Fri. Sep 29th, 2023

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಯವರು ರಾಜ್ಯದಾದ್ಯಂತ ಇರುವ ಎಲ್ಲ ಗರ್ಭಿಣಿ ಮಹಿಳೆಯರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಮಾತೃವಂದನಾ ಯೋಜನೆಯ ಮೂಲಕ ಆರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಹಾಗೂ ಇದೇ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರದಿಂದ ಕೂಡ ಗರ್ಭಿಣಿ ಇರುವ ಮಹಿಳೆಯರಿಗೆ ಮಾತೃಶ್ರೀ ಯೋಜನೆಯ ಮೂಲಕ ಈಗಾಗಲೇ ಐದು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಒಟ್ಟು ಗರ್ಭಿಣಿ ಇರುವ ಬಡ ಮಹಿಳೆಯರಿಗೆ ಕೇಂದ್ರ ಸರಕಾರದಿಂದ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ಸೇರಿ ಒಟ್ಟು 11 ಸಾವಿರ ರೂಪಾಯಿಗಳನ್ನು ಈಗಾಗಲೇ ನೀಡಲಾಗುತ್ತಿದೆ.

ಮತ್ತು ಇದೇ ರೀತಿಯಲ್ಲಿ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಶಶಿಕಲಾ ಜೊಲ್ಲೆಯವರು ಮತ್ತೊಮ್ಮೆ ರಾಜ್ಯದ ಎಲ್ಲಾ ಗರ್ಭಿಣಿ ಇರುವ ಮಹಿಳೆಯರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ ರಾಜ್ಯ ಸರ್ಕಾರವು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಅಂಗನವಾಡಿಗಳು ತೆರೆದ ಬಳಿಕ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುವುದು ಎಂದು ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಕರೋನೋ ಹಿನ್ನೆಲೆ ಅಂಗನವಾಡಿ ಕೇಂದ್ರಗಳು ಮುಚ್ಚಿರುವುದರಿಂದ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆ ಬಾಗಿಲಿಗೆ ಕಚ್ಚಾ ಆಹಾರ ಪದಾರ್ಥಗಳನ್ನು ವಿತರಿಸಲಾಗಿತ್ತು ಅಂಗನವಾಡಿ ಕೇಂದ್ರಗಳು ತೆರೆದ ಬಳಿಕ ಎಂದಿನಂತೆ ಬಿಸಿಯೂಟ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬದಲ್ಲಿ ಗರ್ಭಿಣಿ ಇರುವ ಮಹಿಳೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹನ್ನೊಂದು ಸಾವಿರ ರೂಪಾಯಿಗಳ ಸಹಾಯ ಧನವನ್ನು ಪಡೆದಿಲ್ಲ ವೆಂದರೆ ಈಗಲೇ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳಿ.