ಪ್ರತಿಯೊಬ್ಬರು ಭೀಮನ ಅಮಾವಾಸ್ಯೆ ಬಂತೆಂದರೆ ವಿಶೇಷವಾದ ಪೂಜೆ ಮನೆಯಲ್ಲಿ ಮಾಡುತ್ತಾರೆ. ಪ್ರತಿಯೊಬ್ಬ ಹೆಂಗಸು ತನ್ನ ಗಂಡನಿಗೆ ವಿಶೇ ಷವಾದ ಪಾದ ತೊಳೆಯುವ ಪೂಜೆ ಮಾಡುತ್ತಾರೆ. ಯಾವ ರೀತಿ ಪೂಜೆ ಮಾಡುವುದು ವಿಧಾನದ ಬಗ್ಗೆ ತಿಳಿಯೋಣ ಈಶ್ವರ ಪಾರ್ವತಿ ಫೋಟೋ ಮನೇಲಿ ಇಟ್ಟು ಅದಕ್ಕೆ ಸ್ವಲ್ಪ ಹೂವನ್ನು ಹಾಕಿ ದೇವರ ಫೋಟೋ ಮುಂದೆ ಬೆಳ್ಳಿ ದೀಪವನ್ನು ಇಟ್ಟು ಅದಕ್ಕೆ ಅಲಂಕೃತವಾಗಿ ಹೂವನ್ನು ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಓಂ ಎಂದು ಬರೆಯಬೇಕು ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ ಹಾಗೂ ವನ್ನು ಹಾಕಿ ಪೂಜೆ ಮಾಡಬೇಕು. ನಂತರ ಎರಡು ಬೆಳ್ಳಿ ದೀಪವನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಕೊಂಬನ್ನು ದಾರವನ್ನು ಕಟ್ಟಬೇಕು. ಕೆಲವರ ಮನೆಯಲ್ಲಿ ಕಟ್ಟುತ್ತಾರೆ ಕೆಲವರ ಮನೆಯಲ್ಲಿ ಕಟ್ಟುವುದಿಲ್ಲ ಆದರೆ ಕಟ್ಟಿದರೆ ತುಂಬಾ ಒಳ್ಳೆಯದು ಹೂವನ್ನು ಹಾಕಿ ಪೂಜೆ ಮಾಡಬೇಕು.
ನಂತರ ಎಲೆ ಅಡಿಕೆ ಇಟ್ಟುಕೊಂಡು ಅರಿಶಿನ ದಾರವನ್ನು ಅಲ್ಲಿ ಇಟ್ಟು ಕೊಳ್ಳಬೇಕು ಹಾಗೂ ಕೈಗೆ ಕಟ್ಟುವ ಕಂಕಣವನ್ನು ನೀವು ತಯಾರು ಮಾಡಿಕೊಳ್ಳಬೇಕು. ಗಂಧದ ಕಡ್ಡಿ ಯನ್ನು ಹಚ್ಚಿಕೊಂಡು ಪೂಜೆ ಮಾಡಬೇಕು ನಂತರ ಪೂಜೆ ಮಾಡಿದ ಮೇಲೆ ಗಂಡ ಹೆಂಡತಿ ಕಂಕಣ ಅ ನ್ನು ಕೈಗೆ ಕಟ್ಟಬೇಕು ವಿಶೇಷವಾಗಿ ನಂತರ ಗಣಪತಿಗೆ ಪೂಜೆ ಮಾಡಬೇಕು .ಅಂದರೆ ಮೊದಲಿಗೆ ಗಣಪತಿಗೆ ಪೂಜೆ ಮಾಡಿ ನಂತರ ಈ ಪೂಜೆ ಮಾಡಬೇಕು ನಂತರ ಶಿವನಿಗೆ ಮುಂದೆ ಕಾಯನ್ನು ಹೊ ಡೆಯಬೇಕು ನಂತರ ಕರ್ಪೂರದಿಂದ ಮಂಗಳಾರತಿ ಮಾಡಬೇಕು ಆಗ ಎಲ್ಲ ಪೂಜೆ ಮುಗಿಯುತ್ತದೆ. ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಗಂಡ-ಹೆಂಡತಿಯರು ಜೀವನದಲ್ಲಿ ತುಂಬಾ ಎಷ್ಟೇ ಕಷ್ಟ ಸುಖ ಬಂ ದರೂ ಜೀವನದಲ್ಲಿ ಸಹಭಾಗಿಯಾಗಿ ಇರುತ್ತಾರೆ ಜ್ಯೋತಿ ಭೀಮೇಶ್ವರ ಪೂಜೆ ಮಾಡುವುದು ತುಂಬಾ ಒಳ್ಳೆಯದು.