Sun. Sep 24th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಆರೋಗ್ಯದಿಂದ ಸಮಸ್ಯೆ ಪ ಡುತ್ತಿದ್ದಾರೆ ಅದರಲ್ಲೂ ವಯಸ್ಕರು ಮತ್ತು ವೃದ್ಧರು ಅತಿ ಹೆಚ್ಚಾಗಿ ಸಮಸ್ಯೆ ಪಡುತ್ತಿದ್ದಾರೆ ಪ್ರತಿಯೊಬ್ಬರಿಗೂ ಸೊಂಟ ನೋವು ಮಂಡಿ ನೋವು ಕಾಲು ನೋವು ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಾರೆ. ಹಾಗಾದರೆ ಈ ಸಮಸ್ಯೆಗಳಿಗೆ ನಮ್ಮ ಪರಿಸರದಲ್ಲಿ ಸಿಗುವಂತಹ ನೈಸರ್ಗಿಕವಾದ ಆಯುರ್ವೇದ ಮನೆಮದ್ದು ಯಾವುದು ಮತ್ತು ಅದನ್ನು ಹೇಗೆ ತಯಾರಿಸಿಕೊಳ್ಳುವುದು ತಿಳಿದುಕೊಳ್ಳೋಣ ಬನ್ನಿ. ನಾನು ಔಷಧಿ ತಯಾರಿಸಲು ಪಾರಿಜಾತದ ಗಿಡದ ಎಲೆಯನ್ನು ಉಪಯೋಗಿಸುತ್ತೇನೆ. ಪಾರಿಜಾತ ಗಿಡದಲ್ಲಿ ಎಷ್ಟೊಂದು ಔಷಧಿಗುಣ ಇದೆಯೆಂದರೆ ಎಲೆ ತೊಗಟೆ ಕಾಂಡ ಬೇರು ಪ್ರತಿಯೊಂದು ಭಾಗದಿಂ ದಲೂ ಇದು ಔಷಧಿ ಗುಣವನ್ನು ಹೊಂದಿದೆ. ಹಾಗಾಗಿ ನಾವು ಈ ಎಲೆಯಿಂದ ಕಷಾಯವನ್ನು ಮಾಡಿಕೊಂಡು ಕುಡಿದರೆ ನಮ್ಮ ಬೆನ್ನುಮೂ ಳೆ ನೋವು ಬರುವುದು ಮಂಡಿ ನೋವು ಬರುವುದು ಕಾಲು ಸೆಳೆತ ಎಲ್ಲಾ ನೋವುಗಳಿಗೆ ಈ ಎಲೆಯ ಕಷಾಯ ರಾಮಬಾಣ ಅಂತಾನೆ ಹೇಳಬಹುದು.

ಇವಾಗ ನಾನು ಈ ಎಲೆಗಳ ಕಷಾಯ ಮಾಡುವುದು ಹೇಗೆ ಎಂದು ತಿಳಿಸಿ ಕೊಡುತ್ತೇನೆ. ಮತ್ತು ಎಷ್ಟು ದಿವಸ ಕುಡಿಯಬೇಕು ಯಾವ ಸಮಯಕ್ಕೆ ಕುಡಿಯಬೇಕು ಎಂದು ನಾನು ತಿಳಿಸಿಕೊಡುತ್ತೇನೆ. ಮತ್ತು ಕೆಲವೊಬ್ಬರಿಗೆ ಕೈಬೆರಳುಗಳು ಹಿಡಿದುಕೊಂಡಿರುತ್ತದೆ ಅಂತವರಿಗೆ ಈ ಕಷಾಯವನ್ನು ಮಾಡಿ ಕುಡಿದರೆ ಅದು ಬಿಟ್ಟು ಹೋಗುತ್ತದೆ. ಎಲೆಗಳ ನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಂದು ಬಾರಿ ಕಷಾಯಕ್ಕೆ ಹೇಳು ಎಲೆಗಳನ್ನು ತೆಗೆದುಕೊಳ್ಳಬೇಕು ಎಲೆಗಳನ್ನು ಸಣ್ಣದಾಗಿ ಕಟ್ ಮಾಡಿ ಕೊಂಡು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ಈಗ ದೊಡ್ಡ ಲೋಟದಲ್ಲಿ ಒಂದು ಲೋಟ ನೀರನ್ನು ತೆಗೆದುಕೊಂಡಿ ದ್ದೇನೆ ಆ ಮಿಶ್ರಣದ ಜೊತೆಗೆ ಒಂದು ಲೋಟ ನೀರನ್ನು ಹಾಕಿ ಸ್ಟೌವ್ ಮೇಲೆ ಪಾತ್ರೆಗೆ ಹಾಕಿ ಇಡಬೇಕು. ಅದನ್ನು ಅದರ ಸಾರ ಬಿಡುವ ತನಕ ಚೆನ್ನಾಗಿ ಕುದಿಸಿ ಕೊಳ್ಳಬೇಕು. ಇವಾಗ ಒಂದು ಲೋಟಕ್ಕೆ ಸೋಸಿ ಕೊಳ್ಳೋಣ. ಇವಾಗ ಅದು ಒಂದು ಲೋಟ ಇದ್ದ ಕಷಾಯ ಅರ್ಧ ಲೋಟಕ್ಕೆ ಬಂದಿದೆ. ಇದನ್ನ ಇವಾಗ ಕುಡಿಯುವ ಹಾಗಿಲ್ಲ ಸಂಜೆ ಹೊತ್ತು ಮಾಡಿ ರಾತ್ರಿ ಪೂರ್ತಿ ಒಂದು ತಟ್ಟೆ ಮುಚ್ಚಿ ಇಡ ಬೇಕು ನಂತರ ಬೆಳಿಗ್ಗೆ ಆದಮೇಲೆ ಖಾಲಿ ಹೊಟ್ಟೆಯಲ್ಲಿ ಬರಿ 20 ಎಂ ಎಲ್ ಮಾತ್ರ ಕುಡಿಯಬೇಕು ಏಕೆಂದರೆ ಇದರಲ್ಲಿ ಅತಿಯಾದ ಉಷ್ಣ ಇದೆ ಅದಕ್ಕಾಗಿ 20ml ಕಷಾಯದ ಜೊತೆ ಸ್ವಲ್ಪ ತುಪ್ಪವನ್ನು ಸೇರಿಸಿ ಒಂದು ವಾರ ಕುಡಿಯಬೇಕು ನಂತರ ಮೂರು ದಿನ ಬಿಟ್ಟು ನಂತರ ಮತ್ತೊಂದು ವಾರ ಕುಡಿಯಬೇಕು ಈ ರೀತಿ ಮಾಡುವುದರಿಂದ ಮಂಡಿನೋವು ಬೆನ್ನು ನೋವು ಸೊಂಟ ನೋವು ಕೈ ಕಾಲು ಸೆಳೆತ ಕಡಿಮೆಯಾಗುತ್ತದೆ.