನ್ನು ಸರಿಯಾದ ರೀತಿ ಮಾಡಬೇಕು .ಆದರೆ ಪ್ರತಿಯೊಬ್ಬರು ಮನೆಯಲ್ಲಿ ಹಲವಾರು ವಸ್ತುಗಳನ್ನು ಆಹಾರವನ್ನು ತಯಾರಿಸಲು ಬಳಸುತ್ತಾರೆ ಅದರಲ್ಲಿ ಹಣ್ಣುಗಳು ತರಕಾರಿಗಳು ಮತ್ತು ಸೊಪ್ಪುಗಳು ಪ್ರಮುಖ ಪಾತ್ರವಹಿಸುತ್ತವೆ ಅದರಲ್ಲಿ ಸೊಪ್ಪನ್ನು ಪ್ರತಿಯೊಬ್ಬರೂ ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ .ಆದರೆ ಪ್ರತಿಯೊಬ್ಬ ಮನೆಯಲ್ಲಿ ಪುರಾತನ ಕಾಲದಿಂದ ನುಗ್ಗೆಸೊಪ್ಪು ಅನ್ನು ಬಳಸುತ್ತಾರೆ ಹಾಗೂ ನುಗ್ಗೆಕಾಯಿ ಪ್ರತಿಯೊಬ್ಬರು ಸಾಂಬಾರಿಗೆ ಬಳಸುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನುಗ್ಗೆ ಸೊಪ್ಪಿನಲ್ಲಿ ಹೆಚ್ಚಾಗಿ ಪೋಷಕಂಶಗಳು ಇದೆ. ಅದು ಯಾವುದೆಂದರೆ ಕ್ಯಾಲ್ಸಿಯಂ ವಿಟಮಿನ್ ಇದರಲ್ಲಿ ಕೊಬ್ಬಿನಂಶ ಕೂಡ ಇರುತ್ತದೆ ಹಾಗೂ ರಂಜಕ ಗುಣವನ್ನು ಹೊಂದಿರುತ್ತದೆ. ನಮ್ಮ ಭಾರತ ದೇಶದಲ್ಲಿ ನುಗ್ಗೆ ಸೊಪ್ಪಿನ ಗಿಡ ತೋಟದಲ್ಲಿ ಮತ್ತು ಮನೆಯ ಹಿತ್ತಲು ಗಳಲ್ಲಿ ಬೆಳೆಯುತ್ತದೆ ನುಗ್ಗೆಸೊಪ್ಪು 30 ರೋಗಗಳಿಗೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರ ನುಗ್ಗೆಕಾಯಿ ಮತ್ತು ನುಗ್ಗೆ ಸೊಪ್ಪನ್ನು ಮನೆಯಲ್ಲಿ ಬಳಸುತ್ತಾರೆ ಇದನ್ನು ಬಳಸಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನುಗ್ಗೆ ಸೊಪ್ಪಿನ ಗಿಡ ಹತ್ತರಿಂದ 15 ಅಡಿ ಗಿಡ ಬೆಳೆಯುತ್ತದೆ. ಈ ಗಿಡವನ್ನು ಇಂಗ್ಲಿಷ್ನಲ್ಲಿ ಡ್ರಮ್ಸ್ಟಿಕ್ ಎಂದು ಕರೆಯುತ್ತಾರೆ ಇನ್ನು ನುಗ್ಗೆಸೊಪ್ಪಿನ ಹೂವುಗಳಿಂದ ತುಂಬಾ ಉಪಯೋಗವಿದೆ ಹೂಗಳನ್ನು ಹಾಲಿನ ಜೊತೆ ಸ್ವಲ್ಪ ಹೊತ್ತು ಬೆರೆಸಿಕೊಂಡು ಕುಡಿದರೆ ನಿಮಗೆ ಪಿತ್ತ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ಯಾರು ನುಗ್ಗೆ ಸೊಪ್ಪನ್ನು ತುಂಬಾ ಚೆನ್ನಾಗಿ ಊಟ ಮಾಡುತ್ತಾರೆ ಅವರಿಗೆ ನರ ದೌರ್ಬಲ್ಯ ಮತ್ತು ಸಂಧಿವಾತ ಸಮಸ್ಯೆ ಬರುವುದಿಲ್ಲ ಆರೋಗ್ಯದಲ್ಲಿ ತುಂಬಾ ಉತ್ತಮವಾಗಿ ಇರುತ್ತಾರೆ .ಮತ್ತು ಯಾರಿಗೆ ಹೆಚ್ಚಾಗಿ ಕೆಮ್ಮು ಇರುತ್ತದೆ ಅವರಿಗೆ ನುಗ್ಗೆ ಸೊಪ್ಪು ರಸ ಜೊತೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿಕೊಂಡು ಕುಡಿದರೆ ಅವರಿಗೆ ಕೆಮ್ಮು ಹೋಗುತ್ತದೆ. ಹಾಗೂ ನುಗ್ಗೆ ಸೊಪ್ಪಿನ ರಸವನ್ನು ಸೇವನೆ ಮಾಡುವುದರಿಂದ ಪ್ರತಿಯೊಬ್ಬರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಹಲವಾರು ರೋಗಗಳಿಗೆ ನುಗ್ಗೆ ಸೊಪ್ಪು ತುಂಬಾ ಒಳ್ಳೆಯದು. ಯಾರಿಗೆ ಮೂಲವ್ಯಾಧಿ ಸಮಸ್ಯೆ ಇರುತ್ತದೆ ಅವರು ನುಗ್ಗೆ ಸೊಪ್ಪು ಎಲೆ ಮತ್ತು ಮೂಲಂಗಿಯನ್ನು ಚೆನ್ನಾಗಿ ಅರೆದು ಆ ಭಾಗಕ್ಕೆ ಹಚ್ಚಿದರೆ ತುಂಬಾ ಕಡಿಮೆಯಾಗುತ್ತದೆ ಹಾಗೂ ಯಾರಿಗೆ ಜಂತುಹುಳು ಸಮಸ್ಯೆ ಇರುತ್ತದೆ ಅವರಿಗೂ ನುಗ್ಗೆ ಬೀಜದ ಪುಡಿಯನ್ನು ಸ್ವಲ್ಪ ನೀರಿಗೆ ಹಾಕಿಕೊಂಡು ಕುಡಿದರೆ ಜಂತುಹುಳು ಸಮಸ್ಯೆ ನಿವಾರಣೆಯಾಗುತ್ತದೆ .ಯಾರಿಗೆ ಕೈ ಮದ್ದು ಹಾಕಿರುತ್ತಾರೆ ಅದನ್ನು ಕಂಡುಹಿಡಿಯಲು ನುಗ್ಗೆಸೊಪ್ಪಿನ ಚಿಗುರನ್ನು ಬಳಸಿಕೊಂಡು ಕಂಡುಹಿಡಿಯುತ್ತಾರೆ. ಯಾರಿಗೆ ಗಜಕರ್ಣ ಮತ್ತು ಮುಂತಾದ ಸಮಸ್ಯೆ ಇರುವವರಿಗೆ ನುಗ್ಗೆ ಕಾಯಿ ಬೀಜ ಮತ್ತು ಮೂಲಂಗಿ ಬೀಜವನ್ನು ಅರೆದು ಹಾಕುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಹೀಗೆ ಮಾಡುವುದರಿಂದ ದೇಹದಲ್ಲಿರುವ ರೋಗ ಗಳನ್ನು ನಿವಾರಣೆ ಮಾಡುವುದು. ಆದ್ದರಿಂದ ಪ್ರತಿಯೊಬ್ಬರು ನುಗ್ಗೆ ಸೊಪ್ಪನ್ನು ಸೇವನೆ ಮಾಡಿ ಹಾಗೂ ನುಗ್ಗೆಕಾಯಿ ಕೂಡ ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.