Fri. Dec 8th, 2023

ಮನಸ್ಸಲ್ಲಿ ನಾನಾ ಕೆಟ್ಟ ಆಲೋಚನೆ ‌ನಕಾರಾತ್ಮಕ ಚಿಂತನೆಗಳು ಆಗಾಗ ಬರ್ತಾ ಇದ್ರೆ ಈ ವಿಡಿಯೋ ನಿಮಗಾಗಿ.ಈ ನೆಗೆಟಿವ್ ಆಲೋಷನೆಗಳನ್ನು ಏನೆ ಮಾಡಿಸಿದ್ರು ನಿಲ್ಲಿಸೋಕೆ ಆಗೊದಿಲ್ಲ ಅಂದಾಗ ಏನ್ ಮಾಡಬೇಕು.ಈ ನೆಗೆಟಿವ್ ಯೋಚನೆಗಳನ್ನು ನಾವು ಬೇರೆ ದೃಷ್ಟಿಯಿಂದ ನೋಡೊಣ.ನಾವು ನಿಮಗೆ 2 ವಿಧಾನಗಳನ್ನು ಹೇಳಿಕೊಡ್ತಿವಿ.ಇಂಗ್ಲೀಷಲ್ಲಿ ಒಂದು‌ ಪದ ಇದೆ GIGO ಅಂದರೆ Garbage in and Garbage Out.ಇದೆ ವಿಧಾನದಲ್ಲಿ ನಮ್ಮ ಮೆದುಳು ಸಹ ಕೆಲಸ ಮಾಡೋದು.ಒಂದು ವೇಳೆ ನಿಮ್ಮ ಮೆದುಳಿಗೆ ನಕಾರಾತ್ಮಕ ಆಲೋಚನೆ ತುಂಬಿಕೊಂಡರೆ ಹೊರಗೆ ಬರೋದು ಸಹ ನೆಗಿಟಿವ್ ಆಲೋಚನೆಗಳೆ.ಹಾಗೆಯೇ ನಿಮ್ಮ ಮೆದುಳಿನ ಹಾರ್ಡ್ ಡಿಸ್ಕನಲ್ಲಿ ಒಳ್ಳೆಯ ಆಲೋಚನೆ ಬಂದರೆ ನಿಮ್ಮ ಆಲೋಚನೆಗಳು ಹಾಗೂ ಮಧುರವಾದ ಯೋಚನೆಗಳೆ ಬರುತ್ತದೆ.ಅದಕ್ಕಾಗಿಯೇ ನಾವು ಯಾವಾಗಳು ತುಂಬಾ ಜಾಗೃತರಾಗಿರಬೇಕು.ಆಗ ಮಾತ್ರ ಈ ನೆಗಿಟಿವ್ ಆಲೋಚನೆಗಳಿಂದ ನಾವು ಸುಲಭವಾಗಿ ಹೊರಬರಬಹುದು.ಈ ಕೆಳಗಿನ ವಿಡಿಯೋ ಮಿಸ್ ಮಾಡ್ಕೊಬೇಡಿ..

ನಮ್ಮ ಮನಸ್ಸಿನ ಹಾರ್ಡ್ ಡಿಸ್ಕ್ ಅಂದರೆ ಅಂತರ್ಮನ ಅಂತ ಕರಿತಿವಿ‌.ಅದನ್ನು ಶುದ್ದಿ ಮಾಡಿಕೊಳ್ಳುವ ಅವಶ್ಯಕತೆ ಖಂಡಿತವಾಗಿ ಇದೆ.ನೀವು ಯಾವಾಗಲೂ ಕೆಟ್ಟ ಆಲೋಚನೆ ಮಾಡ್ತಾ ಇದ್ರೆ ಆ ಕೆಟ್ಟ ಆಲೋಚನೆಗೆ ಮತ್ತಷ್ಟು ಪವರ್ ನೀವೆ ಕೊಡ್ತೀರಾ.ಆದರೆ ಇಂತಹ ತಪ್ಪನ್ನು ಮಾಡಲೆಬಾರದು.ಅಂತಹ ಸಂದರ್ಭದಲ್ಲಿ ಒಬ್ಬ ತಿಳುವಳಿಕೆ ಇರುವ ವ್ಯಕ್ತಿಯ ಜೊತೆ ಅಂದರೆ ಯಾರು ನಿಮ್ಮ ಮಾತನ್ನು ಕೇಳ್ತಾರೋ ಅವರ ಜೊತೆ,ಯಾರು ನಿಮಗೆ ಒಳ್ಳೆಯ ಮಾರ್ಗದರ್ಶಿ ಅಂತ ಅನ್ನಿಸ್ತಾರೆ ಅವರ ಜೊತೆ ನಿಮ್ಮ ಭಾವನೆಗಳನ್ನ ಶೇರ್ ಮಾಡ್ಕೊಬೇಕು.ಅದರಿಂದ ಈ ನೆಗಿಟಿವ್ ಆಲೋಚನೆಗಳು ಕ್ರಮೇಣ ಕಡಿಮೆ ಆಗುತ್ತೆ.ಮಹಾಭಾರತದಲ್ಲಿ ಅರ್ಜುನ ತನ್ನ ಗೊಂದಲಗಳನ್ನು ಶ್ರೀ ಕೃಷ್ಣನಲ್ಲಿ ತೋಡಿಕೊಳ್ತಾನೆ.ಹಾಗೂ ತನ್ನ ಮನಸ್ಸನ್ನ ಖಾಲಿ ಮಾಡ್ಕೊತ್ತಾನೆ.ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಸಾರ ಕೊಡ್ತಾರೆ.ಅದಕ್ಕಾಗಿಯೇ ನಮ್ಮ ಮನಸ್ಸಿನ ನೋವನ್ನು ನಮಗೆ ಹತ್ತಿರ ಆಗುವ ಅಥವಾ ತಿಳುವಳಿಕೆ ಇರುವ ವ್ಯಕ್ತಿಯ ಜೊತೆ ಶೇರ್ ಮಾಡಿಕೊಂಡರೆ ತುಂಬಾ ಒಳ್ಳೆಯದು.ಈ ಕೆಳಗಿನ ವಿಡಿಯೋ ಮಿಸ್ ಮಾಡ್ಕೊಬೇಡಿ..

ತಪ್ಪದೇ ಒಂದೊಂದು ಶೇರ್ ಮಾಡಿ…