Thu. Sep 29th, 2022

ಇವತ್ತು ಬಾಣಂತಿಯರಿಗೆ ಬೇಕಾದಂತಹ ಮೆಂತ್ಯ ಗಂಜಿಯನ್ನು ಹೇಗೆ ಮಾಡುವುದು ಅದನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಈಗ ಆ ಗಂಜಿಯನ್ನು ಹೇಗೆ ಮಾಡುವುದು ಹೇಳುತ್ತೇನೆ. ಮೊದಲಿಗೆ ಒಂದು ಪಾತ್ರೆಗೆ ಒಂದು ದೊಡ್ಡ ಬಟ್ಟಲಿನ ಬೆಳ್ತಕ್ಕಿ ಹಾಕಿಕೊಳ್ಳಿ ಮತ್ತು ಕಾಲು ಕಪ್ ಸಣ್ಣ ಬಟ್ಟಲಿನಲ್ಲಿ ಮೆಂತೆಯನ್ನು ತೆಗೆದುಕೊಳ್ಳಬೇಕು. ಎರಡಕ್ಕೂ ಕೂಡ ನೀರನ್ನು ಬೆರೆಸಿಕೊಂಡು ತುಂಬಾ ಚೆನ್ನಾಗಿ ತೊಳೆದು ಕೊಳ್ಳಬೇಕು ತೊಳೆದುಕೊಂಡ ನಂತರ ಕುಕ್ಕರ್ ನಲ್ಲಿ ನೀರನ್ನು ಹಾಕಿ ಬೇಯಿಸಬೇಕು. ಇದು ಬಾಣಂತಿಯರಿಗೆ ತುಂಬಾ ಮುಖ್ಯವಾದ ಅಡುಗೆ ಎಂದು ಹೇಳಬಹುದು. ಮೆಂತ್ಯ ಇಂದ ಬಾಣಂತಿಯರಿಗೆ ತುಂಬಾ ಉಪಯೋಗ ಆಗುತ್ತದೆ ಅದೇನೆಂದರೆ ಅವರಿಗೆ ಹೆಚ್ಚು ಎದೆ ಹಾಲು ಬರುತ್ತದೆ. ಮಗುವಿಗೆ ಬೇಕಾದಂತಹ ಹಾಲಿನ ಪ್ರಮಾಣ ಹೆಚ್ಚಿದ ನವಾಗಿ ಸಿಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬ ಬಾಣಂತಿಯರಿಗೂ ಕೂಡ ಈ ಗಂಜಿಯನ್ನು ಕೊಡುತ್ತಾರೆ. ಇದರಿಂದ ಮಗುವಿಗೂ ಕೂಡ ತುಂಬಾ ಚೆನ್ನಾದ ಪೋಷಕಾಂಶ ಸಿಗುತ್ತದೆ. ಮಕ್ಕಳು ತುಂಬಾ ಚೆನ್ನಾಗಿ ಬೆಳೆಯುತ್ತವೆ ಮಕ್ಕಳ ಬಣ್ಣ ತುಂಬಾ ಹೊಳಪಿನಿಂದ ಹೊಂದಿರುತ್ತದೆ ಎಲ್ಲದಕ್ಕೂ ಕಾರಣ ಮಕ್ಕಳಿಗೆ ತಾಯಿಯ ಎದೆಹಾಲು ಮೊದಲು ಸರಿಯಾಗಿ ಪೋಷಕಾಂಶ ನೀಡಬೇಕು.

ಗಂಜಿಯನ್ನು ನೀವು ತುಪ್ಪದ ಜೊತೆಗೆ ತಿನ್ನಬೇಕು ತುಂಬಾ ಚೆನ್ನಾಗಿರು ತ್ತದೆ ಇದಕ್ಕೆ ನೀವು ಮುಖ್ಯವಾಗಿ ಎಚ್ಚು ಬೆಲ್ಲ ಹಾಕಬೇಕು ಗಂಜಿ ಸ್ವಲ್ಪಸಿಹಿ ಬರುತ್ತದೆ ಗಂಜಿ ಆಗಲೂ ನೀವು 2 ವಿಷಲ್ ತನಕ ಕಾ ಯಬೇಕಾಗುತ್ತದೆ ನಂತರ ಒಂದು ಮಿಕ್ಸಿ ಜಾರಿಗೆ ಕಾಯಿತುರಿ ಬೆಲ್ಲ ತುರಿ ಸ್ವಲ್ಪ ಸಕ್ಕರೆ ಸ್ವಲ್ಪ ನೀರು ತುಪ್ಪ ಬಣ್ಣಕ್ಕೆ ಅರಿಷಿಣ ಎಲ್ಲವನ್ನು ಕೂಡ ರುಬ್ಬಿಕೊಳ್ಳಬೇಕು ಅದಾದ ನಂತರ ಕುಕ್ಕರ್ ವಿಸಲ್ ಹೋದ ಮೇಲೆ ಎರಡಕ್ಕೂ ಸೇರಿಸಿ ಮಿಕ್ಸ್ ಮಾಡಬೇಕು ನಂತರ ಅದಕ್ಕೆ ಇನ್ನೂ ಸ್ವಲ್ಪ ತುಪ್ಪವನ್ನು ಬೆರೆಸಿ ಪ್ರತಿದಿನ ನೀವು ಬೆಳಗ್ಗೆ ಒಂದು ಲೋಟ 1:00 ಲೋಟ ಸಂಜೆ ಒಂದು ಲೋಟ ಕುಡಿಯುತ್ತಾ ಬಂದರೆ ಮಗುವಿಗೆ ಒಳ್ಳೆಯ ಎದೆಹಾಲು ಸಿಗುತ್ತದೆ. ಕೆಲವರಿಗೆ ಎದೆಹಾಲು ಬರುವ ಸಮಸ್ಯೆ ಇರುತ್ತದೆ ಅಂತವರು ಇದನ್ನು ಎರಡು ಲೋಟ ಕುಡಿದರೆ ಮತ್ತಷ್ಟು ಒಳ್ಳೆಯದು.