Sat. Mar 25th, 2023

ಗ್ಯಾಸ್ ಬರ್ನರ್ ಅನ್ನು ಸುಲಭವಾಗಿ ಸ್ವಚ್ಚಗೊಳಿಸುವ ವಿಧಾನ….

ಸಾಮಾನ್ಯವಾಗಿ ನಾವು ಪ್ರತಿ ನಿತ್ಯ ಅಡುಗೆ ಮನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತವೆ ವಿವಿಧ ರೀತಿಯಾದಂತಹ ಆಹಾರ ಪದಾರ್ಥಗಳನ್ನು ತಯಾರು ಮಾಡುವ ಸ್ಥಳ ಅಡುಗೆ ಮನೆಯಾಗಿದೆ. ಹಾಗಾಗಿ ನಾವು ಅಡುಗೆ ಮನೆ ಸ್ವಚ್ಛತೆ ಹಾಗೂ ಗ್ಯಾಸ್ ಬರ್ನರ್ ಗಳ ಸ್ವಚ್ಛತೆಯ ಬಗ್ಗೆ ಹೆಚ್ಚಾಗಿ ಗಮನವನ್ನು ಹರಿಸಬೇಕಾಗುತ್ತದೆ. ನಾವು ಹೆಚ್ಚಾಗಿ ಅಡಿಗೆ ಮಾಡಿದಂತೆ ಗ್ಯಾಸ್ ಬರ್ನರ್ ಸುತ್ತ ಕಲೆಗಳು ಹೆಚ್ಚಾಗಿ ಕಾಣುತ್ತದೆ. ಹಾಗಾಗಿ ಈ ಕಲೆಗಳನ್ನು ಸುಲಭವಾಗಿ ಯಾವ ರೀತಿಯಲ್ಲಿ ತೊಲಗಿಸಬಹುದು ಎಂಬುದನ್ನು ನಿಮಗೆ ಇಂದು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಈ ಒಂದು ಗ್ಯಾಸ್ ಬರ್ನರ್ ಕ್ಲೀನ್ ಮಾಡಲು ನಿಮಗೆ ಬೇಕಾಗುವ ಪದಾರ್ಥಗಳು ನಿಂಬೆಹಣ್ಣಿನ ರಸ ಮತ್ತು

ಈನೋ ಪೌಡರ್ ಬಿಸಿನೀರು ಈ ಮೂರು ಪದಾರ್ಥಗಳು ಇದ್ದರೆ ಸಾಕು ಸ್ವಚ್ಛಂದವಾಗಿ ನಿಮ್ಮ ಗ್ಯಾಸ್ ಬರ್ನರ್ ಗಳನ್ನು ಸ್ವಚ್ಛಗೊಳಿಸಬಹುದು.ಮೊದಲಿಗೆ ಒಂದು ಪಾತ್ರೆಗೆ ಎರಡು ಗ್ಲಾಸ್ ನಷ್ಟು ಬಿಸಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಗ್ಯಾಸ್ ಆಫ್ ಮಾಡಿ ಹಾಕಿ ನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಮತ್ತು ಒಂದು ಪೂರ್ತಿ ಇನೋ ಪ್ಯಾಕೆಟ್ ಅನ್ನು ಹಾಕಿ ಗ್ಯಾಸ್ ಬರ್ನರ್ ಅನ್ನು ಅದರ ಒಳಗೆ ಹಾಕಿ. ಎರಡು ಗಂಟೆಗಳ ಕಾಲ ಅದನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಯಲು ಬಿಡಬೇಕು. ನಂತರ ಇದನ್ನು ನಾವು ಪ್ರತಿನಿತ್ಯ ಉಪಯೋಗ ಮಾಡುವಂತಹ ಡಿಶ್ ವಾಶ್ ಮತ್ತು ಬ್ರಶ್ ನಿಂದ ಚೆನ್ನಾಗಿ ತಿಕ್ಕಬೇಕು ಹೀಗೆ ಮಾಡಿದರೆ ಎಷ್ಟೇ ಹಳೆಯದಾದ ಕಲೆಗಳು ಇದ್ದರೂ ಕೂಡ ಅವೆಲ್ಲವೂ ಹೋಗಿ ಬರ್ನರ್ ಹೊಸದರಂತೆ ಹೊಳೆಯುತ್ತದೆ.